ಹೈದರಾಬಾದ್: ಭಾರತ ಮತ್ತು ಕೆನಡಾ ನಡುವಿನ ನಿನ್ನೆಯ (ಶನಿವಾರ) ಪಂದ್ಯ ಟಾಸ್ ಕಾಣದೆ ರದ್ದಾಯಿತು. ಪಂದ್ಯಾರಂಭಕ್ಕೂ ಮುನ್ನ ಸುರಿದ ಮಳೆಯಿಂದಾಗಿ ಅಮೆರಿಕದ ಫ್ಲೋರಿಡಾದ ಇಡೀ ಮೈದಾನ ಒದ್ದೆಯಾಗಿತ್ತು. ಪಂದ್ಯ ನಡೆಸಲು ಒಂದೂವರೆ ಗಂಟೆ ಕಾಯಲಾಗಿತ್ತು. ಆದಾಗ್ಯೂ, ಅಂಪೈರ್ಗಳು ಎರಡು ಬಾರಿ ಫೀಲ್ಡ್ ಪರಿಶೀಲಿಸಿ ಅಂತಿಮವಾಗಿ ಪಂದ್ಯ ರದ್ದುಗೊಳಿಸುವ ತೀರ್ಮಾನ ಕೈಗೊಂಡರು.
ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ನೀಡಲಾಗಿದೆ. ಈಗಾಗಲೇ ಟೀಂ ಇಂಡಿಯಾ ಗ್ರೂಪ್ ಹಂತದ ಪಂದ್ಯಗಳಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದು ಸೂಪರ್ 8ಗೆ ಪ್ರವೇಶಿಸಿದೆ. ಕೆನಡಾ 3 ಪಂದ್ಯಗಳ ಪೈಕಿ 1ರಲ್ಲಿ ಮಾತ್ರ ಗೆದ್ದು ಲೀಗ್ನಿಂದ ಹೊರಬಿದ್ದಿದೆ. ಹಾಗಾಗಿ ಎರಡೂ ತಂಡಗಳಿಗೆ ಇದು ಕೇವಲ ಔಪಚಾರಿಕ ಪಂದ್ಯವಷ್ಟೇ ಆಗಿತ್ತು.
ಸೂಪರ್-8, ಅಫ್ಘಾನಿಸ್ತಾನ vs ಭಾರತ:ಸೂಪರ್-8 ಹಂತದಲ್ಲಿ ಭಾರತ ಜೂ.20ರಂದು ಬಾರ್ಬಡೋಸ್‌ನಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಜೂ.22ರಂದು ಆಂಟಿಗುವಾದಲ್ಲಿ, ಬಾಂಗ್ಲಾದೇಶ/ನೆದರ್ಲ್ಯಾಂಡ್ಸ್ ತಂಡಗಳಲ್ಲಿ ಒಂದನ್ನು ಎದುರಿಸಲಿದೆ. ಜೂ.24ರಂದು ಸೇಂಟ್ ಲೂಸಿಯಾದಲ್ಲಿ ಆಸ್ಟ್ರೇಲಿಯಾದೊಂದಿಗೆ ಸೆಣಸಲಿದೆ.