ನವದೆಹಲಿ:ಜೂನ್ 2 ರಿಂದ ಅಂತಾರಾಷ್ಟ್ರೀಯ ಟಿ20 ವಿಶ್ವಕಪ್ ಶುರು ಆಗಲಿದ್ದು, ಈ ಟೂರ್ನಿಗೆ ಪಾಕಿಸ್ತಾನ ಹೊರತು ಪಡಿಸಿ ಈಗಾಗಲೇ 19 ದೇಶಗಳು ತಮ್ಮ ತಂಡಗಳನ್ನು ಪ್ರಕಟಿಸಿವೆ. ಪ್ರಕಟಿಸಿರುವ ತಂಡಗಳಲ್ಲಿ ಬದಲಾವಣೆ ಬಯಸಿದ್ದಲ್ಲಿ ಮೇ 25 ರವರೆಗೂ ಅದಕ್ಕೆ ಅವಕಾಶ ಇದೆ. ಈ ಅವಧಿ ಒಳಗೆ ಬದಲಾವಣೆ ಮಾಡಿಕೊಳ್ಳಬಹುದು ಎಂದು ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ) ತಿಳಿಸಿದೆ.
ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಜಂಟಿ ಆತಿಥ್ಯದಲ್ಲಿ ಜೂನ್ 2 ರಿಂದ ಆರಂಭವಾಗುವ 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಜೂನ್ 29 ರಂದು ಮುಕ್ತಾಯವಾಗಲಿದೆ. ನಾಲ್ಕು ಗುಂಪು ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಸಹ ಐಸಿಸಿ ಈಗಾಗಲೇ ಪ್ರಕಟಿಸಿದೆ. ಜೂನ್ 1 ರಂದು ಉದ್ಘಾಟನಾ ಪಂದ್ಯ ಆತಿಥೇಯ ಯುಎಸ್ಎ ಹಾಗೂ ಕೆನಡಾ ನಡುವೆ ನಡೆದರೆ, ಬಹು ನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.
ಬದಲಾವಣೆಗೆ ಮಾಡಿಕೊಳ್ಳಬಹುದಾದ ದೇಶಗಳು: ಆಡುವ 20 ದೇಶಗಳ ತಂಡಗಳಲ್ಲಿ 19 ದೇಶಗಳು ಈಗಾಗಲೇ ತಮ್ಮ ತಂಡವನ್ನು ಪ್ರಕಟಿಸಿವೆ. ಪಾಕಿಸ್ತಾನ ತನ್ನ ತಂಡವನ್ನು ಪ್ರಕಟಿಸಬೇಕಿದೆ. ಪ್ರಕಟಿಸಿರುವ ಪಟ್ಟಿಯಲ್ಲಿ ಬದಲಾವಣೆ ಬಯಸಿದ್ದರೆ ಮೇ 25 ರವರೆಗೆ ಅವಕಾಶ ನೀಡಲಾಗಿದೆ ಎಂದು ಐಸಿಸಿ ತಿಳಿಸಿದೆ.
- ಭಾರತ
- ಪಾಕಿಸ್ತಾನ (ತಂಡವನ್ನು ಪ್ರಕಟಿಸಿಲ್ಲ)
- ಐರ್ಲೆಂಡ್
- ಕೆನಡಾ
- ಯುಎಸ್ಎ
- ಇಂಗ್ಲೆಂಡ್
- ಆಸ್ಟ್ರೇಲಿಯಾ
- ನಮೀಬಿಯಾ
- ಸ್ಕಾಟ್ಲೆಂಡ್
- ಓಮನ್
- ನ್ಯೂಜಿಲ್ಯಾಂಡ್
- ವೆಸ್ಟ್ ಇಂಡೀಸ್
- ಅಫ್ಘಾನಿಸ್ತಾನ
- ಉಗಾಂಡಾ
- ಪಪುವಾ ನ್ಯೂ ಗಿನಿಯಾ
- ದಕ್ಷಿಣ ಆಫ್ರಿಕಾ
- ಶ್ರೀಲಂಕಾ
- ಬಾಂಗ್ಲಾದೇಶ
- ನೆದರ್ಲ್ಯಾಂಡ್ಸ್
- ನೇಪಾಳ