ಹೈದರಾಬಾದ್:ಐಸಿಸಿಟಿ20 ವಿಶ್ವಕಪ್ನ ಕೊನೆಯ ಅಭ್ಯಾಸ ಪಂದ್ಯದಲ್ಲಿಂದು ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳ ನಡುವಿನ ಈ ಪಂದ್ಯ ನ್ಯೂಯಾರ್ಕನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ಪಿಚ್ ವರದಿ:ಟಿ20 ವಿಶ್ವಕಪ್ಗಾಗಿ ನಿರ್ಮಾಣಗೊಂಡಿರುವ ನಸ್ಸೌ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡುವ ತಂಡಕ್ಕೆ ಪಿಚ್ ನೆರವಾಗಿರಲಿದೆ. ಪಂದ್ಯ ಸಾಗುತ್ತಿದ್ದಂತೆ ಸ್ಪಿನ್ನರ್ಗಳು ಪಿಚ್ನ ಸಹಾಯ ಪಡೆಯಲಿದ್ದಾರೆ.
ಹೆಡ್ ಟು ಹೆಡ್: ಭಾರತ ಮತ್ತು ಬಾಂಗ್ಲಾದೇಶ ಈ ವರೆಗೂ ಒಟ್ಟು 13 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 12 ಪಂದ್ಯಗಳನ್ನು ಗೆದ್ದು ಮೇಲುಗೈ ಸಾಧಿಸಿದ್ದರೇ, ಬಾಂಗ್ಲಾದೇಶ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ದಾಖಲಿಸಿದೆ.
ಸಮಯ:ರಾತ್ರಿ 8 ಗಂಟೆಗೆ ಆರಂಭ
ನೇರ ಪ್ರಸಾರ:ಸ್ಟಾರ್ಸ್ಪೋರ್ಟ್ಸ್
ಸಂಭಾವ್ಯ ತಂಡಗಳು - ಭಾರತ ತಂಡ:ರೋಹಿತ್ ಶರ್ಮಾ (ನಾ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿ.ಕೀ), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ , ಯುಜ್ವೇಂದ್ರ ಚಹಾಲ್
ಬಾಂಗ್ಲಾದೇಶ:ಲಿಟ್ಟನ್ ದಾಸ್, ಸೌಮ್ಯ ಸರ್ಕಾರ್, ನಜ್ಮುಲ್ ಹೊಸೈನ್ ಶಾಂಟೊ(ನಾ), ತೌಹಿದ್ ಹೃದಯೊಯ್, ಶಕೀಬ್ ಅಲ್ ಹಸನ್, ಮಹಮ್ಮದುಲ್ಲಾ, ಜಾಕರ್ ಅಲಿ(ವಿ.ಕೀ), ಮಹೇದಿ ಹಸನ್, ರಿಶಾದ್ ಹೊಸೈನ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರಹಮಾನ್, ಶೊರಿಫುಲ್ ಇಸ್ಲಾಂ, ತಂಝಿದ್ ಇಸ್ಲಾಮ್ ಹಸನ್ ಸಾಕಿಬ್, ತನ್ವೀರ್ ಇಸ್ಲಾಂ
ಇದನ್ನೂ ಓದಿ:ಒಂದೊಮ್ಮೆ ಅರ್ಜಿ ಹಾಕಿದ್ದರೆ, ಟೀಂ ಇಂಡಿಯಾ ಕೋಚ್ ಹುದ್ದೆಗೆ ಗಂಭೀರ್ ಉತ್ತಮ ಆಯ್ಕೆ: ಸೌರವ್ ಗಂಗೂಲಿ - Sourav Ganguly Statement