ಬಾರ್ಬಡೋಸ್ (ವೆಸ್ಟ್ಇಂಡೀಸ್):ಟಿ20 ವಿಶ್ವಕಪ್ನ ಸೂಪರ್-8 ಹಂತದ ಮೊದಲ ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ತಾನವನ್ನು ಎದುರಿಸುತ್ತಿದ್ದು, ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದೆ. ಬ್ಯಾಟಿಂಗ್ಗೆ ನೆರವಾಗುವ ಬಾರ್ಬಡೋಸ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮೊದಲ ಗೆಲುವಿನ ನಿರೀಕ್ಷೆಯಲ್ಲಿವೆ.
ಸೆಮಿಫೈನಲ್ಗೆ ತಲುಪಲು ಸೂಪರ್-8 ಹಂತದಲ್ಲಿ ಪ್ರತಿ ಪಂದ್ಯವೂ ಮುಖ್ಯವಾಗಿದ್ದು, ಉಭಯ ತಂಡಗಳಿಗೆ ಗೆಲುವು ಅನಿವಾರ್ಯ. ಇಲ್ಲಿ ಗೆದ್ದ ತಂಡ ಸೆಮೀಸ್ ಸಮೀಪಿಸಲಿದೆ. ಗ್ರೂಪ್ 1 ರಲ್ಲಿ ಅಫ್ಘಾನಿಸ್ತಾನಕ್ಕೆ ಕಠಿಣ ಸವಾಲಿದೆ. ಭಾರತದ ಜೊತೆಗೆ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶಗಳನ್ನು ಎದುರಿಸಬೇಕು. ಭಾರತದ ವಿರುದ್ಧ ಗೆದ್ದಲ್ಲಿ ಇನ್ನೆರಡು ತಂಡಗಳಲ್ಲಿ ಒಂದನ್ನು ಸೋಲಿಸಿದರೆ ಸೆಮೀಸ್ ತಲುಪುವುದು ಪಕ್ಕ.
ಇತ್ತ ಭಾರತ ಕೂಡ ಲೀಗ್ ಹಂತದಲ್ಲಿ ದೊಡ್ಡ ಪ್ರದರ್ಶನ ನೀಡಿಲ್ಲ. ಅಪ್ಘನ್ ವಿರುದ್ಧ ಬ್ಯಾಟಿಂಗ್ ಪರಾಕ್ರಮ ತೋರಿಸಬೇಕಿದೆ. ಪಿಚ್ ಸ್ಪಿನ್ಗೆ ನೆರವು ನೀಡಲಿದ್ದು, ಮೊಹಮದ್ ಸಿರಾಜ್ ಬದಲಿಗೆ ಕುಲದೀಪ್ ಯಾದವ್ಗ ಅವಕಾಶ ನೀಡಲಾಗಿದೆ.