ಪ್ಯಾರಿಸ್: ಭಾರತದ ಶೂಟರ್ ಸ್ವಪ್ನಿಲ್ ಕುಸಾಲೆ 50 ಮೀಟರ್ ಏರ್ ರೈಫಲ್ 3 ಪೊಸಿಶನ್ ಅರ್ಹತಾ ಪಂದ್ಯದಲ್ಲಿ 7ನೇ ಸ್ಥಾನ ಪಡೆಯುವ ಮೂಲಕ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ. ಬುಧವಾರ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಸ್ವಪ್ನಿಲ್ 590 ಅಂಕಗಳನ್ನು ಕಲೆಹಾಕಿದರು. ಅಗ್ರ - 8ರಲ್ಲಿ ಸ್ಥಾನ ಪಡೆದವರು ಮಾತ್ರ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳುತ್ತಾರೆ. ಉಳಿದಂತೆ ಇದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತದ ಮತ್ತೊಬ್ಬ ಶೂಟರ್ ಐಶ್ವರ್ಯಾ ಪ್ರತಾಪ್ ಸಿಂಗ್ ತೋಮರ್ 589 ಅಂಕಗಳನ್ನು ಗಳಿಸುವ ಮೂಲಕ 11ನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು. ಚೀನಾದ ಲಿಯು ಯುಕುನ್ 594 ಅಂಕ ಗಳಿಸುವ ಮೂಲಕ ಅಗ್ರಸ್ಥಾನ ಪಡೆದರು.
ತ್ರೀ ಪೋಸಿಶನ್ ಗೇಮ್:ಈ ಸ್ಪರ್ಧೆಯಲ್ಲಿ ಶೂಟರ್‌ಗಳು ಮೂರು ಭಂಗಿಯಲ್ಲಿ ಶೂಟ್ ಮಾಡಬೇಕು. ಇವುಗಳಲ್ಲಿ ಕುಗ್ಗಿ ಅಥವಾ ಕುಳಿತುಕೊಂಡು, ಮಲಗಿಕೊಂಡು ಮತ್ತು ನಿಂತುಕೊಂಡು ಗುರಿ ಇಡಬೇಕು.