ಕರ್ನಾಟಕ

karnataka

ETV Bharat / sports

IPL 2ನೇ ಕ್ವಾಲಿಫೈಯರ್‌ ಪಂದ್ಯ: ಹೈದರಾಬಾದ್‌ ಸಾಧಾರಣ ಬ್ಯಾಟಿಂಗ್​, ರಾಜಸ್ಥಾನಕ್ಕೆ 176 ರನ್​ಗಳ​ ಗುರಿ - IPL 2024 - IPL 2024

ಐಪಿಎಲ್‌ 2024ರ 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಸನ್​ರೈಸರ್ಸ್​ ಹೈದರಾಬಾದ್​ ನಿಗದಿತ 20 ಓವರ್​ಗಳಲ್ಲಿ 175 ರನ್ ಕಲೆಹಾಕಿದೆ.

Sunrisers Hyderabad vs Rajasthan Royals Qualifier 2  match
ತಂಡದ ನಾಯಕರು (ETV Bharat)

By ETV Bharat Karnataka Team

Published : May 24, 2024, 7:19 PM IST

Updated : May 24, 2024, 10:07 PM IST

ಚೆನ್ನೈ:ಮಹತ್ವದ ಎಲಿಮಿನೇಟರ್ 2 ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಸನ್​ರೈಸರ್ಸ್​ ಹೈದರಾಬಾದ್​ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 175 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ. ಆ ಮೂಲಕ ರಾಜಸ್ಥಾನ್‌ ರಾಯಲ್ಸ್‌ಗೆ 176 ರನ್‌ ಗುರಿ ನೀಡಿದೆ. ಹೆನ್ರಿಚ್‌ ಕ್ಲಾಸೆನ್‌ 50, ಟ್ರಾವಿಸ್‌ ಹೆಡ್‌ 34 ಮತ್ತು ರಾಹುಲ್‌ ತ್ರಿಪಾಠಿ 37 ರನ್‌ ಗಳಿಸುವ ಮೂಲಕ ತಂಡ 170 ರನ್​ ಗಡಿ ದಾಟಲು ನೆರವಾದರು.

ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡುವ ಮೂಲಕ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಸನ್‌ರೈಸರ್ಸ್ ಹೈದರಾಬಾದ್‌ಗೆ ಮೊದಲ ಆಘಾತ ನೀಡಿದರು. ಐದು ಎಸೆತಗಳಲ್ಲಿ 12 ರನ್ ಗಳಿಸಿ ಅಭಿಷೇಕ್ ಔಟಾದರು. ಟ್ರೆಂಟ್ ಬೌಲ್ಟ್ ತಮ್ಮ ಅದ್ಭುತ ಬೌಲಿಂಗ್ ಮುಂದುವರಿಸಿ ಫಾರ್ಮ್​ನಲ್ಲಿದ್ದ ರಾಹುಲ್ ತ್ರಿಪಾಠಿಯನ್ನು ಔಟ್ ಮಾಡಿದರು. ರಾಹುಲ್ 15 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 37 ರನ್ ಗಳಿಸಿ ಔಟಾದರು. ಹೈದರಾಬಾದ್‌ ಪವರ್‌ಪ್ಲೇನಲ್ಲಿ ಮೂರನೇ ವಿಕೆಟ್ ಕಳೆದುಕೊಂಡಿತು.

ಹೊಸ ಬ್ಯಾಟ್ಸ್​ಮನ್​ಆಗಿ ಬಂದ ಏಡೆನ್ ಮಾರ್ಕ್ರಾಮ್ ಕೂಡ ವಿಕೆಟ್ ಕಳೆದುಕೊಂಡರು. ಮಾರ್ಕ್ರಾಮ್ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆರಂಭಿಕ ಹಿನ್ನಡೆಯ ನಂತರ, ಆರಂಭಿಕರಾದ ಬ್ಯಾಟ್ಸ್​ಮನ್​ ಟ್ರಾವಿಸ್ ಹೆಡ್ ಮತ್ತು ಹೆನ್ರಿಚ್ ಕ್ಲಾಸೆನ್ ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್ ಸ್ಪಲ್ಪ ಮಟ್ಟಿಗೆ ನಿಭಾಯಿಸಿದರು. ವೇಗದ ಬೌಲರ್ ಸಂದೀಪ್ ಶರ್ಮಾ ಅದ್ಭುತ ಬೌಲಿಂಗ್ ಮಾಡಿ ಆರಂಭಿಕ ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡಿದರು. 28 ಎಸೆತಗಳಲ್ಲಿ 34 ರನ್ ಗಳಿಸಿ ಹೆಡ್ ಔಟಾದರು. ರಾಜಸ್ಥಾನ ಬೌಲರ್​ಗಳನ್ನು ಕಾಡಿದ ಹೆನ್ರಿಚ್ ಕ್ಲಾಸೆನ್ 34 ಎಸೆತಗಳಲ್ಲಿ 50 ರನ್​ ಗಳಿಸಿ ಸಂದೀಪ್​ ಶರ್ಮಗೆ ವಿಕೆಟ್​ ಒಪ್ಪಿಸಿದರು.

ರಾಜಸ್ಥಾನ್​ ಪರ ಟ್ರೆಂಟ್‌ ಬೌಲ್ಟ್‌ ಹಾಗೂ ಆವೇಶ್‌ ಖಾನ್‌ ತಲಾ 3 ವಿಕೆಟ್‌ ಪಡೆದರೆ, ಸಂದೀಪ್‌ ಶರ್ಮಾ ಎರಡು ವಿಕೆಟ್‌ ಪಡೆದರು.

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI):ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಸಂಜು ಸ್ಯಾಮ್ಸನ್ (ನಾಯಕ/ವಿಕೆಟ್​ ಕೀಪರ್​), ರಿಯಾನ್ ಪರಾಗ್, ಧ್ರುವ್ ಜುರೆಲ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್.

ಇಂಪ್ಯಾಕ್ಟ್ ಆಟಗಾರರು:ಶಿಮ್ರಾನ್ ಹೆಟ್ಮೆಯರ್, ನಾಂದ್ರೆ ಬರ್ಗರ್, ಶುಭಂ ದುಬೆ, ಡೊನೊವನ್ ಫೆರೇರಾ, ಕುಲದೀಪ್ ಸೇನ್.

ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿತೀಶ್ ರೆಡ್ಡಿ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್(ವಿಕೆಟ್​ ಕೀಪರ್), ಅಬ್ದುಲ್ ಸಮದ್, ಪ್ಯಾಟ್ ಕಮಿನ್ಸ್(ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ಟಿ ನಟರಾಜನ್.

ಇಂಪ್ಯಾಕ್ಟ್ ಆಟಗಾರರು: ಉಮ್ರಾನ್ ಮಲಿಕ್, ಸನ್ವಿರ್ ಸಿಂಗ್, ಗ್ಲೆನ್ ಫಿಲಿಪ್ಸ್, ಮಯಾಂಕ್ ಮಾರ್ಕಾಂಡೆ, ಶಹಬಾಜ್ ಅಹ್ಮದ್.

ಇದನ್ನೂ ಓದಿ: ಹೈದರಾಬಾದ್ VS ರಾಜಸ್ಥಾನ ಪಂದ್ಯ: ಈ ನಾಲ್ವರು ಆಟಗಾರರಿಗೆ ಇದೆ ಐಪಿಎಲ್​ನಲ್ಲಿ ದಾಖಲೆ ನಿರ್ಮಿಸುವ ಸುವರ್ಣಾವಕಾಶ! - IPL Qualifier 2

Last Updated : May 24, 2024, 10:07 PM IST

ABOUT THE AUTHOR

...view details