ನವದೆಹಲಿ: ಭಾರತದ ಯುವ ಮಹಿಳಾ ಟೇಬಲ್ ಟೆನ್ನಿಸ್ ಆಟಗಾರ್ತಿ ಶ್ರೀಜಾ ಅಕುಲಾ ಪ್ಯಾರಿಸ್ ಒಲಿಂಪಿಕ್ಸ್ ದಾಖಲೆ ಬರೆದಿದ್ದಾರೆ. ಅವರು ಬುಧವಾರ ನಡೆದ ಮಹಿಳಾ ಟೇಬಲ್ ಟೆನ್ನಿಸ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಸಿಂಗಾಪುರದ ಪ್ರತಿಸ್ಪರ್ಧಿ ಜಿಯಾನ್ ಜೆಂಗ್ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ 16ನೆ ಸುತ್ತಿಗೆ ಪ್ರವೇಶವನ್ನೂ ಪಡೆದಿದ್ದಾರೆ.
26 ವರ್ಷದ ಶ್ರೀಜಾ ತಮ್ಮ ಹುಟ್ಟಿದ ದಿನವಾದ ಇಂದು ಒಲಿಂಪಿಕ್ಸ್‌ನ ಪ್ರಿ-ಕ್ವಾರ್ಟರ್‌ಗೆ ಪ್ರವೇಶಿಸಿದ ಎರಡನೇ ಭಾರತೀಯ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಸಾಧನೆಯನ್ನೂ ಮಾಡಿದ್ದಾರೆ. ಇದಕ್ಕೂ ಮೊದಲು ಮಣಿಕಾ ಬಾತ್ರಾ ಕೆಲವು ದಿನಗಳ ಹಿಂದೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಈ ಮೈಲಿಗಲ್ಲು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಇದೀಗ ಶ್ರೀಜಾ ಕೂಡ ಅವರ ಹಾದಿಯಲ್ಲೇ ಸಾಗುತ್ತಿದ್ದಾರೆ.
ಈ ಪಂದ್ಯದಲ್ಲಿ ಶ್ರೀಜಾ ಅಕುಲಾ ಭರ್ಜರಿ ಕಮ್ಬ್ಯಾಕ್ ಮಾಡಿದರು. ಮೊದಲ ಸುತ್ತಿನಲ್ಲಿ ಝೆಂಗ್ ವಿರುದ್ದ ಸೋಲನುಭವಿಸಿದ್ದ ಶ್ರೀಜಾ ಎರಡನೇ ಸುತ್ತಿನಲ್ಲಿ ಪ್ರತಿ ದಾಳಿ ನಡೆಸುವ ಮೂಲಕ ಎದುರಾಳಿ ಗೆಲುವಿಗೆ ಅವಕಾಶ ನೀಡಲಿಲ್ಲ. ಇಲ್ಲಿಂದ ಪ್ರಾಬಲ್ಯ ಮೆರೆಯಲು ಆರಂಭಿಸಿದ ಶ್ರೀಜಾ ಮೂರನೇ ಸೆಟ್ನಲ್ಲಿ ಏಕಪಕ್ಷೀಯವಾಗಿ ಜೆಂಕ್ ಅವರನ್ನು ಮಣಿಸಿದರು. ಅಂತಿಮಾವಗಿ ಶ್ರೀಜಾ ಸಿಂಗಾಪುರದ ಜಿಯಾನ್ ಜೆಂಗ್ ವಿರುದ್ಧ 9-11, 12-10, 11-4, 11-5, 10-12, 12-10 ಅಂತರದಿಂದ ಗೆಲುವು ಸಾಧಿಸಿದರು. ಇದರೊಂದಿಗೆ ಶ್ರೀಜಾ ಅಕುಲಾ ಅವರು 16ನೇ ಸುತ್ತಿಗೆ ಅಂದರೆ ಪ್ರಿ-ಕಾರ್ಟರ್ ಫೈನಲ್‌ಗೆ ಪ್ರವೇಶ ಪಡೆದುಕೊಂಡರು.
ಇದನ್ನೂ ಓದಿ:ಶೂಟಿಂಗ್ನಲ್ಲಿ ಭಾರತಕ್ಕೆ ಮತ್ತೊಂದು ಪದಕದ ನಿರೀಕ್ಷೆ: ಫೈನಲ್ ಪ್ರವೇಶಿಸಿದ ಸ್ವಪ್ನಿಲ್ ಕುಸಾಲೆ - Paris olympics 2024