Cricketer Retired:ಸೌರಾಷ್ಟ್ರದ ವಿಕೇಟ್ ಕೀಪರ್ ಮತ್ತು ಬ್ಯಾಟರ್ ಆಗಿರುವ ಶೆಲ್ಡನ್ ಫಿಲಿಪ್ ಜಾಕ್ಸನ್ (Sheldon Philip Jackson) ಅವರು ವೈಟ್ ಬಾಲ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ 2024-25ರಲ್ಲಿ ಸೌರಾಷ್ಟ್ರ ತಂಡವನ್ನ ಪ್ರತಿನಿಧಿಸಿತ್ತಿದ್ದ ಇವರು ವೈಟ್ ಬಾಲ್ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ.
ದೇಶೀ ಕ್ರಿಕೆಟ್‌ನಲ್ಲಿ ಸೌರಾಷ್ಟ್ರವನ್ನು ಪ್ರತನಿಧಿಸುತ್ತಿದ್ದ ಇವರು ತಂಡದ ಪ್ರಮುಖ ಬ್ಯಾಟರ್ ಆಗಿದ್ದರು. ಅವರು ಈ ವರೆಗೆ ಒಟ್ಟು 103 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ 46.36 ಸರಾಸರಿಯಲ್ಲಿ 7,187 ರನ್ ಗಳಿಸಿದ್ದಾರೆ. ಇದರಲ್ಲಿ 21 ಶತಕ ಮತ್ತು 39 ಅರ್ಧ ಶತಕ ಸೇರಿವೆ. ಒಟ್ಟು 86 ಲಿಸ್ಟ್ ಎ ಪಂದ್ಯಗಳಲ್ಲಿ ಅವರು 36.25 ಸರಾಸರಿಯಲ್ಲಿ 2792 ರನ್ ಗಳಿಸಿದ್ದಾರೆ. ಇದರಲ್ಲಿ ಒಂಬತ್ತು ಶತಕ ಮತ್ತು 14 ಅರ್ಧಶತಕ ಸೇರಿವೆ.
38 ವರ್ಷದ ಶೆಲ್ಡನ್ ಟಿ20 ಕ್ರಿಕೆಟ್‌ನಲ್ಲಿ ಒಂದು ಶತಕ ಮತ್ತು 11 ಅರ್ಧ ಶತಕ ಸಮೇತ 1812 ರನ್ ಗಳಿಸಿದ್ದಾರೆ. ಇವರು ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. 2017 ಮತ್ತು 2022ರಲ್ಲಿ ಎರಡು ಬಾರಿ ಒಟ್ಟು ಒಂಬತ್ತು ಪಂದ್ಯಗಳನ್ನು ಆಡುವ ಅವಕಾಶ ಪಡೆದಿದ್ದರು. ಈ ಅವಧಿಯಲ್ಲಿ 107.01 ಸ್ಟ್ರೈಕ್ ರೇಟ್‌ನಲ್ಲಿ 61 ರನ್ ಕಲೆಹಾಕಿದ್ದಾರೆ.