ನವದೆಹಲಿ: ಭಾರತದ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರ ಗೆಲುವಿನ ಓಟ ಮುಂದುವರಿಸಿದ್ದಾರೆ. ಮಂಗಳವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್ನ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ಈವೆಂಟ್‌ನಲ್ಲಿ ಇಂಡೋನೇಷ್ಯಾದ ಮುಹಮ್ಮದ್ ರಿಯಾಂಟೊ ಮತ್ತು ಫಜರ್ ಅಲ್ಫಿಯಾ ಜೋಡಿಯನ್ನು ನೇರ ಸೆಟ್ಗಳಿಂದ ಸೋಲಿಸಿದರು.
ವಿಶ್ವದ ಐದನೇ ಶ್ರೇಯಾಂಕದ ಭಾರತೀಯ ಜೋಡಿ ಏಳನೇ ಶ್ರೇಯಾಂಕದ ಜೋಡಿಯನ್ನು 21-13, 21-13 ಸೆಟ್ಗಳಿಂದ ಸೋಲಿಸಿತು. ಈ ಪಂದ್ಯ ಗೆಲ್ಲಲು ಸಾತ್ವಿಕ್ ಮತ್ತು ಚಿರಾಗ್ ಜೋಡಿ ಕೇವಲ 40 ನಿಮಿಷಗಳನ್ನು ತೆಗೆದುಕೊಂಡು ಕ್ವಾರ್ಟರ್ ಫೈನಲ್ಗೆ ತಲುಪಿತು.
ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ಸ್ ಸಾತ್ವಿಕ್ ಮತ್ತು ಚಿರಾಗ್ ಮೊದಲ ಸುತ್ತಿನಲ್ಲಿ 5-3 ಮುನ್ನಡೆಯೊಂದಿಗೆ ಉತ್ತಮ ಆರಂಭ ಮಾಡಿತು. ಆದರೆ ನಂತರ ಎರಡೂ ತಂಡಗಳ ಸ್ಕೋರ್‌ಗಳು 5-5 ಮತ್ತು 7-7 ರಲ್ಲಿ ಸಮಗೊಂಡವು. ಭಾರತದ ಜೋಡಿ 9-8 ಅಂಕಗಳೊಂದಿಗೆ ಸತತ ಮೂರು ಅಂಕಗಳೊಂದಿಗೆ 12-8 ಮುನ್ನಡೆ ಸಾಧಿಸಿತು. ಇಂಡೋನೇಷ್ಯಾದ ಜೋಡಿ ಎರಡನೇ ಸೆಟ್‌ನಲ್ಲಿ ಕ್ರಾಸ್ - ಕೋರ್ಟ್ ಡ್ರಾಪ್‌ಗಳು ಮತ್ತು ಶಕ್ತಿಯುತ ಫ್ಲಾಟ್ ಡ್ರೈವ್‌ಗಳನ್ನು ಹೊಡೆಯುವ ಮೂಲಕ ಪ್ರಾಬಲ್ಯ ಸಾಧಿಸಲು ಯತ್ನಿಸಿದರಾದರೂ ಸಾತ್ವಿಕ್ ಮತ್ತು ಚಿರಾಗ್ ಪ್ರತಿ ದಾಳಿ ನಡೆಸಿದರು. ಇದರೊಂದಿಗೆ ಮೊದಲ ಸೆಟ್ಅನ್ನು 21-13 ರಿಂದ ಗೆದ್ದುಕೊಂಡರು. ಈ ಸೆಟ್ ಸೋತರೂ ಇಂಡೋನೇಷ್ಯಾ ಜೋಡಿ ಪಂದ್ಯದ ಉದ್ದಕ್ಕೂ ಭಾರತದ ಜೋಡಿಗೆ ಕಠಿಣ ಸವಾಲು ನೀಡಿತು.
ಬಳಿಕ ಎರಡನೇ ಸೆಟ್ನಲ್ಲೂ ತಮ್ಮ ಪ್ರದರ್ಶನ ಮುಂದುವರೆಸಿದ ಭಾರತ ಇದರಲ್ಲೂ 21-13 ಅಂತರದಿಂದ ಪಂದ್ಯ ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ ಭಾರತದ ಜೋಡಿ ತಮ್ಮ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಯಾರನ್ನು ಎದುರಿಸಲಿದೆ ಎಂಬು ಮುಂದಿನ ಪಂದ್ಯಗಳ ಮೂಲಕ ನಿರ್ಧಾರವಾಗಲಿದೆ.
ಇದನ್ನೂ ಓದಿ:ಹರ್ಮನ್ಪ್ರೀತ್ ಡಬಲ್ ಗೋಲು: ಹಾಕಿಯಲ್ಲಿ ಭಾರತಕ್ಕೆ ಮತ್ತೊಂದು ಗೆಲುವು: ಕ್ವಾರ್ಟರ್ ಪೈನಲ್ಗೆ ಮತ್ತಷ್ಟು ಸನಿಹ - Paris Olympics 2024