ಕರ್ನಾಟಕ

karnataka

ETV Bharat / sports

ರಿಷಭ್​ ಪಂತ್​, ಧೋನಿ ಇಬ್ಬರಲ್ಲಿ ಯಾರು ಬೆಸ್ಟ್​ ವಿಕೆಟ್​ ಕೀಪರ್​: ಮಾಜಿ ದಿಗ್ಗಜ ಆಟಗಾರ ಕೊಟ್ಟ ಉತ್ತರ ಹೀಗಿದೆ! - Rishabh Pant or MS Dhoni

ಪಂತ್​ ಮತ್ತು ಧೋನಿ ಇಬ್ಬರಲ್ಲಿ ಯಾರು ಬೆಸ್ಟ್​ ಎಂದು ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ಪ್ರತಿಕ್ರಿಯೆ ನೀಡಿದ್ದಾರೆ.

ಎಮ್​ಎಸ್​ ಧೋನಿ ಮತ್ತು ರಿಷಭ್​ ಪಂತ್​
ಎಮ್​ಎಸ್​ ಧೋನಿ ಮತ್ತು ರಿಷಭ್​ ಪಂತ್​ (IANS)

By ETV Bharat Sports Team

Published : Sep 23, 2024, 7:32 PM IST

ನವದೆಹಲಿ: ಭಾರತ ಕ್ರಿಕೆಟ್​ ತಂಡದ ವಿಕೆಟ್​ ಕೀಪರ್​ ಮತ್ತು ಬ್ಯಾಟ್ಸ್​ಮನ್​ ರಿಷಭ್​ ಪಂತ್​ ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಟೆಸ್ಟ್​ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಮೊದಲ ಇನ್ನಿಂಗ್ಸ್​ನಲ್ಲಿ ಹೆಚ್ಚು ಸ್ಕೋರ್​ ಗಳಿಸಲು ಸಾಧ್ಯವಾಗದಿದ್ದರೂ ಎರಡನೇ ಇನ್ನಿಂಗ್ಸ್​ನಲ್ಲಿ ಶತಕವನ್ನು ಸಿಡಿಸಿ ಭರ್ಜರಿ ಕಮ್​ಬ್ಯಾಕ್​ ಮಾಡಿದ್ದಾರೆ. ಅಲ್ಲದೇ ಈ ಶತಕದೊಂದಿಗೆ ಕ್ರಿಕೆಟ್​ ದಂತಕಥೆ ಎಮ್ ​ಎಸ್​ ಧೋನಿ ಅವರ ದಾಖಲೆಯನ್ನು ಪಂತ್​ ಸರಿಗಟ್ಟಿದ್ದಾರೆ. ಟೆಸ್ಟ್​ ಪಂದ್ಯಗಳಲ್ಲಿ ವಿಕೆಟ್​ ಕೀಪರ್​ ಆಗಿ 6 ಶತಕಗಳನ್ನು ಸಹ ಪೂರೈಸಿದ್ದಾರೆ. ಈ ಹಿನ್ನೆಲೆ ಅಭಿಮಾನಿಗಳು ಪಂತ್​ ಅವರನ್ನು ಧೋನಿ ಅವರಿಗೆ ಹೋಲಿಕೆ ಮಾಡಲು ಆರಂಭಿಸಿದ್ದಾರೆ. ಜತೆಗೆ ಈ ಇಬ್ಬರಲ್ಲಿ ಯಾರು ಬೆಸ್ಟ್ ​ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ.

ಏತನ್ಮಧ್ಯೆ, ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ದಿನೇಶ್​ ಕಾರ್ತಿಕ್,​ ಧೋನಿ ಮತ್ತು ಪಂತ್​ ಇಬ್ಬರಲ್ಲಿ ಯಾರು ಬೆಸ್ಟ್​ ಎಂದು ತಿಳಿಸಿದ್ದಾರೆ. ಈ ವಿಚಾರವಾಗಿ ಕ್ರಿಕ್‌ಬಜ್‌ನೊಂದಿಗೆ ಮಾತನಾಡುವಾಗ, ಈ ಹೋಲಿಕೆ ತಪ್ಪು ಎಂದು ಹೇಳಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ಧೋನಿ ಉನ್ನತ ಸ್ಥಾನದಲ್ಲಿದ್ದಾರೆ. ನಾಯಕ ಮತ್ತು ವಿಕೆಟ್ ಕೀಪರ್-ಬ್ಯಾಟರ್​ ಆಗಿ, ಧೋನಿ ತಂಡಕ್ಕೆ ಅಗತ್ಯವಿರುವಾಗಲೆಲ್ಲ ರನ್ ಕಾಣಿಕೆ ನೀಡಿದ್ದಾರೆ. ಪಂತ್ ಇದುವರೆಗೆ 34 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅವರು ಕೂಡ ಉತ್ತಮ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಆದರೆ ಅವರು ಈಗಾಗಲೇ ಭಾರತದ ಶ್ರೇಷ್ಠ ವಿಕೆಟ್ ಕೀಪರ್ ಕಮ್​ ಬ್ಯಾಟರ್​ ಎಂದು ಹೇಳುವುದು ಸರಿಯಲ್ಲ ಎಂದಿದ್ದಾರೆ.

ಎಮ್​ಎಸ್​ ಧೋನಿ ಮತ್ತು ರಿಷಭ್​ ಪಂತ್​ (IANS)

ಇದನ್ನೂ ಓದಿ: ದಯವಿಟ್ಟು ನನ್ನನ್ನು ಧೋನಿ ಜೊತೆ ಹೋಲಿಕೆ ಮಾಡಬೇಡಿ; ಪಂತ್ ಮನವಿ ​ - Rishabh pant

ಧೋನಿ ಪ್ರಮುಖವಾಗಿ ಕಠಿಣ ಸಮಯದಲ್ಲೂ ತಂಡವನ್ನು ಮುನ್ನಡೆಸಿದ್ದಾರೆ ಮತ್ತು ವಿಕೆಟ್ ಕೀಪಿಂಗ್‌ನಲ್ಲೂ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಟೆಸ್ಟ್‌ನಲ್ಲಿ ತಂಡವನ್ನು ನಂಬರ್ 1 ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಈ ಎಲ್ಲಾ ದಾಖಲೆಗಳ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ ಎಂದು ದಿನೇಶ್​ ಕಾರ್ತಿಕ್​ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಮೊದಲ ಟೆಸ್ಟ್​ ಪಂದ್ಯದಲ್ಲಿ ಯುವ ಬ್ಯಾಟರ್​ ರಿಷಭ್​ ಪಂತ್​ ಆಕರ್ಷಕ ಪ್ರದರ್ಶನ ತೋರಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇದರಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ 39 ರನ್ ​ಗಳಿಸಿದ್ದ ಪಂತ್​ ಎರಡನೇ ಇನ್ನಿಂಗ್ಸ್​ನಲ್ಲಿ 109 ರನ್​ಗಳ ಆಕರ್ಷಕ ಇನ್ನಿಂಗ್ಸ್​ ಆಡಿದ್ದರು. ಇದರ ಬೆನ್ನಲ್ಲೇ ಅಭಿಮಾನಿಗಳು ಪಂತ್​ ಅವರನ್ನು ಧೋನಿ ಅವರೊಂದಿಗೆ ಹೋಲಿಕೆ ಮಾಡಲು ಆರಂಭಿಸಿದ್ದಾರೆ.

ಇದನ್ನೂ ಓದಿ:ಸಚಿನ್ ತೆಂಡೂಲ್ಕರ್​​ ದಾಖಲೆ ಮುರಿದ ರೋಹಿತ್​ ಶರ್ಮಾ: ವಿಶ್ವ ಕ್ರಿಕೆಟ್​ನಲ್ಲೇ ಐತಿಹಾಸಿಕ ಸಾಧನೆ! - Rohit Sharma

ABOUT THE AUTHOR

...view details