ಕರ್ನಾಟಕ

karnataka

ETV Bharat / sports

ರಿಂಕುಗೆ ದೀಪಾವಳಿಯ ಭರ್ಜರಿ ಬೋನಸ್: 55 ಲಕ್ಷದಿಂದ 13 ಕೋಟಿ ರೂ.ಗೆ ಏರಿಕೆ

IPL ರಿಟೇನ್​​​- ರಿಂಕುಗೆ ಭಾರಿ ಬೆಲೆ ನೀಡಿದ KKR - ಕ್ರಿಕೆಟಿಗನ ಭಾವನಾತ್ಮಕ ವಿಡಿಯೋ ಪೋಸ್ಟ್

ರಿಂಕುಗೆ ದೀಪಾವಳಿಯ ಭರ್ಜರಿ ಬೋನಸ್:  55 ಲಕ್ಷದಿಂದ 13 ಕೋಟಿ ರೂ. ಏರಿಕೆ
ರಿಂಕುಗೆ ದೀಪಾವಳಿಯ ಭರ್ಜರಿ ಬೋನಸ್: 55 ಲಕ್ಷದಿಂದ 13 ಕೋಟಿ ರೂ. ಏರಿಕೆ (Rinku Singh IPL (Source: AP (Left), Getty Images (Right))

By ETV Bharat Sports Team

Published : 4 hours ago

2025 IPL ಆ್ಯಕ್ಷನ್​​ ಬಗ್ಗೆ ಸ್ಪಷ್ಟತೆ ಸಿಕ್ಕಿದೆ. ಎಲ್ಲಾ ಫ್ರಾಂಚೈಸಿಗಳು ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಇನ್ನು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಯುವ ಆಟಗಾರ ರಿಂಕು ಸಿಂಗ್ ಅವರನ್ನು 13 ಕೋಟಿ ರೂ.ಗಳ ಬೃಹತ್ ಮೊತ್ತ ನೀಡಿ ತನ್ನಲ್ಲೇ ಉಳಿಸಿಕೊಂಡಿದೆ. ಈ ನಡುವೆ ಕೆಕೆಆರ್ ತಂಡ ತನ್ನನ್ನು ಉಳಿಸಿಕೊಂಡಿದ್ದಕ್ಕೆ ರಿಂಕು ಸಿಂಗ್​ ಭಾವುಕರಾಗಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ.

ಈಗಷ್ಟೇ ಶುರುವಾಗಿದೆ:'ನಮ್ಮ ಪ್ರೇಮಕಥೆ ಈಗಷ್ಟೇ ಶುರುವಾಗಿದೆ. ಪಿಕ್ಚರ್​​ ಇನ್ನೂ ಬಾಕಿ ಇದೆ’ ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಕೆಕೆಆರ್ ಕುಟುಂಬಕ್ಕೆ ನಮಸ್ತೆ. ನಾನು 7 ವರ್ಷಗಳ ಹಿಂದೆಯೇ ಕೋಲ್ಕತ್ತಾ ಜೆರ್ಸಿಯನ್ನು ಧರಿಸಿದ್ದರೂ, ಇದು ನನ್ನ ಏಕೈಕ ಯಶಸ್ಸಿನ ಕಥೆಯಲ್ಲ. ಪ್ರತಿ ಗೆಲುವು ಮತ್ತು ಸೋಲಿನಲ್ಲಿ ಕೆಕೆಆರ್​ ನನ್ನನ್ನು ಬೆಂಬಲಿಸಿದೆ. ಈ ಪ್ರಯಾಣದಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಕೆಕೆಆರ್ ನನ್ನ ಮೇಲೆ ನಂಬಿಕೆ ಇಟ್ಟಿತ್ತು. ಆ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ನಾನು ಯಶಸ್ವಿಯಾಗಿದ್ದೇನೆ . ಇದೊಂದು ಹೊಸ ಅಧ್ಯಾಯ' ಎಂದು ಧ್ವನಿ ಸಂದೇಶದೊಂದಿಗೆ ವಿಡಿಯೋ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಅಭಿಮಾನಿಗಳು ವೆಲ್ ಡನ್ ಚಾಂಪಿಯನ್, ಆಲ್ ದಿ ಬೆಸ್ಟ್ ಎಂದು ಕಾಮೆಂಟ್ ಸಹ ಮಾಡುತ್ತಿದ್ದಾರೆ.

ದೀಪಾವಳಿ ಬೋನಸ್!: 2024 ರ ಐಪಿಎಲ್ ಸೀಸನ್‌ಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸ್ ರಿಂಕುಗೆ ಆಗ ಕೇವಲ 55 ಲಕ್ಷ ರೂ. ನೀಡಿತ್ತು. ಆ ಸಮಯದಲ್ಲಿ, KKR ಆಡಳಿತದ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತದ ಆಟಗಾರನಿಗೆ ಕಡಿಮೆ ಶುಲ್ಕ ನೀಡುತ್ತಿದ್ದಾರೆ ಎಂದು ನೆಟಿಜನ್ ಗಳು ಕಿಡಿಕಾರಿದ್ದರು. ಆದರೆ, ಈ ಬಾರಿ ಅವರ ಸಂಭಾವನೆ ಹೆಚ್ಚಾಗಿದೆ. ಈ ಬಾರಿ ಕೆಕೆಆರ್ ರಿಂಕುಗೆ ರೂ. 13 ಕೋಟಿ ರೂ ನೀಡಿದೆ. ಅಂದರೆ ಅವರ ಸಂಬಳ ಸುಮಾರು 2000 ಪ್ರತಿಶತದಷ್ಟು ಹೆಚ್ಚಾಗಿದೆ!

ಬಹಳ ದಿನಗಳ ಕಾಲ ಅವಕಾಶ ಸಿಕ್ಕಿರಲಿಲ್ಲ;ರಿಂಕು ಸಿಂಗ್ 2018 ರ ಋತುವಿನಿಂದ KKR ತಂಡದ ಸದಸ್ಯರಾಗಿದ್ದಾರೆ. ಆದರೆ, ಬಹಳ ದಿನವಾದರೂ ಕಣಕ್ಕೆ ಇಳಿಯುವ ಅವಕಾಶ ಸಿಕ್ಕಿರಲಿಲ್ಲ. ಆದರೆ ರಿಂಕು ಸಿಂಗ್​ ಅವರ ಪ್ರತಿಭೆ 2023 ರಲ್ಲಿ ಬೆಳಕಿಗೆ ಬಂತು. ಆ ಸೀಸನ್ ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಕೊನೆಯ ಓವರ್ ನಲ್ಲಿ 5 ಸಿಕ್ಸರ್ ಬಾರಿಸಿ ಕೆಕೆಆರ್ ಗೆಲುವಿಗೆ ಕಾರಣರಾಗಿದ್ದರು ಸಿಂಗ್​​. ಇದರೊಂದಿಗೆ ರಿಂಕು ಸಿಂಗ್ ಹೆಸರು ಫೇಮಸ್ ಆಯಿತು. ಆ ಪಂದ್ಯದ ನಂತರವೂ ರಿಂಕು ತಮ್ಮ ಶಕ್ತಿ ಪ್ರದರ್ಶಿಸಿದರು. ಆ ಋತುವಿನಲ್ಲಿ ಅವರು 149.52 ಸ್ಟ್ರೈಕ್ ರೇಟ್‌ನೊಂದಿಗೆ 474 ರನ್ ಸಿಡಿಸಿ ಗಮನ ಸೆಳೆದರು. 2023ರ ಐಪಿಎಲ್‌ನಲ್ಲಿ ಪ್ರದರ್ಶನ ಕಂಡು ರಾಷ್ಟ್ರೀಯ ತಂಡಕ್ಕೆ ಕರೆ ಬಂದಿತ್ತು. ಅದೇ ವರ್ಷದಲ್ಲಿ, ರಿಂಕು ಐರ್ಲೆಂಡ್ ಪ್ರವಾಸದೊಂದಿಗೆ ಅಂತಾರಾಷ್ಟ್ರೀಯ ಚೊಚ್ಚಲ ಪ್ರವೇಶ ಪಡೆದುಕೊಂಡರು.

ABOUT THE AUTHOR

...view details