ಕರ್ನಾಟಕ

karnataka

ETV Bharat / sports

ಟೀಮ್​ ಇಂಡಿಯಾ ಮುಖ್ಯ​ ಕೋಚ್​ ಹುದ್ದೆಯ ಆಫರ್​ ನಿರಾಕರಿಸಿದ ರಿಕಿ ಪಾಂಟಿಂಗ್​: ಕಾರಣ ಇದು! - Ricky Ponting

ಟೀಮ್​ ಇಂಡಿಯಾದ ಮುಖ್ಯ​ ಕೋಚ್​ ಹುದ್ದೆಯ ಆಫರ್ ಅನ್ನು ರಿಕಿ ಪಾಂಟಿಂಗ್​ ನಿರಾಕರಿಸಿದ್ದಾರೆ. ಅದಕ್ಕವರು ಕೊಟ್ಟ ಕಾರಣ ಹೀಗಿದೆ.

ರಿಕಿ ಪಾಂಟಿಂಗ್
ರಿಕಿ ಪಾಂಟಿಂಗ್ (ANI)

By PTI

Published : May 23, 2024, 2:09 PM IST

ನವದೆಹಲಿ:ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್​ ಹುದ್ದೆಯ ಆಫರ್​ ಅನ್ನು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್​ ನಿರಾಕರಿಸಿದ್ದಾರೆ. ಈ ವಿಚಾರವನ್ನು ಅವರು ಬಹಿರಂಗಪಡಿಸಿದ್ದು, "ಮುಖ್ಯ ಕೋಚ್ ಹುದ್ದೆಗಾಗಿ ನನ್ನನ್ನು ಸಂಪರ್ಕಿಸಿದ್ದರು. ಆದರೆ ಸದ್ಯದ ನನ್ನ ಜೀವನ ಶೈಲಿಗೆ ಇದು ಸರಿ ಹೊಂದುವುದಿಲ್ಲ" ಎಂದು ತಿಳಿಸಿದ್ದಾರೆ.

ಪ್ರಸ್ತುತ ಐಪಿಎಲ್‌ನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ತರಬೇತುದಾರರಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಪಾಂಟಿಂಗ್​, ಈ ಹಿಂದೆ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಟಿ20 ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದರು.

"ನಾನು ಭಾರತ ತಂಡದ ಕೋಚ್​ ಆಗಲು ಇಷ್ಟಪಡುವೆ. ಆದರೆ ಜೀವನದಲ್ಲಿ ನಾನು ಹೊಂದಿರುವ ಇತರ ಜವಾಬ್ದಾರಿಗಳು ಮತ್ತು ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಬೇಕಿರುವ ಕಾರಣ ಕೋಚ್‌ ಹುದ್ದೆ ನಿಭಾಯಿಸುವುದು ಸಾಧ್ಯವಾಗದು. ರಾಷ್ಟ್ರೀಯ ತಂಡದ ಕೋಚ್​ ಆಗಿ ಹುದ್ದೆ ಅಲಂಕರಿಸಿಕೊಂಡ ಬಳಿಕ ಐಪಿಎಲ್​ನಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಮುಖ್ಯ ಕೋಚ್​ ಆದರೆ ವರ್ಷದ 10ರಿಂದ 11 ತಿಂಗಳ ಕಾಲ ತಂಡದ ಜೊತೆಯಲ್ಲೇ ಇರಬೇಕಾಗುತ್ತದೆ. ಆದರೆ ಇದು ಈಗಿನ ನನ್ನ ಜೀವನಶೈಲಿ ಮತ್ತು ನನ್ನ ಇತರೆ ವಿಚಾರಗಳಿಗೆ ಹೊಂದಿಕೆಯಾಗುವುದಿಲ್ಲ" ಎಂದು ಹೇಳಿದ್ದಾರೆ.

"ಈ ಸಂಗತಿಯನ್ನು ನನ್ನ ಮಗನ ಮುಂದೆ ಪ್ರಸ್ತಾಪಿಸಿದ್ದು, ಆತ ಕೋಚ್​ ಹುದ್ದೆಯನ್ನು ಸ್ವೀಕರಿಸಿ ಅಪ್ಪಾ. ಮುಂದಿನ ಎರಡು ವರ್ಷಗಳ ನಾವು ಕಾಲ ಭಾರತದಲ್ಲಿ ಇರಬಹುದು ಎಂದು ಹೇಳಿದ್ದಾನೆ. ನನ್ನ ಮಗ ಭಾರತ ಮತ್ತು ಇಲ್ಲಿನ ಕ್ರಿಕೆಟ್​ ಸಂಸ್ಕೃತಿಯನ್ನು ಹೆಚ್ಚು ಇಷ್ಟಪಡುತ್ತಾನೆ" ಎಂದು ಇದೇ ವೇಳೆ ತಿಳಿಸಿದರು.

ಮುಖ್ಯ ಕೋಚ್​ ರೇಸ್​ನಲ್ಲಿ ಯಾರೆಲ್ಲ?:ಟಿ20 ವಿಶ್ವಕಪ್​ ಬಳಿಕ ರಾಹುಲ್ ದ್ರಾವಿಡ್​ ಅವರ ಮುಖ್ಯ ಕೋಚ್​ ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ನೂತನ ಮುಖ್ಯ ಕೋಚ್​ ಹುದ್ದೆಗಾಗಿ ಈಗಾಗಲೇ ಅರ್ಜಿ ಆಹ್ವಾನಿಸಿದೆ. ಇದೇ ತಿಂಗಳು 27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಟಿ20 ವಿಶ್ವಕಪ್​ ನಂತರ ತೆರವುಗೊಳ್ಳಲಿರುವ ಮುಖ್ಯ ಕೋಚ್​ ಸ್ಥಾನಕ್ಕೆ ಚೆನ್ನೈ ಸೂಪರ್ ಕಿಂಗ್ಸ್​ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್, ಲಕ್ನೋ ಸೂಪರ್ ಜೈಂಟ್ಸ್ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮೆಂಟರ್ ಗೌತಮ್ ಗಂಭೀರ್ ಹೆಸರುಗಳು ಕೇಳಿ ಬಂದಿವೆ.

ಇದನ್ನೂ ಓದಿ:ಐಪಿಎಲ್​ಗೆ ದಿನೇಶ್‌ ಕಾರ್ತಿಕ್ ಕಣ್ಣೀರ ವಿದಾಯ: ತಬ್ಬಿ ಸಂತೈಸಿದ ಕೊಹ್ಲಿ, ಆಟಗಾರರಿಂದ ವಿಶೇಷ ಗೌರವ - Dinesh Karthik

ABOUT THE AUTHOR

...view details