WPL 2025: ಮಹಿಳಾ ಪ್ರೀಮಿಯರ್ ಲೀಗ್ (WPL) ಆರಂಭಕ್ಕೂ ಮೊದಲೇ ಆಸ್ಟ್ರೇಲಿಯಾದ ಬೌಲಿಂಗ್ ಆಲ್‌ರೌಂಡರ್ ಸೋಫಿ ಮೊಲಿನೆಕ್ಸ್ (Sophie Molineux) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಿಂದ ಹೊರಬಿದ್ದಿದ್ದಾರೆ. ಗಾಯಕ್ಕೆ ತುತ್ತಾಗಿರುವ ಕಾರಣ ಮೊಲಿನೆಕ್ಸ್ ಮುಂದಿನ ಋತುವಿನಿಂದ ಹೊರಗುಳಿಯಲಿದ್ದಾರೆ.
ಇದೀಗ ಅವರ ಸ್ಥಾನಕ್ಕೆ ಬದಲಿ ಪ್ಲೇಯರ್ ಆಗಿ ಇಂಗ್ಲೆಂಡ್‌ನ ಆಲ್‌ರೌಂಡರ್ ಚಾರ್ಲಿ ಡೀನ್ (charlie dean) ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆರ್‌ಸಿಬಿ ಡೀನ್ ಅವರನ್ನು 30 ಲಕ್ಷಕ್ಕೆ ಖರೀದಿಸಿದೆ. ಈ ಬಗ್ಗೆ ಸ್ವತಃ ಆರ್‌ಸಿಬಿ ಬಹಿರಂಗ ಪಡಿಸಿದೆ. ಮೊಣಕಾಲಿನ ಗಾಯದಿಂದಾಗಿ ಮೋಲಿನೆಕ್ಸ್ WPL (2025) ಮುಂದಿನ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ ಎಂದು ತಿಳಿಸಿದೆ.
ಮೊಲಿನೆಕ್ಸ್:ಎಡಗೈ ಆಫ್-ಸ್ಪಿನ್ ಬೌಲರ್ ಆಗಿರುವ ಮೊಲಿನೆಕ್ಸ್ ಆಸ್ಟ್ರೇಲಿಯಾ ಪರ ಒಟ್ಟು 44 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 3 ಟೆಸ್ಟ್, 13 ಏಕದಿನ ಮತ್ತು 28 ಟಿ- 20 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಒಟ್ಟು 71 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಟೆಸ್ಟ್‌ನಲ್ಲಿ 7, ಏಕದಿನದಲ್ಲಿ 23 ಮತ್ತು ಟಿ-20 ಗಳಲ್ಲಿ 41 ವಿಕೆಟ್ ಉರುಳಿಸಿದ್ದಾರೆ.