ನವದೆಹಲಿ:ರಣಜಿ ಟ್ರೋಫಿಯಲ್ಲಿ ಬರೋಡಾ ವಿರುದ್ಧದ ಕ್ವಾರ್ಟರ್ಫೈನಲ್ ಪಂದ್ಯಕ್ಕೆ ಬೆನ್ನುನೋವಿನ ಕಾರಣ ಲಭ್ಯರಿಲ್ಲ ಎಂದು ಅಯ್ಯರ್ ಹೇಳಿದ್ದಾರೆ. ಆದರೆ, ಅಯ್ಯರ್ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ತಿಳಿಸಿದೆ. ಇದರಿಂದ ಭಾರತ ಟೆಸ್ಟ್ ತಂಡದಿಂದ ಹೊರಬಿದ್ದಿರುವ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಫಿಟ್ನೆಸ್ ಬಗ್ಗೆ ಗೊಂದಲ ಏರ್ಪಟ್ಟಿದೆ.
ರಣಜಿ ಪಂದ್ಯದಲ್ಲಿ ಮುಂಬೈ ಪರವಾಗಿ ಆಡಲು ಶ್ರೇಯಸ್ ಅಯ್ಯರ್ ಅವರನ್ನು ಎಂಸಿಎ ಕೋರಿತ್ತು. ಆದರೆ, ಬೆನ್ನು ನೋವಿನ ಕಾರಣ ತಾವು ಪಂದ್ಯಕ್ಕೆ ಲಭ್ಯರಿಲ್ಲ ಎಂದು ಶ್ರೇಯಸ್ ತಿಳಿಸಿದ್ದರು. ಈ ಕುರಿತು ಎನ್ಸಿಗೆ ಮುಂಬೈ ಕ್ರಿಕೆಟ್ ಬೋರ್ಡ್ ಮಾಹಿತಿ ನೀಡಿದೆ. ಆದರೆ, ಕ್ರಿಕೆಟಿಗನಿಗೆ ಯಾವುದೇ ಗಾಯವಾಗಿಲ್ಲ. ಅವರು ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಅಕಾಡೆಮಿಯ ಮುಖ್ಯಸ್ಥ ನಿತಿನ್ ಪಟೇಲ್ ಇಮೇಲ್ ಮೂಲಕ ಮಂಡಳಿಗೆ ಮಾಹಿತಿ ನೀಡಿದ್ದಾರೆ.
ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯಗಳು ಫೆಬ್ರವರಿ 23 ಮತ್ತು ಫೆಬ್ರವರಿ 27ರ ನಡುವೆ ನಡೆಯಲಿದೆ. ಬರೋಡಾ ವಿರುದ್ಧ ಮುಂಬೈ ಸೆಣಸಾಡಲಿದೆ. ಇದರಿಂದ ಶ್ರೇಯಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಮುಂಬೈ ಪ್ಲಾನ್ ಮಾಡಿದೆ. ಆದರೆ, ಅಯ್ಯರ್ ಅವರೇ ಬೆನ್ನುನೋವಿನ ಕಾರಣ ನೀಡಿ ಪಂದ್ಯದಿಂದ ಹೊರಗುಳಿದಿದ್ದಾರೆ.