ಪ್ಯಾರಿಸ್ (ಫ್ರಾನ್ಸ್): ಪ್ಯಾರಿಸ್ ಒಲಿಂಪಿಕ್ಸ್ 2024ರ ಮಹಿಳೆಯರ ವೈಯಕ್ತಿಕ 10 ಮೀಟರ್ ಏರ್ ರೈಫಲ್ ಫೈನಲ್ನ ಪಂದ್ಯದ ಅರ್ಹತಾ ಸುತ್ತಿನಲ್ಲಿ ಭಾರತದ ಶೂಟರ್ ರಮಿತಾ ಜಿಂದಾಲ್ ಅವರು ಹೊರಬಿದ್ದಿದ್ದಾರೆ. ಸೋಮವಾರ ನಡೆದ ಈ ಕ್ರೀಡಾ ಪಂದ್ಯದಲ್ಲಿ ಶೂಟ್-ಆಫ್‌ನಲ್ಲಿ ಫ್ರಾನ್ಸ್‌ನ ಆಟಗಾರ್ತಿ ಓಸಿಯಾನ್ನೆ ವಿರುದ್ಧ ಸೆಣಸಾಡಿ ಕೇವಲ 0.3 ಅಂಕ ಹಿನ್ನಡೆ ಅನುಭವಿಸಿ 7ನೇ ಸ್ಥಾನಕ್ಕೆ ತಲುಪಿ ಪಂದ್ಯದಿಂದ ಹೊರಬಿದ್ದರು.
ಮೊದಲ ಸುತ್ತಿನಿಂದಲೇ ಹಿನ್ನಡೆ: ರಮಿತಾ ಅವರು ಮೊದಲ ಸುತ್ತಿನಲ್ಲೇ ಕೆಟ್ಟ ಆರಂಭವನ್ನು ಮಾಡಿದರು. ಮೊದಲ ಸುತ್ತು ಮುಕ್ತಾಯದ ವೇಳೆಗೆ, ರಮಿತಾ ಕ್ರಮವಾಗಿ 10.3, 10.2, 10.6, 10.9, 10.5 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರು. ಬಳಿಕ 2ನೇ ಸುತ್ತಿನಲ್ಲಿ ಕೊನೆಯ ಹಂತದಲ್ಲಿ ರಮಿತಾ ಅವರ ಪ್ರದರ್ಶನವು ನಿರಾಶದಾಯಕವಾಗಿತ್ತು. ಈ ಕಾರಣದಿಂದಾಗಿ ಅವರು ಕೇವಲ 9.7 ಅಂಕಗಳನ್ನು ಪಡೆದರು. ಈ ಫಲಿತಾಂಶವು ರಮಿತಾರನ್ನು ಸ್ಪರ್ಧೆಯಿಂದ ಎಲಿಮಿನೇಟ್ಗೆ ದೂಡಿತು. ಇದಕ್ಕೂ ಮೊದಲು, ರಮಿತಾ ಮೂರನೇ ಸ್ಥಾನದಲ್ಲಿದ್ದರು, ಆದರೆ ಕೆಟ್ಟ್ ಶೂಟಿಂಗ್ನಿಂದಾಗಿ ಹೆಚ್ಚಿನ ಅಂಕ ಕಲೆಹಾಕಲಾಗದೇ ಏಳನೇ ಸ್ಥಾನಕ್ಕೆ ಕುಸಿದರು. 10ನೇ ಸುತ್ತಿನಲ್ಲಿ 9.7 ಅಂಕ ಗಳಿಸಿದ್ದರಿಂದ ಏಳನೇ ಸ್ಥಾನಕ್ಕೆ ಕುಸಿದರು.