ಕರ್ನಾಟಕ

karnataka

ETV Bharat / sports

ಫ್ರೆಂಚ್ ಓಪನ್: ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದ 14 ಬಾರಿಯ ಚಾಂಪಿಯನ್​ ನಡಾಲ್! - Rafael Nadal - RAFAEL NADAL

ಫ್ರೆಂಚ್​ ಓಪನ್​ ಟೆನ್ನಿಸ್ ಟೂರ್ನಿಯಲ್ಲಿ 14 ಬಾರಿಯ ಚಾಂಪಿಯನ್​ ರಾಫೆಲ್​ ನಡಾಲ್​ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದಾರೆ.

​ ರಾಫೆಲ್​ ನಡಾಲ್​
​ ರಾಫೆಲ್​ ನಡಾಲ್​ (AP)

By ETV Bharat Karnataka Team

Published : May 28, 2024, 9:45 AM IST

ಪ್ಯಾರಿಸ್​:14 ಬಾರಿಯ ಫ್ರೆಂಚ್​ ಓಪನ್​ ಚಾಂಪಿಯನ್​ ರಾಫೆಲ್​ ನಡಾಲ್ ಅವರು​ ಈ ಬಾರಿ ಮೊದಲ ಸುತ್ತಿನಲ್ಲಿಯೇ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದರು.

ಸೋಮವಾರ ಪ್ಯಾರಿಸ್​ನಲ್ಲಿ ನಡೆದ ಫ್ರೆಂಚ್ ಓಪನ್‌ 2024 ಟೆನ್ನಿಸ್​ ಟೂರ್ನಿಯ ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ವಿಶ್ವದ ನಾಲ್ಕನೇ ಶ್ರೇಯಾಂಕದ ಅಲೆಕ್ಸಾಂಡರ್​ ಜ್ವೆರೆವ್​ ವಿರುದ್ದ 3-6, 6-7, 3-6 ಸೆಟ್‌ಗಳಿಂದ ಅವರು ಸೋಲುಂಡರು. ಈ ಮೂಲಕ ನಾಲ್ಕನೇ ಸುತ್ತಿಗೂ ಮುನ್ನವೇ ನಡಾಲ್ ಫ್ರೆಂಚ್​ ಓಪನ್​ ಟೂರ್ನಿಯಿಂದ ಔಟ್‌ ಆಗಿದ್ದಾರೆ.

2005ರಲ್ಲಿ ಫ್ರೆಂಚ್​ ಒಪನ್​ ಪ್ರಶಸ್ತಿ ಗೆದ್ದ ನಂತರ ಇದುವರೆಗೂ ಆಡಿದ 116 ಪಂದ್ಯಗಳಲ್ಲಿ ನಡಾಲ್​ ಅವರಿಗಿದು ನಾಲ್ಕನೇ ಸೋಲು. 2010ರಲ್ಲಿ ರಾಬಿನ್​ ಸೊಡರ್ಲಿಂಗ್​, 2015 ಮತ್ತು 2021ರಲ್ಲಿ ಟೆನ್ನಿಸ್​ ದಿಗ್ಗಜ ನೊವಾಕ್​ ಜೊಕೊವಿಕ್​ ವಿರುದ್ದ ನಡಾಲ್‌ಗೆ ಸೋಲಾಗಿತ್ತು.

ಟೆನ್ನಿಸ್‌ಗೆ ನಡಾಲ್‌ ವಿದಾಯ?: ಪಂದ್ಯದ ಬಳಿಕ ಮಾತನಾಡಿದ ನಡಾಲ್​, "ಇದು ನನ್ನ ಕೊನೆಯ ಪಂದ್ಯವಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ನಾನಿರುವಷ್ಟು ಸಮಯ ಇದನ್ನು ಆನಂದಿಸಲು ಬಯಸುತ್ತೇನೆ. ಈ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ" ಎಂದರು. ಏತನ್ಮಧ್ಯೆ, ಇದು ಅವರ ಕೊನೆಯ ಪಂದ್ಯವಾಗಲಿದೆ ಎಂದು ವರದಿಯಾಗಿದೆ.

2ನೇ ಅತೀ ಹೆಚ್ಚು ಗ್ರ್ಯಾನ್‌ಸ್ಲಾಮ್ ಗೆದ್ದ ದಾಖಲೆ: ರಾಫೆಲ್ ನಡಾಲ್ ಟೆನ್ನಿಸ್ ಇತಿಹಾಸದಲ್ಲಿ ಅತೀ ಹೆಚ್ಚು ಪುರುಷರ ಸಿಂಗಲ್ಸ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದ ಎರಡನೇ ಆಟಗಾರ. ಈ ಪಟ್ಟಿಯಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಕ್ (24) ಅಗ್ರಸ್ಥಾನದಲ್ಲಿದ್ದರೆ, ಸ್ವಿಟ್ಜರ್ಲೆಂಡ್‌ನ ದಂತಕಥೆ ರೋಜರ್ ಫೆಡರರ್ (20) ಮೂರನೇ ಸ್ಥಾನದಲ್ಲಿದ್ದಾರೆ. ಟೆನಿಸ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಎಲ್ಲಾ ನಾಲ್ಕು ಪ್ರಮುಖ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಗಳನ್ನು ನಡಾಲ್​ ಜಯಿಸಿದ್ದಾರೆ ಎಂಬುದು ಗಮನಾರ್ಹ.

ಇದನ್ನೂ ಓದಿ:ಟೀಂ ಇಂಡಿಯಾ ಕೋಚ್​ ಹುದ್ದೆಗಾಗಿ ಕೆಕೆಆರ್​ ಫ್ರಾಂಚೈಸಿ ಬಿಡ್ತಾರಾ ಗೌತಮ್​ ಗಂಭೀರ್​? - Gautam Gambhir

ABOUT THE AUTHOR

...view details