ನವದೆಹಲಿ: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಟಾರ್ ಆಲ್ರೌಂಡರ್ ಆರ್. ಅಶ್ವಿನ್ ಇತಿಹಾಸ ನಿರ್ಮಿಸಿದ್ದಾರೆ. ಒಂದೆಡೆ, ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಕರ್ಟ್ನಿ ವಾಲ್ಷ್ ಅವರ ದಾಖಲೆಯನ್ನು ಮುರಿದರೆ, ಮತ್ತೊಂದೆಡೆ, ಅತೀ ಹೆಚ್ಚು ಬಾರಿ ಟೆಸ್ಟ್‌ವೊಂದರಲ್ಲೇ ಶತಕದ ಜೊತೆ ಐದು ವಿಕೆಟ್‌ಗಳನ್ನು ಕಬಳಿಸಿ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಾಲ್ಷ್ ದಾಖಲೆ ಮುರಿದ ಅಶ್ವಿನ್:ಟೆಸ್ಟ್‌ನಲ್ಲಿ 519 ವಿಕೆಟ್‌ಗಳನ್ನು ಪೂರ್ಣಗೊಳಿಸುವ ಮೂಲಕ ಅಶ್ವಿನ್ ಮಾಜಿ ಕ್ರಿಕೆಟರ್ ಕರ್ಟ್ನಿ ವಾಲ್ಷ್ ಅವರ ದಾಖಲೆಯನ್ನು ಮುರಿದರು. ಇದರೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಎಂಟನೇ ಮತ್ತು ಭಾರತದ ಎರಡನೇ ಬೌಲರ್ ಆದರು. ಇದಲ್ಲದೇ ಭಾರತದ ಪರ ಟೆಸ್ಟ್‌ನಲ್ಲಿ ಅತೀ ಹೆಚ್ಚು 37 ಬಾರಿ 5 ಮತ್ತು ಅದಕ್ಕಿಂತ ಹೆಚ್ಚಿನ ವಿಕೆಟ್ ಪಡೆದು ಏಕೈಕ ಭಾರತೀಯರಾಗಿದ್ದಾರೆ. ಜತೆಗೆ ಶೇನ್ವಾರ್ನ್ ಅವರ ದಾಖಲೆಯನ್ನು ಸರಿಗಟ್ಟಿದರು. ಅಶ್ವಿನ್ 101 ಟೆಸ್ಟ್ ಪಂದ್ಯಗಳಲ್ಲಿ 37 ಬಾರಿ 5 ವಿಕೆಟ್ ಪಡೆದಿದ್ದರೆ, ಶೇನ್ವಾರ್ನ್ 145 ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ್ದಾರೆ. ಇನ್ನು, ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಲೆಜೆಂಡರಿ ಬೌಲರ್ ಮುತ್ತಯ್ಯ ಮುರಳಿಧರನ್ ಇದ್ದಾರೆ. ಅವರು ಒಟ್ಟು 67 ಬಾರಿ ಟೆಸ್ಟ್ ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು ಪಡೆದಿದ್ದಾರೆ.