ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮನ್ ಸೆಹ್ರಾವತ್ ಕಂಚಿನ ಪದಕ ಗೆದ್ದ ನಂತರ, ರಾಷ್ಟ್ರೀಯ ಕುಸ್ತಿ ಕೋಚ್ ಜಗಮಂದರ್ ಸಿಂಗ್ ಪ್ರತಿಕ್ರಿಯಿಸಿ, ''ನಾವು ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದೆವು. ಆದರೆ, ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು'' ಎಂದು ಹೇಳಿದರು.
ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿದ ಸೆಹ್ರಾವತ್ ಶುಕ್ರವಾರ ಪೋರ್ಟೊ ರಿಕೊದ ಡೇರಿಯನ್ ಕ್ರೂಜ್ ವಿರುದ್ಧ 13-5 ಅಂತರದಲ್ಲಿ ಜಯಗಳಿಸಿ ಪದಕವನ್ನು ಖಚಿತಪಡಿಸಿಕೊಂಡರು. 2024ರ ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿಯಲ್ಲಿ ಕಂಚಿನ ಪದಕ ಪಡೆದ ಭಾರತದ ಮೊದಲಿಗರಾಗಿ ಗುರುತಿಸಿಕೊಂಡಿದ್ದಾರೆ. ಶುಕ್ರವಾರ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಅಮನ್ ಅವರ ಪ್ರದರ್ಶನ ಉತ್ತಮವಾಗಿತ್ತು. ನಾವು ಚಿನ್ನದ ನಿರೀಕ್ಷೆಯಲ್ಲಿದ್ದೆವು. ಆದರೆ, ನಾವು ಕಂಚಿಗೆ ತೃಪ್ತಿಪಡಬೇಕಾಯಿತು. ಆದರೆ, ಮುಂಬರುವ ಸಮಯದಲ್ಲಿ ನಾವು ದೇಶಕ್ಕಾಗಿ ಚಿನ್ನದ ಪದಕಗಳನ್ನು ಗೆಲ್ಲುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ. ಭವಿಷ್ಯದಲ್ಲಿ ಚಿನ್ನ ಗೆಲ್ಲುತ್ತೇನೆ ಎಂದು ಅಮನ್ ಭರವಸೆ ನೀಡಿದ್ದಾರೆ.
ರಾಷ್ಟ್ರೀಯ ಕುಸ್ತಿ ತರಬೇತುದಾರ ವೀರೇಂದ್ರ ಸಿಂಗ್ ಮಾತನಾಡಿ, ''ಸೆಮಿ-ಫೈನಲ್ ಪಂದ್ಯದ ನಂತರ ಅಮನ್ 4.5 ಕೆಜಿಗಳನ್ನು ಹೆಚ್ಚಿಸಿಕೊಂಡಿದ್ದರು. ಅದನ್ನು ಕಳೆದುಕೊಳ್ಳಲು ಉತ್ತಮ ತರಬೇತಿ ಪಡೆಯುವ ಮೂಲಕ ನಿಯಂತ್ರಣಕ್ಕೆ ತಂದೆವು ಎಂದು ಅವರು ಇದೇ ವೇಳೆ ಬಹಿರಂಗಪಡಿಸಿದರು.
ಪಂದ್ಯದ ಸಮಯದಲ್ಲಿ, ಪೋರ್ಟೊ ರಿಕನ್ ಗ್ರ್ಯಾಪ್ಲರ್ ಆರಂಭದಲ್ಲಿ ಒಂದು ಲೆಗ್ ಹಿಡಿತದೊಂದಿಗೆ ಪಾಯಿಂಟ್ ಗಳಿಸುವ ಮೂಲಕ ಮುನ್ನಡೆ ಸಾಧಿಸಿದರು. ಆದಾಗ್ಯೂ, ಡೇರಿಯನ್ ಕ್ರೂಜ್ ಅವರ ಭುಜಗಳನ್ನು ಗುರಿಯಾಗಿಸಿಕೊಂಡು ಅಂಕಗಳನ್ನು ಗಳಿಸಿದ ಅಮನ್ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಿದರು. ಡೇರಿಯನ್ ಕ್ರೂಜ್ ಎರಡು-ಪಾಯಿಂಟ್ ನಡೆಸುವುದರೊಂದಿಗೆ ಮುನ್ನಡೆ ಸಾಧಿಸಿದ ನಂತರ, ಅಮನ್ ಮತ್ತೆ ಬಿಗಿಹಿಡಿತ ಸಾಧಿಸಿದರು. 37 ಸೆಕೆಂಡುಗಳು ಉಳಿದಿರುವಾಗ, ಅಮನ್ ಹೆಚ್ಚುವರಿ ಅಂಕಗಳನ್ನು ಪಡೆದರು. ಅಷ್ಟೇ ಅಲ್ಲ ಈ ಸಂದರ್ಭದಲ್ಲಿ ಎದುರಾಳಿ ಇನ್ನೊಂದು ಅಂಕವನ್ನು ಬಿಟ್ಟುಕೊಟ್ಟಿದ್ದರಿಂದ ತಾಂತ್ರಿಕ ಶ್ರೇಷ್ಠತೆಯೊಂದಿಗೆ ಪಂದ್ಯವನ್ನು ಗೆದ್ದರು.
ಅಮನ್ ಸೆಹ್ರಾವತ್ಗೆ ಅಭಿನಂದಿಸಿದ ಪ್ರಧಾನಿ ಮೋದಿ: ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಫ್ರೀಸ್ಟೈಲ್ 57 ಕೆಜಿ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಭಾರತದ ಗ್ರಾಪ್ಲರ್ ಅಮನ್ ಸೆಹ್ರಾವತ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿದ ಸೆಹ್ರಾವತ್ ಶುಕ್ರವಾರ ಪೋರ್ಟೊ ರಿಕೊದ ಡೇರಿಯನ್ ಕ್ರೂಜ್ ವಿರುದ್ಧ 13-5 ಅಂತರದಲ್ಲಿ ಜಯಗಳಿಸಿ ಪದಕವನ್ನು ಖಚಿತಪಡಿಸಿಕೊಂಡರು.