ಶಿವಮೊಗ್ಗ: ಜಿಲ್ಲೆಯಲ್ಲಿ ಮದ್ಯ ಮಾರಾಟ 2023ಕ್ಕೆ ಹೋಲಿಸಿದರೆ 2024ರಲ್ಲಿ ಕಡಿಮೆಯಾಗಿರುವುದನ್ನು ಜಿಲ್ಲಾ ಅಬಕಾರಿ ಇಲಾಖೆಯ ಅಂಕಿಅಂಶಗಳು ತಿಳಿಸುತ್ತವೆ.
2023ರಲ್ಲಿ ಡಿಸೆಂಬರ್‌ತನಕ 1,90,552 ಮದ್ಯದ ಬಾಕ್ಸ್ಗಳು ಮಾರಾಟವಾಗಿದ್ದವು. 2024ರ ಡಿಸೆಂಬರ್‌ತನಕ 1,79,500 ಬಾಕ್ಸ್ಗಳು ಮಾರಾಟವಾಗಿವೆ. ಒಂದು ವರ್ಷದ ಅವಧಿಯಲ್ಲಿ 11,052 ಬಾಕ್ಸ್ ಕಡಿಮೆ ಮಾರಾಟವಾಗಿದೆ. ಇದರೊಂದಿಗೆ ಇಲಾಖೆಯ ಆದಾಯವೂ ಕಡಿಮೆಯಾಗಿದೆ.
ಜಿಲ್ಲೆಯಲ್ಲಿ ಒಟ್ಟು 331 ಮದ್ಯದಂಗಡಿಗಳಿವೆ. ಇವುಗಳಲ್ಲಿ,
- ಸಿಎಲ್ 7 - 65
- ಬಾರ್ಗಳು- 73
- ಎಂಎಸ್ಐಎಲ್- 62
- ಎಂಆರ್ಪಿ- 131.
ರಾಜ್ಯದಲ್ಲಿ ಕಡಿಮೆ ಮದ್ಯ ಮಾರಾಟ ಮಾಡಿದ ಜಿಲ್ಲೆಗಳ ಪೈಕಿ ಶಿವಮೊಗ್ಗ ಟಾಪ್ 5ನೇ ಸ್ಥಾನದಲ್ಲಿದೆ.
ಜಿಲ್ಲಾ ಅಬಕಾರಿ ಜಂಟಿ ಆಯುಕ್ತ ಬಿ.ಕೆ.ಸುಮಿತಾ ಪ್ರತಿಕ್ರಿಯಿಸಿ, ''ಜಿಲ್ಲೆಯಲ್ಲಿ 2023ಕ್ಕೆ ಹೋಲಿಸಿದರೆ 2024ರಲ್ಲಿ 11 ಸಾವಿರ ಬಾಕ್ಸ್ ಮದ್ಯ ಮಾರಾಟ ಕಡಿಮೆಯಾಗಿದೆ. 2023ರಲ್ಲಿ 1.90 ಸಾವಿರ ಬಾಕ್ಸ್ ಮಾರಾಟವಾಗಿತ್ತು. 2024ರಲ್ಲಿ 1.79 ಸಾವಿರ ಬಾಕ್ಸ್ ಮಾರಾಟವಾಗಿದೆ'' ಎಂದು ತಿಳಿಸಿದರು.
''ಹೊಸ ವರ್ಷ ಈ ಬಾರಿ ಮಂಗಳವಾರ ಬಂದಿದೆ. ಇದು ಕೆಲಸ ನಿರ್ವಹಿಸುವ ದಿನ. ಅಲ್ಲದೇ ಬುಧವಾರವೂ ಸಹ ಕೆಲಸದ ದಿನವಾಗಿತ್ತು. ಕಳೆದ ಬಾರಿ ಶಿವಮೊಗ್ಗ ನಗರದ ಎಲ್ಲಾ ಕ್ಲಬ್ಗಳಲ್ಲಿ ಹೊಸ ವರ್ಷಾಚರಣೆ ಜೋರಾಗಿತ್ತು. ಕ್ಲಬ್ ಸದಸ್ಯರಿಗೆ ಹಾಗೂ ಅತಿಥಿಗಳಿಗೂ ಅವಕಾಶ ನೀಡಲಾಗಿತ್ತು. ಈ ಬಾರಿ ಕೇವಲ ಒಂದು ಕ್ಲಬ್ನಲ್ಲಿ ಮಾತ್ರ ಹೊಸ ವರ್ಷಾಚರಣೆ ನಡೆಸಲಾಗಿರುವುದು ಮದ್ಯ ಮಾರಾಟ ಇಳಿಯಲು ಇತರೆ ಕಾರಣಗಳು" ಎಂದು ಅವರು ಹೇಳಿದರು.
''ಕಳೆದ ವರ್ಷ ನಾಲ್ಕು ಬ್ರ್ಯಾಂಡ್ಗಳ ದರ ಏರಿಕೆ ಆಗುತ್ತದೆ ಎಂದು ಹೇಳಲಾಗಿತ್ತು. ಇದರಿಂದಾಗಿ ಹೆಚ್ಚು ಖರೀದಿಯಾಗಿತ್ತು. ಡಿಸೆಂಬರ್ನಲ್ಲಿ ಕ್ರಿಸ್ಮಸ್ ಜೊತೆಗೆ ಹೊಸ ವರ್ಷ ಬರುವ ಕಾರಣಗಳಿಂದಾಗಿ ಮದ್ಯ ಹೆಚ್ಚು ಮಾರಾಟ ಆಗುತ್ತದೆ. ಕಳೆದ ವರ್ಷ ವಾರಾಂತ್ಯದಲ್ಲಿ ಹೊಸ ವರ್ಷ ಬಂದಿದ್ದರಿಂದ ಮದ್ಯ ಜಾಸ್ತಿ ಮಾರಾಟವಾಗಿತ್ತು. ಆದರೆ ಈ ಬಾರಿ ಅದು ನಡೆದಿಲ್ಲ'' ಎಂದರು.
ಇದನ್ನೂ ಓದಿ: ಹೊಸ ವರ್ಷಾಚರಣೆ: ಅರ್ಧ ದಿನದಲ್ಲಿ ₹308 ಕೋಟಿ ಮೌಲ್ಯದ ಭರ್ಜರಿ ಮದ್ಯ ಮಾರಾಟ - LIQUOR SALE FOR NEW YEAR
ಇದನ್ನೂ ಓದಿ: ಹೊಸ ವರ್ಷಾಚರಣೆ ವೇಳೆ ಪಾನಮತ್ತರಾಗಿ ವಾಹನ ಚಾಲನೆ; ತಡರಾತ್ರಿ 513 ಪ್ರಕರಣ ದಾಖಲು - DRUNK AND DRIVING