ಪ್ಯಾರಿಸ್: ಕ್ರೀಡೆಗಳ ಮಹಾಸಂಗಮವಾದ ಒಲಿಂಪಿಕ್ಸ್ ಈ ಬಾರಿ ಫ್ರಾನ್ಸ್‌ನಲ್ಲಿ ನಡೆಯಲಿದೆ. ಪ್ಯಾರಿಸ್ ಒಲಿಂಪಿಕ್ಸ್ಗೆ 100 ದಿನಗಳು ಮಾತ್ರ ಬಾಕಿ ಇದ್ದು, ಅದ್ಧೂರಿ ಉದ್ಘಾಟನೆಗೆ ಸಿದ್ಧತೆಗಳು ನಡೆಯುತ್ತಿವೆ. ಸೀನ್ ನದಿ ಮೇಲೆ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಲು ಯೋಜಿಸಲಾಗಿತ್ತು. ಆದರೆ, ಭದ್ರತೆ ಮತ್ತು ಸುರಕ್ಷತೆ ಕಾರಣಗಳಿಗಾಗಿ ಕ್ರೀಡಾಂಗಣದಲ್ಲಿ ನಡೆಸುವ ಸಾಧ್ಯತೆ ಇದೆ.
ಇಲ್ಲಿ ಹರಿಯುತ್ತಿರುವ ಸೀನ್ ನದಿಯು ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನೆಗೆ ವೇದಿಕೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಭದ್ರತೆ ಮತ್ತು ಸುರಕ್ಷತಾ ಅಡ್ಡಿಗಳು ಇರುವ ಕಾರಣ ಇನ್ನೂ ಯಾವುದು ನಿಕ್ಕಿಯಾಗಿಲ್ಲ. ಸೀನ್ ನದಿಯ ಮೇಲೆ ಒಲಿಂಪಿಕ್ಸ್ ಕೂಟವನ್ನು ಅದ್ಧೂರಿಯಾಗಿ ಆರಂಭಿಸುವ ಇರಾದೆ ಇದೆ. ಸುರಕ್ಷತಾ ನಿಯಮಗಳ ಅನುಸಾರ ಆಯೋಜನೆ ಮಾಡಲಾಗುವುದು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಅಗತ್ಯಬಿದ್ದರೆ ಸ್ಥಳ ಬದಲು:ಸೀನ್ ನದಿಯ ಮೇಲೆ ಉದ್ಘಾಟನಾ ಕಾರ್ಯಕ್ರಮ ನಡೆದಲ್ಲಿ ಒಲಿಂಪಿಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗೆ ನಡೆದ ಕಾರ್ಯಕ್ರಮ ಇದಾಗಲಿದೆ. ಸುರಕ್ಷತಾ ಕ್ರಮಗಳು ಸಾಕಾಗದಿದ್ದಲ್ಲಿ ಸಮಾರಂಭವನ್ನು ಸ್ಟೇಡ್ ಡಿ ಫ್ರಾನ್ಸ್ ರಾಷ್ಟ್ರ್ರೀಯ ಕ್ರೀಡಾಂಗಣದಲ್ಲಿ ನಡೆಸಲಾಗುವುದು ಎಂದು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ತಿಳಿಸಿದ್ದಾರೆ. ಆದರೂ ನಾವು ಈ ಕಾರ್ಯಕ್ರಮವನ್ನು ನದಿಯಲ್ಲಿ ಆಯೋಜಿಸಲು ಬದ್ಧರಾಗಿದ್ದೇವೆ ಎಂದಿದ್ದಾರೆ.