ಪ್ಯಾರಿಸ್(ಫ್ರಾನ್ಸ್): ಭಾರತದ ಕುಸ್ತಿಪಟು ಅಮನ್ ಸೆಹ್ರಾವತ್ ಅವರು ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿ ಪಂದ್ಯದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಇಂದು ನಡೆದ ಪುರುಷರ ಫ್ರೀಸ್ಟೈಲ್ 57 ಕೆ.ಜಿ ಪ್ರೀ-ಕ್ವಾರ್ಟರ್ ಪಂದ್ಯದಲ್ಲಿ ಯುರೋಪಿಯನ್ ಚಾಂಪಿಯನ್ಶಿಪ್ ಚಿನ್ನ ವಿಜೇತ ನಾರ್ತ್ ಮೆಸಿಡೋನಿಯಾದ ವ್ಲಾಡಿಮಿರ್ ಎಗೊರೊವ್ ಅವರನ್ನು ಸೆಹ್ರಾವತ್ ಮಣಿಸಿದರು. ಇದರೊಂದಿಗೆ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟರು.
ಅಮನ್ ತನ್ನ ಎದುರಾಳಿ ಮೇಲೆ ಆರಂಭದಿಂದಲೇ ಪ್ರಾಬಲ್ಯ ತೋರಿಸಿದರು. ಅಂತಿಮವಾಗಿ, ತಾಂತ್ರಿಕ ಶ್ರೇಷ್ಠತೆಯ ಆಧಾರದ ಮೇಲೆ 10-0 ಅಂತರದಿಂದ ಪಂದ್ಯ ಗೆದ್ದುಕೊಂಡರು. ಅಮನ್ ಸೆಹ್ರಾವತ್ ವಿಶ್ವ ರ್ಯಾಂಕಿಂಗ್ನಲ್ಲಿ ಆರನೇ ಸ್ಥಾನದಲ್ಲಿದ್ದಾರೆ.
ಪಂದ್ಯಾರಂಭದ ಮೊದಲು ಸುತ್ತಿನಲ್ಲಿ ಅಮನ್ ವ್ಲಾಡಿಮಿರ್ ಅವರನ್ನು ರಿಂಗ್ನಿಂದ ಹೊರಕ್ಕೆ ತಳ್ಳಿ 2-0 ಮುನ್ನಡೆ ಕಾಯ್ದುಕೊಂಡರು. ಇದಾದ ನಂತರ ಅಮನ್ ಹಿಂತಿರುಗಿ ನೋಡಲಿಲ್ಲ. ಎರಡನೇ ಅವಧಿಯಲ್ಲಿ 2 ನಿಮಿಷ ಬಾಕಿ ಇರುವಾಗಲೇ ತಾಂತ್ರಿಕ ಶ್ರೇಷ್ಠತೆಯ ಆಧಾರದ ಮೇಲೆ ಮೊದಲ ಬೌಟ್ನಲ್ಲಿ 10-0 ಅಂತರದಿಂದ ಜಯಗಳಿಸುವ ಮೂಲಕ ಕ್ವಾರ್ಟರ್ ಫೈನಲ್ನಲ್ಲಿ ಸ್ಥಾನ ಪಡೆದರು. ಎಗೊರೊವ್ ರೆಪೆಚೇಜ್ ಸುತ್ತು ತಲುಪುವ ಸಾಧ್ಯತೆ ಇದೆ.
ಇದನ್ನೂ ಓದಿ:ವಿನೇಶ್ ನೀನು ಸೋತಿಲ್ಲ, ಸೋಲಿಸಲಾಗಿದೆ: ಫೋಗಟ್ ನಿವೃತ್ತಿಗೆ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಪ್ರತಿಕ್ರಿಯೆ - Paris Olympics 2024