ನವದೆಹಲಿ: ಭಾರತದ ಪ್ರತಿಭಾವಂತ ಶೂಟರ್ ಮನು ಭಾಕರ್ 25 ಮೀಟರ್ ಮಹಿಳೆಯರ ಪಿಸ್ತೂಲ್ ಅರ್ಹತಾ ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇಂದು ನಡೆದ ಸ್ಪರ್ಧೆಯಲ್ಲಿ ಒಟ್ಟು 590 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದ್ದಾರೆ.
ಮನು ಭಾಕರ್ ಈಗಾಗಲೇ ಎರಡು ಪದಕ ಗೆದ್ದಿದ್ದಾರೆ. ನಾಳೆ ಫೈನಲ್ ನಡೆಯಲಿದ್ದು, ಅಗ್ರ ಮೂರು ಸ್ಪರ್ಧಿಗಳಲ್ಲಿ ಸ್ಥಾನ ಪಡೆದರೆ ಮನು ಸತತ ಮೂರನೇ ಪದಕ ಸಾಧನೆ ಮಾಡುವರು.
25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಮತ್ತೋರ್ವ ಸ್ಪರ್ಧಿ ಇಶಾ ಸಿಂಗ್ ಒಟ್ಟು 581 ಅಂಕಗಳೊಂದಿಗೆ 18ನೇ ಸ್ಥಾನ ಗಿಟ್ಟಿಸಿಕೊಂಡರು.