ಕರ್ನಾಟಕ

karnataka

ETV Bharat / sports

ಒಲಿಂಪಿಕ್ಸ್​ ಬ್ಯಾಡ್ಮಿಂಟನ್​: ಭಾರತದ ನಾಲ್ವರು ಷಟ್ಲರ್​ಗಳು ಬರಿಗೈಯಲ್ಲಿ ವಾಪಸ್​ - Paris Olympics Badminton - PARIS OLYMPICS BADMINTON

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ಆಟಗಾರರು ಒಂದೇ ಒಂದು ಪದಕ ಗೆಲ್ಲಲು ಸಾಧ್ಯವಾಗದೇ ಬರಿಗೈಯಲ್ಲಿ ಸ್ವದೇಶಕ್ಕೆ ವಾಪಸಾಗಿದ್ದಾರೆ.

ಒಲಿಂಪಿಕ್ಸ್​ನಲ್ಲಿ 4 ಷಟ್ಲರ್​ಗಳಿಗೆ ಸೋಲು
ಪ್ಯಾರಿಸ್‌ ಒಲಿಂಪಿಕ್ಸ್​ನಲ್ಲಿ ಭಾರತದ 4 ಷಟ್ಲರ್​ಗಳಿಗೆ ಸೋಲು (IANS)

By ETV Bharat Sports Team

Published : Aug 6, 2024, 8:03 PM IST

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ ಆರಂಭವಾಗಿ ಇಂದಿಗೆ 10 ದಿನ. ಜಾಗತಿಕ ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ ಒಟ್ಟು 3 ಪದಕ ಸಾಧನೆ ಮಾಡಿದೆ. ಈ ಪೈಕಿ 2 ಪದಕಗಳನ್ನು ಮಹಿಳಾ ಶೂಟರ್ ಮನು ಭಾಕರ್ ಗೆದ್ದಿದ್ದಾರೆ.

ಬ್ಯಾಡ್ಮಿಂಟನ್ ಆಟಗಾರರಿಂದ ಪದಕಗಳ ನಿರೀಕ್ಷೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಕಳೆದ ಮೂರು ಒಲಿಂಪಿಕ್ಸ್‌ ನಂತರ ಭಾರತದ ಶಟ್ಲರ್‌ಗಳು ಇದೇ ಮೊದಲ ಬಾರಿಗೆ ಪದಕವಿಲ್ಲದೆ ನಿರಾಸೆಯಿಂದ ತವರಿಗೆ ಮರಳಿದ್ದಾರೆ.

ಯಾವ ಒಲಿಂಪಿಕ್ಸ್‌ನಲ್ಲಿ ಭಾರತ ಎಷ್ಟು ಪದಕ ಗೆದ್ದಿತ್ತು?:

  • 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಮಹಿಳಾ ಷಟ್ಲರ್ ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದಿದ್ದರು.
  • 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಪಿ.ವಿ.ಸಿಂಧು ಬೆಳ್ಳಿ ಪದಕ ಜಯಿಸಿದ್ದರು.
  • 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಿ.ವಿ.ಸಿಂಧು ಕಂಚಿನ ಪದಕ ಗೆದ್ದಿದ್ದರು.

ಈ ಬಾರಿ 22 ವರ್ಷದ ಯುವ ಷಟ್ಲರ್ ಲಕ್ಷ್ಯ ಸೇನ್ ಕಂಚಿನ ಪದಕ ಪಡೆಯುವ ಅವಕಾಶ ಹೊಂದಿದ್ದರು. ಗಾಯದ ಸಮಸ್ಯೆಯಿಂದಾಗಿ ಪದಕ ಗೆಲ್ಲಲು ಅವರಿಗೆ ಸಾಧ್ಯವಾಗಲಿಲ್ಲ.

ಉಳಿದಂತೆ, ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಅವರಿಂದ ಪದಕ ನಿರೀಕ್ಷೆಯಲ್ಲಿತ್ತು. ಆದರೆ ಅವರು ಕ್ವಾರ್ಟರ್-ಫೈನಲ್‌ನಲ್ಲಿ ಸೋಲನುಭವಿಸಿ ಕೂಟದಿಂದ ಹೊರಬಿದ್ದರು. ಇದರ ನಂತರ, ಪುರುಷರ ಡಬಲ್ಸ್‌ ಜೋಡಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಅವರೂ ಪದಕ ಗೆಲ್ಲುತ್ತಾರೆ ಎಂದೇ ಅಂದಾಜಿಸಲಾಗಿತ್ತು. ಆದರೆ ಕ್ವಾರ್ಟರ್ ಫೈನಲ್​ನಲ್ಲಿ ಸೋಲು ಕಂಡರು. ಇದರೊಂದಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಪದಕ ಕನಸು ಭಗ್ನಗೊಂಡಿತು.

ಇದನ್ನೂ ಓದಿ:ಒಲಿಂಪಿಕ್ಸ್ ಹಾಕಿಯಲ್ಲಿಂದು ಮತ್ತೊಂದು ರೋಮಾಂಚಕ ಪಂದ್ಯ ನಿರೀಕ್ಷೆ: ಭಾರತ vs ಜರ್ಮನಿ ಸೆಮಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ! - Olympics Hockey Semi Final

ABOUT THE AUTHOR

...view details