1 Ball 7 Runs:ವಿಶ್ವದ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿರುವ ಕ್ರಿಕೆಟ್‌ನಲ್ಲಿ ಈವರೆಗೂ ಹಲವಾರು ದಾಖಲೆಗಳು ನಿರ್ಮಾಣವಾಗಿವೆ ಮತ್ತು ಮುರಿದಿವೆ. ಆದರೆ ಕೆಲವು ಅಪರೂಪದ ದಾಖಲೆಗಳಿವೆ. ಈ ಕುರಿತು ಹೆಚ್ಚಿನವರಿಗೆ ತಿಳಿದಿಲ್ಲ. ಈ ಪೈಕಿ ಒಂದು, ಬ್ಯಾಟರ್‌ವೋರ್ವ ನೋಬಾಲ್, ವೈಡ್, ಬೌಂಡರಿ ಇಲ್ಲದೆಯೇ 1 ಎಸೆತದಲ್ಲಿ 7ರನ್ ಸಿಡಿಸಿರುವುದು.
Aus vs Pak Test Series: 1981ರಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿಗೆ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಸರಣಿಯ 3ನೇ ಮತ್ತು ಕೊನೆಯ ಪಂದ್ಯ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದಿತ್ತು. ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ, ಮುದಾಸರ್ ನಝರ್ (95), ಮಜಿದ್ ಖಾನ್ (74), ಜಾವೇದ್ ಅಬ್ಬಾಸ್ (90), ವಾಸೀಂ ರಜಾ (50), ಇಮ್ರಾನ್ ಖಾನ್ (70) ಬ್ಯಾಟಿಂಗ್ ನೆರವಿನಿಂದ ಮೊದಲ ಇನ್ನಿಂಗ್ಸ್ನಲ್ಲಿ 500 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿ, ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
ಇದಕ್ಕುತ್ತರವಾಗಿ ಆಸೀಸ್ ಎರಡೂ ಇನ್ನಿಂಗ್ಸ್ ಆಡಿದರೂ ಈ ಗುರಿಯನ್ನು ತಲುಪಲಾಗದೇ 82 ರನ್‌ಗಳಿಂದ ಸೋಲನುಭವಿಸಿತು. ಮೊದಲ ಇನ್ನಿಂಗ್ಸ್ನಲ್ಲಿ 293/10 ಎರಡನೇ ಇನ್ನಿಂಗ್ಸ್ನಲ್ಲಿ 125ಕ್ಕೆ ಆಲೌಟ್ ಆಯಿತು. ಇದರೊಂದಿಗೆ ಪಾಕಿಸ್ತಾನ ಇನ್ನಿಂಗ್ಸ್‌ಸಮೇತ ಪಂದ್ಯ ಗೆದ್ದುಕೊಂಡಿತ್ತು. ಇದೇ ಪಂದ್ಯದಲ್ಲಿ ಮಜಿದ್ ಖಾನ್ ಅಪರೂಪದ ದಾಖಲೆ ಬರೆದರು.