ಕರ್ನಾಟಕ

karnataka

ETV Bharat / sports

ಪಂದ್ಯದ ಟಿಕೆಟ್​ಗಾಗಿ ಟ್ರ್ಯಾಕ್ಟರ್​ ಮಾರಿದ ಪಾಕ್​ ಅಭಿಮಾನಿ: ಸೋಲಿನಿಂದ ತೀವ್ರ ಆಘಾತ - IND vs PAK - IND VS PAK

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಪಾರಮ್ಯ ಮುಂದುವರೆಸಿದ್ದು, ಅಭಿಮಾನಿಗಳು ಸಂಭ್ರಮದ ಅಲೆಯಲ್ಲಿ ತೇಲಿದ್ದಾರೆ. ಅತ್ತ, ನೆರೆಯ ರಾಷ್ಟ್ರದ ಅಭಿಮಾನಿಗಳು ಸೋಲಿನಿಂದ ನಿರಾಸೆ ವ್ಯಕ್ತಪಡಿಸಿದ್ದಾರೆ.

pakistan fan
ಕ್ರಿಕೆಟ್​ ಪಂದ್ಯಕ್ಕಾಗಿ ಟ್ರ್ಯಾಕ್ಟರ್​ ಮಾರಿದ ಪಾಕ್​ ಅಭಿಮಾನಿ (ANI)

By ANI

Published : Jun 10, 2024, 10:03 AM IST

ನ್ಯೂಯಾರ್ಕ್ (ಯುಎಸ್):ಭಾರತ ತಂಡ ಪಾಕಿಸ್ತಾನದ ವಿರುದ್ಧ ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಏಳನೇ ಗೆಲುವು ದಾಖಲಿಸುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು. ದೇಶದ ಹಲವೆಡೆ ಕ್ರಿಕೆಟ್​ ಪ್ರಿಯರು ಸಾಂಪ್ರದಾಯಿಕ ಎದುರಾಳಿಯ​ ವಿರುದ್ಧದ ಜಯವನ್ನು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅತ್ತ ಪಾಕ್​ನಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದ್ದು, ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು​ ನಿರಾಸೆಗೆ ಒಳಗಾಗಿದ್ದಾರೆ. ಅದರಲ್ಲೂ ಅಭಿಮಾನಿಯೊಬ್ಬ ನ್ಯೂಯಾರ್ಕ್​​ನಲ್ಲಿ ಪಂದ್ಯ ವೀಕ್ಷಣೆಗೆ ತನ್ನ ಟ್ರ್ಯಾಕ್ಟರ್​​ ಅನ್ನೇ​ ಮಾರಾಟ ಮಾಡಿದ್ದು, ತಂಡವು ಸೋತಿದ್ದರಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.

ಪಾಕ್​ಗೆ ಮತ್ತೊಮ್ಮೆ ಮಾರಕವಾಗಿ ಪರಿಣಮಿಸಿದ ವೇಗಿ ಜಸ್ಪ್ರೀತ್​ ಬುಮ್ರಾ (14ಕ್ಕೆ 3) ಗೆಲುವಿನ ಕನಸಿಗೆ ತಣ್ಣೀರೆರಚಿದರು. ಪಾಕಿಸ್ತಾನದ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಿದ್ದಲ್ಲದೇ, ಮೂರು ವಿಕೆಟ್‌ಗಳನ್ನು ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬ್ಯಾಟಿಂಗ್​ನಲ್ಲಿ ಮಿಂಚಿದ ರಿಷಭ್​ ಪಂತ್​ ಅಮೂಲ್ಯ 42 ರನ್​ ಬಾರಿಸಿದ್ದಲ್ಲದೇ, ಕೀಪಿಂಗ್​ನಲ್ಲಿ ಮೂರು ಉತ್ತಮ ಕ್ಯಾಚ್​ಗಳನ್ನು ಹಿಡಿದು ತಂಡದ ಮೇಲುಗೈಗೆ ನೆರವಾಗಿದ್ದರು. ಅಮೆರಿಕದ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಭಾರತವು ದಾಖಲೆಯ ವಿಜಯ ಸಾಧಿಸಿ, ಎ ಗ್ರೂಪ್​ನಲ್ಲಿ ಅಗ್ರಸ್ಥಾನದಲ್ಲಿದೆ.

ಪಂದ್ಯದ ವೀಕ್ಷಣೆಗೆ ನಸ್ಸೌ ಕೌಂಟಿ ಸ್ಟೇಡಿಯಂಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಪ್ರೇಕ್ಷಕರ ಗ್ಯಾಲರಿಯು ಹೆಚ್ಚಾಗಿ ನೀಲಿ ಬಣ್ಣದಿಂದ ಸೆಳೆದಿದ್ದಲ್ಲದೆ, "ಇಂಡಿಯಾ ಇಂಡಿಯಾ" ಎಂಬ ಘೋಷಣೆ ಮೊಳಗಿತು. ಈ ವೇಳೆ ಕ್ರಿಕೆಟ್​ ಪಂದ್ಯ ವೀಕ್ಷಣೆಗೆ ಪಾಕ್​ ಅಭಿಮಾನಿಯೊಬ್ಬರು ತಮ್ಮ ಟ್ರ್ಯಾಕ್ಟರ್ ಮಾರಾಟ ಮಾಡಿದ್ದರು ಎಂಬುದು ಬೆಳಕಿಗೆ ಬಂದಿದೆ. 3,000 ಅಮೆರಿಕನ್​ ಡಾಲರ್​ ಮೌಲ್ಯದ ಟಿಕೆಟ್ ಖರೀದಿಸಲು ಅಭಿಮಾನಿಯು ತನ್ನ ಬಳಿ ಇದ್ದ ಟ್ರ್ಯಾಕ್ಟರ್ ಅನ್ನೇ ಮಾರಾಟ ಮಾಡಿದ್ದರು. ಆದರೆ, ಮೈದಾನದಲ್ಲಿ ಪಾಕ್​ ಸೋಲುವುದನ್ನು ನೋಡಿದ ಅಭಿಮಾನಿಗೆ ಭಾರಿ ನಿರಾಸೆಯಾಗಿದೆ

ಇದನ್ನೂ ಓದಿ:ಟಿ20 ವಿಶ್ವಕಪ್‌: ಪಾಕಿಸ್ತಾನ ಬಗ್ಗುಬಡಿದ ಭಾರತ; ದಾಖಲೆಯ 6 ರನ್​​ಗಳ​ ಗೆಲುವು - India Beats Pakistan

ಈ ಬಗ್ಗೆ ಎಎನ್​ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅಭಿಮಾನಿ, "ನಾನು 3,000 ಅಮೆರಿಕನ್​ ಡಾಲರ್ ಮೌಲ್ಯದ ಟಿಕೆಟ್ ಪಡೆಯಲು ನನ್ನ ಟ್ರ್ಯಾಕ್ಟರ್ ಮಾರಾಟ ಮಾಡಿದ್ದೇನೆ. ಭಾರತದ ಸ್ಕೋರ್ ನೋಡಿದಾಗ ನಮ್ಮ ತಂಡವು ಸೋಲುತ್ತದೆ ಎಂದು ಭಾವಿಸಿರಲಿಲ್ಲ. ಪಾಕ್​ ಜಯ ಸಾಧಿಸಬಹುದಾದ ಮೊತ್ತ ಎಂದುಕೊಂಡಿದ್ದೆ. ಗೆಲುವು ನಮ್ಮ ಕೈಯಲ್ಲಿತ್ತು. ಆದರೆ, ಬಾಬರ್ ಆಜಮ್ ಔಟಾದ ಬಳಿಕ ಪಂದ್ಯ ತಿರುಗಿತು. ಗೆಲುವಿಗಾಗಿ ನಾನು ಭಾರತೀಯ ಅಭಿಮಾನಿಗಳನ್ನು ಅಭಿನಂದಿಸುತ್ತೇನೆ'' ಎಂದು ಹೇಳಿದರು.

ಭಾರತಲ್ಲಿ ಅಭಿಮಾನಿಗಳ ಸಂಭ್ರಮ: ಟೀಂ ಇಂಡಿಯಾ ಗೆಲ್ಲುತ್ತಿದ್ದಂತೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಭಾರತ ವಿಜಯವನ್ನು ಆಚರಿಸಲು ಬೃಹತ್ ಸಂಖ್ಯೆಯಲ್ಲಿ ಬೀದಿಗಿಳಿದಿದ್ದರು. ನೂರಾರು ಅಭಿಮಾನಿಗಳು ರಸ್ತೆಗಳಲ್ಲಿ ಜಮಾಯಿಸಿ, ಘೋಷಣೆಗಳೊಂದಿಗೆ ಮತ್ತು ಪಟಾಕಿಗಳ ಸಿಡಿಸಿ ಸಂಭ್ರಮಿಸಿದರು. ದೇಶದ ಹಲವೆಡೆ ಅಭಿಮಾನಿಗಳ ಸಂಭ್ರಮ ಕಂಡುಬಂತು.

ಇದನ್ನೂ ಓದಿ:ಭಾರತದ ವಿರುದ್ಧ ಮತ್ತೆ ಮುಖಭಂಗ: ಸೋಲಿಗೆ ಇದೇ ಕಾರಣ ಎಂದ ಪಾಕ್​ ನಾಯಕ ಬಾಬರ್​ - Babar Azam

ABOUT THE AUTHOR

...view details