ಹೈದರಾಬಾದ್: ಯುಎಸ್ ಓಪನ್ ಗ್ರ್ಯಾಂಡ್ಸ್ಲಾಮ್ ಟೆನಿಸ್ ಟೂರ್ನಮೆಂಟ್ನಲ್ಲಿ ಶುಕ್ರವಾರ ವಿಶ್ವದ ಮೂರನೇ ಶ್ರೇಯಾಂಕಿತ ಆಟಗಾರ ಕಾರ್ಲೋಸ್ ಅಲ್ಕರಾಜ್ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದ ಒಂದು ದಿನದ ನಂತರ, ಇದೀಗ ಸ್ಟಾರ್ ಟೆನಿಸ್ ಆಟಗಾರ ನೊವಾಕ್ ಜೋಕೋವಿಕ್ ಕೂಡ ಸೋಲನುಭವಿಸಿ ಹೊರನಡೆದಿದ್ದಾರೆ. ಸರ್ಬಿಯಾದ ಆಟಗಾರನನ್ನು ಆಸ್ಟ್ರೇಲಿಯಾದ 28ನೇ ಶ್ರೇಯಾಂಕದ ಅಲೆಕ್ಸಿ ಪಾಪಿರಿನ್ ನಾಲ್ಕು ಸೆಟ್‌ಗಳಲ್ಲಿ 4-6, 4-6, 6-2, 4-6 ಅಂಕಗಳಿಂದ ಮಣಿಸಿದರು.
ಆರ್ಥರ್ ಆಶ್ ಸ್ಟೇಡಿಯಂನಲ್ಲಿ ನಡೆದ ನಾಲ್ಕು ಸೆಟ್‌ಗಳ ಪಂದ್ಯದಲ್ಲಿ ಜೋಕೋವಿಕ್ 3-1 ಅಂತರದಿಂದ ಪರಾಭವಗೊಂಡಿದ್ದಾರೆ. ಇದರೊಂದಿಗೆ ಜೋಕೋವಿಕ್ 18 ವರ್ಷಗಳ ನಂತರ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ನ ನಾಲ್ಕನೇ ಸುತ್ತಿಗೆ ಪ್ರವೇಶಿಸಿಸದೇ ನಿರ್ಗಮಿಸಿದ್ದಾರೆ. 37 ವರ್ಷದ ಆಟಗಾರ 2017ರ ನಂತರ ಎರಡನೇ ಶ್ರೇಯಾಂಕದ ಜೊಕೊವಿಕ್ ವರ್ಷದಲ್ಲಿ ಒಂದೇ ಒಂದು ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಯನ್ನು ಗೆಲ್ಲದಿರುವುದು ಇದೇ ಮೊದಲು. ಈ ಹಿಂದೆ 2010ರಲ್ಲೂ ಈ ರೀತಿಯಾಗಿತ್ತು. ಇಷ್ಟೇ ಅಲ್ಲ, 2002ರಲ್ಲಿ ಜೊಕೊವಿಕ್, ರಾಫೆಲ್ ನಡಾಲ್ ಮತ್ತು ರೋಜರ್ ಫೆಡರರ್ ಎಂಬ ಮೂವರು ಶ್ರೇಷ್ಠ ಟೆನಿಸ್ ಆಟಗಾರರಲ್ಲಿ ಯಾರೂ ಈ ವರ್ಷದಲ್ಲಿ ಒಂದೇ ಒಂದು ಗ್ರ್ಯಾಂಡ್ ಸ್ಲಾಮ್ ಟ್ರೋಫಿಯನ್ನು ಗೆದ್ದಿರಲಿಲ್ಲ.