ನಾರ್ವೆ:ಪ್ರತಿಷ್ಠಿತ ನಾರ್ವೆ ಚೆಸ್ನ ಟೂರ್ನಿಯ 2ನೇ ಸುತ್ತಿನಲ್ಲೂ ಘಟಾನುಘಟಿಗಳು ಡ್ರಾಗೆ ತೃಪ್ತಿಪಟ್ಟರು. ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದ್, ಕೊನೇರು ಹಂಪಿ ಸೋಲು ಅನುಭವಿಸಿದರು. ವಿಶ್ವನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್, ಅಲಿರೆಜಾ ಫಿರೋಜ್ಜಾ ಮತ್ತು ಚೀನಾದ ಡಿಂಗ್ ಲಿರೆನ್ ಅವರು ಡ್ರಾ ಮಾಡಿಕೊಂಡರೂ ಬಳಿಕ ಟ್ರೈ ಬೇಕರ್ನಲ್ಲಿ ಗೆಲುವು ಪಡೆದರು.
ವಿಶ್ವ ಚಾಂಪಿಯನ್ ಗ್ರ್ಯಾಂಡ್ ಮಾಸ್ಟರ್ ಡಿಂಗ್ ಲಿರೆನ್ ವಿರುದ್ಧ ಎರಡು ಬಾರಿ ಗೆದ್ದಿರುವ ಭಾರತದ ಚದುರಂಗ ಚತುರ ಆರ್.ಪ್ರಗ್ನಾನಂದ ಟೂರ್ನಿಯಲ್ಲಿ ಸೋಲು ಕಂಡರು. ಎರಡನೇ ಸುತ್ತಿನಲ್ಲಿ ಉತ್ತಮ ಆರಂಭದ ಹೊರತಾಗಿಯೂ ಅವರು ಚಾಂಪಿಯನ್ ಆಟಗಾರನ ಮುಂದೆ ಗೆಲ್ಲಲು ಸಾಧ್ಯವಾಗಲಿಲ್ಲ. ಇದು ಇಬ್ಬರ ನಡುವಿನ ಪಂದ್ಯಗಳಲ್ಲಿ ಮೊದಲ ಡ್ರಾ ಆಗಿದೆ. ಪಂದ್ಯ ಡ್ರಾ ಆದ್ದರಿಂದ ಟ್ರೈ ಬ್ರೇಕರ್ ಮೊರೆ ಹೋಗಲಾಯಿತು. ಇದರಲ್ಲಿ ಚುರುಕಿನ ಆಟವಾಡಿದ ಡಿಂಗ್ ಲಿರೆನ್ ಪ್ರಗ್ನಾನಂದ್ ಎದುರು 1.5 ಅಂಕಗಳಿಂದಿಗೆ ಗೆಲುವು ಸಾಧಿಸಿದರು.
ಡ್ರಾ ಕಂಡ ಮ್ಯಾಗ್ನಸ್ ಕಾರ್ಲ್ಸನ್:ದಿನದ ಇನ್ನೊಂದು ಬಹು ನಿರೀಕ್ಷಿತ ಪಂದ್ಯದಲ್ಲಿ ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಮತ್ತು ಹಿಕರು ನಕಮುರಾ ನಡುವಿನ ಪಂದ್ಯ ನಿಕಟ ಪೈಪೋಟಿಯಿಂದ ಕೂಡಿತ್ತು. ಕ್ಲಾಸಿಕಲ್ ಆಟದವು ಕೊನೆಗೆ ಡ್ರಾದಲ್ಲಿ ಕೊನೆಗೊಂಡಿತು. ಒತ್ತಡದಲ್ಲೂ ತನ್ನ ಅಸಾಧಾರಣ ಕೌಶಲ್ಯ ಪ್ರದರ್ಶಿಸಿದ ಕಾರ್ಲ್ಸನ್ ಕೊನೆಯಲ್ಲಿ ನಕಮುರಾ ವಿರುದ್ಧ ಟ್ರೈ ಬೇಕರ್ನಲ್ಲಿ ವಿಜಯ ಸಾಧಿಸಿದರು. ಈ ಮೂಲಕ ಅವರು ಆರ್ಮಗೆಡ್ಡಾನ್ ದಾಖಲೆಯ ಪಟ್ಟಿಗೆ ಸೇರಿದರು. ಪಂದ್ಯಾವಳಿಯ ಅಂಕಪಟ್ಟಿಯಲ್ಲಿ ಅವರು 3 ಪಾಯಿಂಟ್ ಗಳಿಸಿದರು.