ಕರ್ನಾಟಕ

karnataka

ETV Bharat / sports

ಅಮೆರಿಕಾದಲ್ಲಿ ಭಾರತೀಯ ಬಾಕ್ಸರ್​ನ ಆರ್ಭಟ: ಬ್ರೆಜಿಲ್​ ಸ್ಪರ್ಧಿ ಮಣಿಸಿ ಇತಿಹಾಸ ಸೃಷ್ಟಿಸಿದ ನೀರಜ್ ಗೋಯತ್​​! - INDAIN BOXER NEERAJ GOYAT

ಮಿಡಲ್‌ವೇಟ್-ವಿಭಾಗದ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಭಾರತೀಯ ಬಾಕ್ಸರ್​ ಬ್ರೆಜಿಲ್​ ಸ್ಪರ್ಧಿಯನ್ನು ಸೋಲಿಸಿ ಇತಿಹಾಸ ಸೃಷ್ಟಿಸಿದ್ದಾರೆ.

ನೀರಜ್ ಗೋಯತ್
ನೀರಜ್ ಗೋಯತ್ (AFP)

By ETV Bharat Sports Team

Published : Nov 16, 2024, 2:14 PM IST

ಟೆಕ್ಸಾಸ್​ (ಅಮೆರಿಕ):ಮೈಕ್ ಟೈಸನ್ ಮತ್ತು ಜೇಕ್ ಪೌಲ್ ನಡುವಿನ ಬಾಕ್ಸಿಂಗ್​ ಪಂದ್ಯಕ್ಕೂ ಮುನ್ನ ಭಾರತದ ನೀರಜ್ ಗೋಯತ್ ಅದೇ ವೇದಿಕೆಯಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಈವೆಂಟ್​ನಲ್ಲಿ ನಡೆದ ಬಾಕ್ಸಿಂಗ್​ ಪಂದ್ಯದಲ್ಲಿ ನೀರಜ್​ ಬ್ರೆಜಿಲ್​ ಬಾಕ್ಸರ್​ನನ್ನು ಬಗ್ಗುಬಡಿದಿದ್ದಾರೆ.

ಜೇಕ್ಸ್ ಪೌಲ್​ ಮತ್ತು ಮೈಕ್ ಟೈಸನ್ ನಡುವಿನ ಮೆಗಾ ಫೈಟ್​ಗೂ ಮೊದಲು 3 ಅಂಡರ್ ಕಾರ್ಡ್ ಪಂದ್ಯಗಳು ನಡೆದಿದ್ದವು. ಇವುಗಳಲ್ಲಿ 33 ವರ್ಷದ ಭಾರತೀಯ ಬಾಕ್ಸರ್ ನೀರಜ್ ಗೋಯತ್​ 6 ಸುತ್ತಿನ ಸೂಪರ್ ಮಿಡಲ್‌ವೇಟ್-ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಪಂದ್ಯದಲ್ಲಿ ಬ್ರೆಜಿಲಿಯನ್ ಯೂಟ್ಯೂಬರ್ ಮತ್ತು ಹಾಸ್ಯನಟ ವಿಂಡರ್ಸನ್ ನ್ಯೂನ್ಸ್ ಅವರನ್ನು ಸೋಲಿಸುವ ಮೂಲಕ ದಾಖಲೆ ಬರೆದಿದ್ದಾರೆ. 6 ಸುತ್ತುಗಳ ಕಠಿಣ ಸ್ಪರ್ಧೆಯಲ್ಲಿ ಭಾರತೀಯ ಬಾಕ್ಸರ್ 60-54 ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಯಾರು ಈ ನೀರಜ್ ಗೋಯತ್:ನೀರಜ್ ಗೋಯತ್​ ಹರಿಯಾಣ ಮೂಲದವರಾಗಿದ್ದು, ಭಾರತೀಯ ಬಾಕ್ಸರ್ ಆಗಿ ಹಲವು ದಾಖಲೆ ಬರೆದಿದ್ದಾರೆ. ಹರಿಯಾಣದ ಬೇಗಂಪುರದಲ್ಲಿ ಜನಿಸಿದ ಇವರು 2006ರಲ್ಲಿ 10ನೇ ತರಗತಿಯಲ್ಲಿದ್ದಾಗಲೇ ಬಾಕ್ಸಿಂಗ್ ಪ್ರಾರಂಭಿಸಿದ್ದರು. ಅವರು ಮಾಜಿ ವಿಶ್ವ ಹೆವಿವೇಯ್ಟ್ ಚಾಂಪಿಯನ್ ಮೈಕ್ ಟೈಸನ್ ಅವರನ್ನು ತಮ್ಮ ಆರಾಧ್ಯ ದೈವವೆಂದು ಪರಿಗಣಿಸಿ ಬಾಕ್ಸಿಂಗ್​ ಆರಂಭಿಸಿದ್ದರು.

ಹವ್ಯಾಸಿ ಬಾಕ್ಸರ್ ಆಗಿ, ಗೋಯತ್​ ವೆನೆಜುವೆಲಾದಲ್ಲಿ 2016ರಲ್ಲಿ ನಡೆದ ಒಲಿಂಪಿಕ್ ಅರ್ಹತಾ ಪಂದ್ಯ ಆಡಿದ್ದರು. ಆದರೆ ಅಂತಿಮವಾಗಿ ಸ್ವಲ್ಪ ಅಂತರದಿಂದ ತಪ್ಪಿಸಿಕೊಂಡರು. ಇದಕ್ಕೂ ಮುನ್ನ 2008 ಯೂತ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಆದಾಗ್ಯೂ, ವೃತ್ತಿಪರ ಬಾಕ್ಸರ್ ಆಗಿ, ಗೋಯತ್​ WBC (ವರ್ಲ್ಡ್ ಬಾಕ್ಸಿಂಗ್ ಕೌನ್ಸಿಲ್) ನಿಂದ ಶ್ರೇಯಾಂಕ ಪಡೆದ ಮೊದಲ ಭಾರತೀಯ ಬಾಕ್ಸರ್​ ಎನಿಸಿಕೊಂಡಿದ್ದಾರೆ.

ಅವರು 2015 ರಿಂದ 2017ರ ವರೆಗೆ ಸತತ 3 ವರ್ಷಗಳ ಕಾಲ WBC ಏಷ್ಯನ್ ಚಾಂಪಿಯನ್ ಆಗಿದ್ದಾರೆ. ಗೋಯತ್​ ಇದುವರೆಗೂ 24 ಪಂದ್ಯಗಳನ್ನು ಆಡಿದ್ದು ಇದರಲ್ಲಿ 18 ಗೆಲುವು, 4 ಸೋಲು ಮತ್ತು 2 ಡ್ರಾ ಮಾಡಿಕೊಂಡಿದ್ದಾರೆ.

ಟೈಸನ್​ vs ಜೇಕ್​ ಪೌಲ್​:ಈ ಪಂದ್ಯ ಬಳಿಕ ನಡೆದ ಹೆವಿವೇಟ್​ ಪಂದ್ಯದಲ್ಲಿ58 ವರ್ಷದ ಲೆಜೆಂಡರಿ ಬಾಕ್ಸರ್ ಮೈಕ್ ಟೈಸನ್ ಸೋಲನುಭವಿಸಿದರು. 19 ವರ್ಷಗಳ ನಂತರ ಬಾಕ್ಸಿಂಗ್​ಗೆ ಪ್ರವೇಶಿಸಿ ಅವರು ಜೇಕ್ ಪಾಲ್ ವಿರುದ್ಧ ಸೋಲನ್ನು ಕಂಡರು. ಮೈಕ್ ಟೈಸನ್ ಅವರನ್ನು 74-78 ಅಂತರದಿಂದ ಜೇಕ್ ಪೌಲ್ ಸೋಲಿಸಿದರು.

ಇದನ್ನೂ ಓದಿ:ದಿಗ್ಗಜ ಬಾಕ್ಸರ್​ Mike Tyson ಸೋಲಿಸಿದ ಯೂಟ್ಯೂಬರ್​ Jake Paul: ಪಂದ್ಯವಾಡಲು ಇಬ್ಬರು ಪಡೆದ ಹಣ ಎಷ್ಟು ಗೊತ್ತಾ?

ABOUT THE AUTHOR

...view details