ಕರ್ನಾಟಕ

karnataka

ETV Bharat / sports

ಅಶುತೋಷ್‌ ಸ್ಫೋಟಕ ಅರ್ಧಶತಕ ವ್ಯರ್ಥ: ಮುಂಬೈ ಇಂಡಿಯನ್ಸ್‌ಗೆ 9 ರನ್​ಗಳ ಜಯ - PBKS VS MI match - PBKS VS MI MATCH

ಗುರುವಾರ ನಡೆದ ಐಪಿಎಲ್​ನ 2024ರ 33ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುಂಬೈ ಇಂಡಿಯನ್ಸ್ ಒಂಬತ್ತು ರನ್‌ಗಳಿಂದ ಸೋಲಿಸಿತು.

ಅಶುತೋಷ್‌ ಸ್ಫೋಟಕ ಅರ್ಧಶತಕ ವ್ಯರ್ಥ: ಮುಂಬೈ ಇಂಡಿಯನ್ಸ್‌ಗೆ 9 ರನ್‌ ಜಯ
ಅಶುತೋಷ್‌ ಸ್ಫೋಟಕ ಅರ್ಧಶತಕ ವ್ಯರ್ಥ: ಮುಂಬೈ ಇಂಡಿಯನ್ಸ್‌ಗೆ 9 ರನ್‌ ಜಯ

By PTI

Published : Apr 19, 2024, 6:21 AM IST

Updated : Apr 19, 2024, 6:43 AM IST

ಮುಲ್ಲನ್‌ಪುರ (ಪಂಜಾಬ್): 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 33ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್ ತಂಡವನ್ನು ಮುಂಬೈ ಇಂಡಿಯನ್ಸ್‌ ಒಂಬತ್ತು ರನ್‌ಗಳಿಂದ ಮಣಿಸಿದೆ. ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್‌ಗೆ ಇದು ಮೂರನೇ ಗೆಲುವಾಗಿದೆ. ಇಲ್ಲಿನ ಮಹಾರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಮಾಡಿದ ಮುಂಬೈ ಇಂಡಿಯನ್ಸ್‌ ತಂಡ 7 ವಿಕೆಟ್‌ ಕಳೆದುಕೊಂಡು 192 ರನ್‌ ಕಲೆ ಹಾಕಿತು.

ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪಂಜಾಜ್​ ಕಿಂಗ್ಸ್​ ಕೇವಲ 49 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಸ್ಯಾಮ್‌ ಕರನ್‌, ಪ್ರಭ್‌ಸಿಮ್ರನ್‌ ಸಿಂಗ್‌, ರೈಲಿ ರೊಸೊವ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌ ಹಾಗೂ ಹಪ್ರೀತ್‌ ಸಿಂಗ್‌ ಭಾಟಿಯಾ ಬಹುಬೇಗ ವಿಕೆಟ್‌ ಒಪ್ಪಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಬಂದ ಅಶುತೋಷ್‌ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಕೇವಲ 28 ಎಸೆತಗಳಲ್ಲಿ ಭರ್ಜರಿ 7 ಸಿಕ್ಸರ್‌ ಹಾಗೂ 2 ಬೌಂಡರಿಗಳೊಂದಿಗೆ 61 ರನ್‌ ಸಿಡಿಸಿದ್ದರು. ಶಶಾಂಕ್ ಸಿಂಗ್ 25 ಎಸೆತಗಳಲ್ಲಿ 41 ರನ್ ಗಳಿಸಿದರು. ಅಂತಿಮವಾಗಿ ಪಂಜಾಬ್‌ 19.1 ಓವರ್‌ಗಳಿಗೆ 183 ರನ್‌ಗಳಿಗೆ ಆಲ್‌ಔಟ್‌ ಆಯಿತು.

ಮುಂಬೈ ಇಂಡಿಯನ್ಸ್ ಪರ ಅತ್ಯುತ್ತವಾಗಿ ಬೌಲಿಂಗ್​ ಮಾಡಿದ ಜಸ್‌ಪ್ರೀತ್‌ ಬುಮ್ರಾ ಹಾಗೂ ಜೆರಾಲ್ಡ್‌ ಕೊಯೆಡ್ಜಿ ತಲಾ ಮೂರು ವಿಕೆಟ್‌ ಪಡೆದರು. ಇದಕ್ಕೂ ಮೊದಲು ಸೂರ್ಯಕುಮಾರ್‌ ಯಾದವ್‌ 53 ಎಸೆತಗಳಲ್ಲಿ 78 ರನ್‌ ಸಿಡಿಸುವ ಮೂಲಕ ಮುಂಬೈ ಸವಾಲಿನ ಮೊತ್ತ ಪೇರಿಸಲು ನೆರವಾದರು.

ತಂಡದ ಪರ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ರೋಹಿತ್​
250 ನೇ ಐಪಿಎಲ್ ಪಂದ್ಯವನ್ನು ಆಡಿದ ರೋಹಿತ್ ಶರ್ಮಾ, ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್‌ನ 11 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಬಲಗೈ ವೇಗಿ ಹರ್ಷಲ್ ಪಟೇಲ್ ಎಸೆದ ಬಾಲ್​ ಅನ್ನು ಸಿಕ್ಸರ್​ಗೆ ಅಟ್ಟುವ ಮೂಲಕ ತಂಡದ ಪರ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಸಾಧನೆ ಮಾಡಿದರು. ತಂಡದ ಪರ ಅವರು 224 ಸಿಕ್ಸರ್​ಗಳನ್ನು ಬಾರಿಸುವ ಮೂಲಕ ರೆಕಾರ್ಡ್ ಬರೆದರು. ಮುಂಬೈ ಇಂಡಿಯನ್ಸ್​​​​​​ ಮಾಜಿ ಆಲ್‌ರೌಂಡರ್ ಕೀರಾನ್ ಪೊಲಾರ್ಡ್ 223 ಸಿಕ್ಸರ್​ಗಳನ್ನು ಬಾರಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ, ನಾಯಕ ಹಾರ್ದಿಕ್ ಪಾಂಡ್ಯ (104), ಇಶಾನ್ ಕಿಶನ್ (103), ಮತ್ತು ಸೂರ್ಯಕುಮಾರ್ ಯಾದವ್ (97) ನಂತರದ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:IPL: ಇಂದು ಪಂಜಾಬ್​ Vs ಮುಂಬೈ ಫೈಟ್​​; ಸೋತ ತಂಡಕ್ಕೆ ಪ್ಲೇ ಆಫ್ ಹಾದಿ ಕಠಿಣ - PBKS VS MI

Last Updated : Apr 19, 2024, 6:43 AM IST

ABOUT THE AUTHOR

...view details