ಬಾಂಗಿ (ಮಲೇಷ್ಯಾ): ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ತಂಡ ಎಂಬ ಕೆಟ್ಟ ದಾಖಲೆ ನಿರ್ಮಾಣವಾಗಿದೆ. ಮಲೇಷ್ಯಾದ ಬಾಂಗಿಯಲ್ಲಿ ನಡೆದ ಮುಂಬರು ಟಿ20 ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್ ಎ 14ನೇ ಪಂದ್ಯದಲ್ಲಿ ಮಂಗೋಲಿಯಾ ತಂಡ ಕೇವಲ 10 ರನ್‌ಗಳಿಂದ ಸರ್ವಪತನ ಕಂಡಿದೆ.
ಸಿಂಗಾಪುರ ವಿರುದ್ದದ ಟಿ20 ಪಂದ್ಯದಲ್ಲಿ ಮಂಗೋಲಿಯಾ ತಂಡ 10 ಓವರ್‌ಗಳಲ್ಲಿ 10 ರನ್ ಗಳಿಸಲಷ್ಟೇ ಯಶಸ್ವಿಯಾಗಿದೆ ಇದಕ್ಕುತ್ತರವಾಗಿ ಸಿಂಗಾಪುರ 5 ಎಸೆತಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ಆದರೆ ಅದು ಕೂಡ ಒಂದು ವಿಕೆಟ್ ಕಳೆದುಕೊಂಡಿತ್ತು.
6 ವಿಕೆಟ್ ಪಡೆದ ಭಾರತೀಯ ಬೌಲರ್: ಭಾರತೀಯ ಮೂಲದ 17 ವರ್ಷದ ಬೌಲರ್ ಹರ್ಷ್ ಭಾರದ್ವಾಜ್ ಸಿಂಗಾಪುರ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇಡೀ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿರುವ ಅವರು 6 ವಿಕೆಟ್ ಉರುಳಿಸಿ ದಾಖಲೆ ಬರೆದಿದ್ದಾರೆ. ಸಾಮಾನ್ಯವಾಗಿ ಪಂದ್ಯದ ಮೊದಲ ಓವರ್ನಲ್ಲಿ ವೇಗದ ಬೌಲರ್ಗಳಿಗೆ ಅವಕಾಶ ನೀಡಲಾಗುತ್ತದೆ. ಆದರೆ, ನಾಯಕ ಮನ್‌ಪ್ರೀತ್ ಸಿಂಗ್ ಲೆಗ್ ಸ್ಪಿನ್ನರ್ ಹರ್ಷ್ಗೆ ಮೊದಲ ಓವರ್‌ನಲ್ಲೇ ಬೌಲಿಂಗ್ಗೆ ಇಳಿಸಿದರು. ಆರಂಭಿಕ ಓವರ್‌ನಲ್ಲೇ ವಿಕೆಟ್ ಪಡೆಯುವ ಮೂಲಕ ಮಾರಕ ಪ್ರದರ್ಶನ ತೋರಿದರು. ಹರ್ಷ್ 4 ಓವರ್‌ಗಳಲ್ಲಿ 3 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟಿದ್ದಾರೆ.