ಕರ್ನಾಟಕ

karnataka

ETV Bharat / sports

ಪ್ಯಾರಿಸ್ ಒಲಿಂಪಿಕ್ಸ್‌: ಚಿನ್ನ ಗೆಲ್ಲುವ ಉತ್ಸಾಹದಲ್ಲಿ ಪಾರುಲ್ ಚೌಧರಿ, ಪುತ್ರಿಯ ಬಗ್ಗೆ ಪೋಷಕರ ವಿಶ್ವಾಸ - PARIS OLYMPICS 2024 - PARIS OLYMPICS 2024

‘ಬೆಳಕಿನ ನಗರಿ’ ಪ್ಯಾರಿಸ್ ಸರಿಯಾಗಿ ನೂರು ವರ್ಷಗಳ ನಂತರ ಒಲಿಂಪಿಕ್‌ ಕ್ರೀಡೆಗಳ ಆತಿಥ್ಯ ವಹಿಸಲು ಸಜ್ಜಾಗಿದೆ. ಇಂದಿನಿಂದ ಕ್ರೀಡೋತ್ಸವಕ್ಕೆ ಅದ್ಧೂರಿ ಚಾಲನೆ ಸಿಗಲಿದ್ದು, ಈ ವರ್ಣರಂಜಿತ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಇಡೀ ಜಗತ್ತೆ ಕಾದು ಕುಳಿತಿದೆ. ಇಂತಹ ಜಾಗತಿಕ ಕ್ರೀಡಾ ಜಾತ್ರೆಯಲ್ಲಿ ಉತ್ತರ ಪ್ರದೇಶದ ರೈತನ ಮಗಳೊಬ್ಬಳು ಭಾಗಿಯಾಗಿದ್ದು ದೇಶವೇ ಹೆಮ್ಮೆ ಪಡುವ ಸಂಗತಿ.

Meerut Parul Chaudhary Participate in Steeple Chase Event of Paris Olympics 2024
ಪಾರುಲ್ ಚೌಧರಿ (ETV Bharat)

By ETV Bharat Karnataka Team

Published : Jul 26, 2024, 8:32 PM IST

ಮೀರತ್, ಉತ್ತರಪ್ರದೇಶ:ಇಂದಿನಿಂದ ಮುಂದಿನ ತಿಂಗಳು ಆಗಸ್ಟ್ 11 ರವರೆಗೆ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದ್ದು, ಕಣ್ತುಂಬಿಕೊಳ್ಳಲು ಇಡೀ ಜಗತ್ತೆ ಕಾದು ಕುಳಿತಿದೆ. ಈ ಬಾರಿಯ ಒಲಿಂಪಿಕ್ಸ್​ನಲ್ಲಿ 206 ರಾಷ್ಟ್ರಗಳಿಂದ 10 ಸಾವಿರಕ್ಕೂ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, ಈ ಪೈಕಿ ಭಾರತ 117 ಕ್ರೀಡಾಪಟುಗಳೊಂದಿಗೆ ಪ್ಯಾರಿಸ್​ಗೆ ಪಯಣಿಸಿದೆ. ಅದರಲ್ಲಿ ಉತ್ತರ ಪ್ರದೇಶದ ಮೀರತ್​ ಜಿಲ್ಲೆಯ ಇಕ್ಲೌಟಾ ಎಂಬ ಪುಟ್ಟ ಗ್ರಾಮದಿಂದ ಪಾರುಲ್ ಚೌಧರಿ ಎಂಬ ಅಥ್ಲೀಟ್ ಭಾಗಿಯಾಗಿದ್ದು ದೇಶವೇ ಹೆಮ್ಮೆ ಪಡುವ ಸಂಗತಿ. ಪಾರುಲ್ ಓರ್ವ ರೈತನ ಮಗಳು ಅನ್ನೋದು ಗಮನಾರ್ಹ! ಈ ಯುವ ಕ್ರೀಡಾಪಟುವಿನ ಪೋಷಕರೊಂದಿಗೆ ಈಟಿವಿ ಭಾರತ ಮಾತನಾಡಿದ್ದು, ಪುಟ್ಟ ಹಳ್ಳಿಯಿಂದ ಹೋದ ಪಾರುಲ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಪಾರುಲ್ ಚೌಧರಿ ಪೋಷಕರು (ETV Bharat)
ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಕ್ಷಣ (ETV Bharat)

ತಮ್ಮ ಪುತ್ರಿಯ ಸ್ಪರ್ಧೆಯಿಂದ ಇಡೀ ದೇಶವೇ ಮತ್ತೊಮ್ಮೆ ಪದಕದ ನಿರೀಕ್ಷೆಯಲ್ಲಿದೆ. ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ವಿಶ್ವ ಕ್ರೀಡಾಜಾತ್ರೆಯಲ್ಲಿ ಪಾರುಲ್ ಭಾರತದ ಧ್ವಜವನ್ನು ಹಾರಿಸುತ್ತಾಳೆ ಎಂಬ ವಿಶ್ವಾಸವಿದೆ. ಗೋಲ್ಡನ್ ಗರ್ಲ್ ಹೆಸರುಗಳಿಂದಲೇ ಫೇಮಸ್ ಆಗಿರುವ ಪಾರುಲ್ ಸೇರಿ ಮೀರತ್‌ನ ಮೂವರು ಪುತ್ರಿಯರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದು ಖುಷಿ ವಿಚಾರ. ಏಷ್ಯನ್ ಗೇಮ್ಸ್ 2022 ರಲ್ಲಿ, ಪಾರುಲ್ 3000 ಮೀಟರ್ ಸ್ಟೀಪಲ್ ಚೇಸ್‌ನಲ್ಲಿ ಬೆಳ್ಳಿ ಪದಕ ಮತ್ತು 5000 ಮೀಟರ್ ಓಟದಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ದೇಶಕ್ಕೆ ಎರಡು ಪದಕಗಳನ್ನು ಗೆದ್ದು ತಂದಿದ್ದಾಳೆ. ಮನೆಯಲ್ಲಿ ವಿಶೇಷ ಕೊಠಡಿ ಇದ್ದು, ಅದರ ಪ್ರತಿಯೊಂದು ಗೋಡೆಯೂ ತಮ್ಮ ಪುತ್ರಿಯ ಯಶಸ್ಸಿನ ಕಥೆಯನ್ನು ಹೇಳುತ್ತದೆ. ಹಳ್ಳಿಯ ಶಾಲಾ ಸ್ಪರ್ಧೆಗಳಿಂದ ಹಿಡಿದು ಏಷ್ಯನ್ ಕ್ರೀಡಾಕೂಟದವರೆಗೆ ನೂರಾರು ಪದಕಗಳನ್ನು ಪಡೆದ ಶ್ರೇಯಸ್ಸು ತಮ್ಮ ಪುತ್ರಿಗೆ ಸಲ್ಲುತ್ತದೆ. ಗಳಿಸಿದ ಪ್ರಶಸ್ತಿಗಳು, ಪದಕಗಳು ಈ ಕೋಣೆಯ ತುಂಬಾ ರಾರಾಜಿಸುತ್ತಿವೆ. ಇವುಗಳನ್ನು ಗಳಿಸಲು ನಮ್ಮ ಮಗಳು ಬಹಳ ಕಷ್ಟಪಟ್ಟಿದ್ದಾಳೆ ಎಂದು ಪಾರುಲ್ ತಂದೆ ಕೃಷ್ಣಪಾಲ್ ತಮ್ಮ ಮಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಪಾರುಲ್ ಚೌಧರಿ ಗಳಿಸಿದ ಪದಕಗಳು (ETV Bharat)
ಸಿಎಂ ಜೊತೆ ಪಾರುಲ್ ಚೌಧರಿ (ETV Bharat)

ಹಳ್ಳಿಯ ಕಾಲುದಾರಿಗಳಿಂದ ಪ್ರಾರಂಭವಾದ ನನ್ನ ಪುತ್ರಿಯ ಓಟದ ವೃತ್ತಿಜೀವನವು ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆಲ್ಲುವಲ್ಲಿ ತಲುಪಿತು. ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಹೋಗಿದ್ದು, ದೇಶಕ್ಕೆ ಪದಕಗಳನ್ನು ತಂದುಕೊಡುತ್ತಾಳೆ ಎಂಬ ವಿಶ್ವಾಸವಿದೆ. ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಕ್ರೀಡೆಯಲ್ಲಿ ಒಂದರ ನಂತರ ಒಂದರಂತೆ ಸಾಧನೆ ಮಾಡುತ್ತಿದ್ದಾಳೆ. ಸರ್ಕಾರ ಕೂಡ ಸಾಕಷ್ಟು ಸಹಕಾರ ಮಾಡುತ್ತಿದೆ. ಭಾರತದಿಂದ ಪ್ಯಾರಿಸ್​ಗೆ ತೆರಳಿದ ಎಲ್ಲ ಕ್ರೀಡಾಪಟುಗಳು ಪದಕಗಳೊಂದಿಗೆ ಮರಳಲಿ ಎಂದು ಕೃಷ್ಣಪಾಲ್ ಆಶಯ ವ್ಯಕ್ತಪಡಿಸಿದರು. ಪಾರುಲ್ ತಾಯಿ ರಾಜೇಶ್ ದೇವಿ ಕೂಡ ಮಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ಪಾರುಲ್ ಚೌಧರಿ ಗಳಿಸಿದ ಪದಕಗಳು (ETV Bharat)
ಪಾರುಲ್ ಚೌಧರಿ ಪೋಷಕರು (ETV Bharat)

ಸದ್ಯ ದೇಶದ ಹೊರಗೆ ಅಭ್ಯಾಸದಲ್ಲಿ ತೊಡಗಿರುವ ಪಾರುಲ್ ಜುಲೈ 28 ರಂದು ಪ್ಯಾರಿಸ್ ತಲುಪಲಿದ್ದಾರೆ. ಆಗಸ್ಟ್ 4 ರಂದು ನಡೆಯಲಿರುವ ಮಹಿಳೆಯರ 3000ಮೀ ಸ್ಟೀಪಲ್ ಚೇಸ್ ರೌಂಡ್ 1 ರಲ್ಲಿ ಪಾರುಲ್ ಸ್ಪರ್ಧಿಸಲಿದ್ದಾರೆ. ಈ ಬಾರಿಯ ರಕ್ಷಾಬಂಧನದಂದು ದೇಶಕ್ಕೆ ಪದಕವನ್ನು ಉಡುಗೊರೆಯಾಗಿ ನೀಡುವ ನಿರೀಕ್ಷೆಯಿದೆ ಎಂದು ಸಹೋದರಿ ಬಗ್ಗೆ ರಾಹುಲ್ ಚೌಧರಿ ಸಂತಸ ವ್ಯಕ್ತಪಡಿಸಿದರು.

ಪಾರುಲ್ ಚೌಧರಿ ಪೋಷಕರು (ETV Bharat)

ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಪಾರುಲ್ ಅವರನ್ನು ಡಿಎಸ್ಪಿಯನ್ನಾಗಿ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ವರ್ಷದ ಜನವರಿ 27 ರಂದು ಸರ್ಕಾರಿ ನೌಕರಿ ಜೊತೆಗೆ ಆರ್ಥಿಕ ಸಹಾಯ ಕೂಡ ಮಾಡಿದೆ. ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ. ಇದೇ ವೇಳೆ ಪಾರುಲ್ ಚೌಧರಿ ಅವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ.

ಪಾರುಲ್ ಚೌಧರಿ ಗಳಿಸಿದ ಪದಕಗಳು (ETV Bharat)

ಇದನ್ನೂ ಓದಿ:ಬೆಳಕಿನ ನಗರಿ ಪ್ಯಾರಿಸ್‌ನಲ್ಲಿ ಕ್ರೀಡೋತ್ಸವ: ಭಾರತದ 72 ಸ್ಪರ್ಧಿಗಳಿಗೆ ಇದು ಮೊದಲ ಒಲಿಂಪಿಕ್ಸ್ - Paris Olympics 2024

ABOUT THE AUTHOR

...view details