ಫ್ರಾನ್ಸ್(ಪ್ಯಾರಿಸ್): ಪ್ಯಾರಿಸ್ ಒಲಿಂಪಿಕ್ಸ್ 2024ರ ಮೂರನೇ ದಿನ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಕ್ವಾಲಿಫೈಯರ್ ಪಂದ್ಯದಲ್ಲಿ ಭಾರತೀಯ ಶೂಟರ್‌ಗಳಾದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅದ್ಬುತ ಪ್ರದರ್ಶನ ತೋರಿ ಕಂಚಿನ ಪದಕ ಪಂದ್ಯಕ್ಕೆ ಅರ್ಹತೆ ಪಡೆದಿದ್ದಾರೆ.
ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಕೊರಿಯಾದ ಶೂಟರ್‌ಗಳನ್ನು ಹಿಂದಿಕ್ಕಿ ಅರ್ಹತೆ ಪಡೆದರು. 3 ಸುತ್ತಿನ ಸ್ಪರ್ಧೆಯಲ್ಲಿ ಭಾರತದ ಜೋಡಿ 580 ಅಂಕಗಳನ್ನು ಕಲೆ ಹಾಕಿ ಅರ್ಹತಾ ಸುತ್ತಿನಲ್ಲಿ ಮೂರನೇ ಸ್ಥಾನ ಪಡೆದರು. ಕೊರಿಯಾದ ಓಹ್ ಯೆ ಜಿನ್ ಮತ್ತು ಲೀ ವೊನ್ಹೋ ನಾಲ್ಕನೇ ಸ್ಥಾನ ಪಡೆದರು.
ಭಾರತದ ಮುಂದಿನ ಪಂದ್ಯ:ಕಂಚಿನ ಪದಕ ಪಂದ್ಯದಲ್ಲಿ ಭಾರತದ ಶೂಟರ್‌ಗಳು ಕೊರಿಯಾದ ಓಹ್ ಯೆ ಜಿನ್ ಮತ್ತು ಲೀ ವೊನ್ಹೋ ವಿರುದ್ಧ ಸೆಣಸಲಿದ್ದಾರೆ. ಈ ಪಂದ್ಯವೂ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ. ಭಾನುವಾರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕವನ್ನು ನೀಡಿದ ಮನು ಭಾಕರ್ ಈ ಪಂದ್ಯದಲ್ಲಿ ಎರಡನೇ ಕಂಚಿನ ಪದಕ ಗೆಲ್ಲವು ನಿರೀಕ್ಷೆಯಲ್ಲಿದ್ದಾರೆ.