Karnataka Players in IPL:ಸೋಮವಾರ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಎರಡು ದಿನಗಳ ಕಾಲ ನಡೆದ ಹರಾಜಿನಲ್ಲಿ ಒಟ್ಟು 182 ಆಟಗಾರರು ಬಿಕರಿಯಾಗಿದ್ದಾರೆ. ಇದರಲ್ಲಿ 62 ವಿದೇಶಿ ಆಟಗಾರರು ಸೇರಿದ್ದಾರೆ. ಈ ಮೆಗಾ ಹರಾಜಿನಲ್ಲಿ ಎಲ್ಲಾ ಹತ್ತು ಫ್ರಾಂಚೈಸಿಗಳು ಆಟಗಾರರನ್ನು ಖರೀದಿಸಲು ಒಟ್ಟು ₹639 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.
ಈ ಬಾರಿ ಕ್ಯಾಪ್ಡ್ ಮತ್ತು ಅನ್ಕ್ಯಾಪ್ಡ್ ಆಟಗಾರರು ಸೇರಿ ಒಟ್ಟು 1,574 ಆಟಗಾರರು ಐಪಿಎಲ್ ಹರಾಜಿಗಾಗಿ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 574 ಆಟಗಾರರ ಹೆಸರನ್ನು ಶಾರ್ಟ್ಲಿಸ್ಟ್ ಮಾಡಲಾಗಿತ್ತು. ಶಾರ್ಟ್ಲಿಸ್ಟ್ ಆದ ಆಟಗಾರರಲ್ಲಿ 24 ಕನ್ನಡಿಗರು ಸೇರಿದ್ದರು. ಆದರೆ ಈ ಆಟಗಾರರಲ್ಲಿ ಕೇವಲ 9 ಜನರು ಆಟಗಾರರು ಮಾತ್ರ ಸೋಲ್ಡ್ ಆಗಿದ್ದು, ಉಳಿದ ಆಟಗಾರರು ನಿರಾಸೆ ಅನುಭವಿಸಿದ್ದಾರೆ. ಹರಾಜಾದ ಕನ್ನಡಿಗರಲ್ಲಿ ಕೆಎಲ್ ರಾಹುಲ್ ಹೆಚ್ಚಿನ ಮೊತ್ತವನ್ನು ಪಡೆದುಕೊಂಡಿದ್ದಾರೆ.
2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದ ರಾಹುಲ್ ಅವರನ್ನು ಈ ಬಾರಿ ಆರ್ಸಿಬಿ ಖರೀದಿ ಮಾಡುತ್ತದೆ ಎಂದೇ ಕನ್ನಡಿಗರು ಭಾವಿಸಿದ್ದರು. ಆದರೇ ಎಲ್ಲಾ ನಿರೀಕ್ಷೆಗಳು ಹುಸಿಗೊಂಡವು. ಅಂತಿಮವಾಗಿ ರಾಹುಲ್ ಅವರನ್ನು 14 ಕೋಟಿಗೆ ಡೆಲ್ಲಿ ತಂಡ ಖರೀದಿ ಮಾಡಿತು. ಜಿದ್ದಾಜಿದ್ದಿನ ಹರಾಜಿನಲ್ಲಿ ಪೈಪೋಟಿ ನೀಡಿದ್ದ ಆರ್ಸಿಬಿ 10.50 ಕೋಟಿ ವರೆಗೂ ಬಿಡ್ ಮಾಡಿತ್ತು ಆ ಬಳಿಕ ಹಿಂದೆ ಸರಿಯಿತು. ಇದರೊಂದಿಗೆ ಉಳಿದ ಕನ್ನಡಿಗರಲ್ಲಿ ರಾಹುಲ್ ಹೆಚ್ಚಿನ ಮೊತ್ತಕ್ಕೆ ಹರಾಜಾದ ಆಟಗಾರ ಎನಿಸಿಕೊಂಡರು. ಉಳಿದ ಆಟಗಾರರಲ್ಲಿ ಸೋಲ್ಡ್ ಆದವರು ಮತ್ತು ಅನ್ಸೋಲ್ಡ್ ಆದವರು ಯಾರು ಎಂದು ಇದೀಗ ತಿಳಿಯಿರಿ.