ಇಂದೋರ್(ಮಧ್ಯಪ್ರದೇಶ):4 ಎಸೆತಗಳಲ್ಲಿ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಮಧ್ಯಪ್ರದೇಶದ ಕುಲ್ವಂತ್ ಖೆಜ್ರೋಲಿಯಾ ರಣಜಿ ಟ್ರೋಫಿ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಇದರ ಜೊತೆಗೆ ಹ್ಯಾಟ್ರಿಕ್ ವಿಕೆಟ್ ಪಡೆದ ಮಧ್ಯಪ್ರದೇಶದ ಮೂರನೇ ಬೌಲರ್ ಎನಿಸಿಕೊಂಡರು.
ಬರೋಡಾ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಧ್ಯಪ್ರದೇಶ 454 ರನ್ಗಳ ಬೃಹತ್ ಮೊತ್ತ ದಾಖಲಿಸಿತು. ಇದಕ್ಕುತ್ತರವಾಗಿ ಬರೋಡಾ 132 ರನ್ಗಳಿಗೆ ಆಲೌಟ್ ಆಗಿ ಫಾಲೋ ಆನ್ಗೆ ಒಳಗಾಯಿತು. ಅಗ್ರ ಕ್ರಮಾಂಕದ ಬ್ಯಾಟರ್ ಶಾಶ್ವತ್ ರಾವತ್ ಬಾರಿಸಿದ ಭರ್ಜರಿ ಶತಕ (105) ತಂಡವನ್ನು ಆಧರಿಸಿತು. ಆರಂಭಿಕ ಆಟಗಾರ ಜ್ಯೋತ್ಸ್ನಿಲ್ ಸಿಂಗ್ 83 ರನ್ ಗಳಿಸಿದರು. 5 ವಿಕೆಟ್ಗೆ 233 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು.
ಕುಲ್ವಂತ್ ಮಾರಕ ದಾಳಿ:ಈ ವೇಳೆ 95ನೇ ಓವರ್ ಬೌಲಿಂಗ್ ಮಾಡಿದ ಕುಲ್ವಂತ್ ಖೇಜ್ರೋಲಿಯಾ ಬರೋಡಾದ ಇನಿಂಗ್ಸ್ಗೆ ತೆರೆ ಎಳೆದರು. 95ನೇ ಓವರ್ನ 2ನೇ ಎಸೆತದಲ್ಲಿ ಶತಕ ಗಳಿಸಿದ್ದ ಶಾಶ್ವತ್ ರಾವತ್(105), ಮೂರನೇ ಬಾಲ್ನಲ್ಲಿ ಮಹೇಶ್ ಪಿಥಿಯಾ(0), ನಾಲ್ಕನೇ ಎಸೆತದಲ್ಲಿ ಭಾರ್ಗವ್ ಭಟ್ (0) ಮತ್ತು 5ನೇ ಎಸೆತದಲ್ಲಿ ಆಕಾಶ್ ಸಿಂಗ್ (0) ಔಟ್ ಮಾಡಿದರು. ಇದರಿಂದ ತಂಡ ದಿಢೀರ್ ಕುಸಿದು 270ಕ್ಕೆ ಗಂಟುಮೂಟೆ ಕಟ್ಟಿತು. ಇದರಿಂದ ಮಧ್ಯಪ್ರದೇಶ ಇನಿಂಗ್ಸ್ ಮತ್ತು 52 ರನ್ಗಳ ಗೆಲುವು ಸಾಧಿಸಿತು.