ಕರ್ನಾಟಕ

karnataka

ETV Bharat / sports

ಆರ್​ಸಿಬಿ ಬೌಲರ್​ಗಳಿಗೆ ಬೆವರಿಳಿಸಿದ ಕೆಕೆಆರ್​: ಡು ಪ್ಲೆಸಿಸ್​ ಪಡೆಗೆ 223 ರನ್​ ಗೆಲುವಿನ ಗುರಿ - RCB vs KKR match - RCB VS KKR MATCH

ಆರ್​ಸಿಬಿ ಮತ್ತು ಕೆಕೆಆರ್​ ನಡುವೆ ಈಡನ್​ ಗಾರ್ಡನ್ಸ್​ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ.

ಆರ್​ಸಿಬಿ ಬೌಲರ್​ಗಳ ಬೆಂಡೆತ್ತಿದ ಕೆಕೆಆರ್
ಆರ್​ಸಿಬಿ ಬೌಲರ್​ಗಳ ಬೆಂಡೆತ್ತಿದ ಕೆಕೆಆರ್

By ETV Bharat Karnataka Team

Published : Apr 21, 2024, 3:17 PM IST

Updated : Apr 21, 2024, 5:53 PM IST

ಕೋಲ್ಕತ್ತಾ:ಐಪಿಎಲ್​ನಲ್ಲಿ ಅತಿ ಕಳಪೆ ಬೌಲಿಂಗ್​ ಪಡೆಯನ್ನು ಹೊಂದಿರುವ ಆರ್​ಸಿಬಿ, ಕೆಕೆಆರ್​ ವಿರುದ್ಧ ಮತ್ತೆ ಹಿನ್ನಡೆ ಅನುಭವಿಸಿತು. ಫಿಲಿಪ್​ ಸಾಲ್ಟ್​ರ ಸ್ಫೋಟಕ ಬ್ಯಾಟಿಂಗ್​, ನಾಯಕ ಶ್ರೇಯಸ್​ ಅಯ್ಯರ್​ ಅಮೂಲ್ಯ ಅರ್ಧಶತಕದ ಬಲದಿಂದ ಕೆಕೆಆರ್​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 222 ರನ್​ ಗಳಿಸಿತು.

ಕೆಕೆಆರ್​ ತಂಡದ ತವರಾದ ಈಡನ್​​ ಗಾರ್ಡನ್ಸ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವಿಕೆಟ್ ಕೀಪರ್​ ಸಾಲ್ಟ್​ ಅಬ್ಬರಿಸಿದರು. ಮೊದಲ ಪವರ್​ಪ್ಲೇಯನ್ನು ಬಳಸಿಕೊಂಡ ಬ್ಯಾಟರ್​ 3 ಸಿಕ್ಸರ್​, 7 ಬೌಂಡರಿ ಸಮೇತ 14 ಎಸೆತಗಳಲ್ಲಿ 48 ರನ್​ ಗಳಿಸಿದರು. ಲೂಕಿ​ ಫರ್ಗ್ಯುಸನ್​ ಬೌಲಿಂಗ್​ನಲ್ಲಿ 6,4,4,6,4,4 ರನ್​ ಬಾರಿಸಿ ಕಿಕ್​ಸ್ಟಾರ್ಟ್​ ನೀಡಿದರು.

ಅಪಾಯಕಾರಿ ಆಗಲಿದ್ದಾರೆಂದು ಭಾವಿಸಿದ್ದ ಸುನಿಲ್​ ನರೈನ್​ 10, ಅಂಗ್​ಕೃಷ್ಣ​ ರಘುವಂಶಿ 3, ವೆಂಕಟೇಶ್​ ಅಯ್ಯರ್​ 16 ರನ್​ಗೆ ವಿಕೆಟ್​ ನೀಡಿದರು. ಇದರಿಂದ ತುಸು ಚೇತರಿಸಿಕೊಂಡು ಆರ್​ಸಿಬಿ ಮರು ಹೋರಾಟ ನೀಡಲಿದೆ ಎಂದು ಭಾವಿಸಲಾಗಿತ್ತು. ಆದರೆ, ಬಳಿಕ ಬಂದ ಬ್ಯಾಟರ್​ಗಳು ಮತ್ತೆ ತಂಡಕ್ಕೆ ಆಸರೆಯಾಗಿ ನಿಂತರು.

ಅಯ್ಯರ್​ ಅರ್ಧಶತಕ:97 ರನ್​ಗೆ 4 ವಿಕೆಟ್​ ಕಳೆದುಕೊಂಡಿದ್ದಾಗ ಬಂದ ಶ್ರೇಯಸ್​ ಅಯ್ಯರ್​ ಉತ್ತಮ ಇನಿಂಗ್ಸ್​ ಕಟ್ಟಿದರು. 36 ಎಸೆತಗಳಲ್ಲಿ 50 ರನ್​ ಬಾರಿಸಿದರು. ಅಗತ್ಯವಾದ ಸಂದರ್ಭದಲ್ಲಿ ಉತ್ತಮ ಬ್ಯಾಟ್​ ಮಾಡಿ ತಂಡವನ್ನು ಆಧರಿಸಿದರು. ರಿಂಕು ಸಿಂಗ್​ 16 ಎಸೆತಗಳಲ್ಲಿ 24, ಸಿಡಿಲಮರಿ ಆ್ಯಂಡ್ರೆ ರಸೆಲ್​ 27, ರಮಣ್​ದೀಪ್​ ಸಿಂಗ್​ 24 ರನ್​ ಗಳಿಸಿದರು. ಇದರಿಂದ ತಂಡ ನಿಗದಿತ ಓವರ್​ನಲ್ಲಿ 222 ರನ್​ ಗಳಿಸಿತು.

ಬೌಲಿಂಗ್​ ಪಡೆ ಮತ್ತೆ ಉಡೀಸ್​:ಆರ್​ಸಿಬಿ ತಂಡಕ್ಕೆ ಈ ಬಾರಿ ಕಂಟಕವಾಗಿದ್ದು, ಬೌಲಿಂಗ್​ ಪಡೆ. ಏನೇ ಬದಲಾವಣೆ ಮಾಡಿದರೂ ಬೌಲಿಂಗ್​ನಲ್ಲಿ ಸುಧಾರಣೆ ಕಾಣುತ್ತಿಲ್ಲ. ಯಶ್​ ದಯಾಳ್, ಕ್ಯಾಮರೂನ್​ ಗ್ರೀನ್​ ತಲಾ 2 ವಿಕೆಟ್​ ಪಡೆದರೆ, ಲೂಕಿ ಫರ್ಗ್ಯುಸನ್​, ಮೊಹಮದ್​ ಸಿರಾಜ್​ ತಲಾ 1 ವಿಕೆಟ್​ ಪಡೆದರು. ಯಶ್​ 56, ಲೂಕಿ 47 ರನ್​ ಚಚ್ಚಿಸಿಕೊಂಡು ಮತ್ತೆ ದುಬಾರಿಯಾದರು.

ಆರ್​ಸಿಬಿಯಲ್ಲಿ ಮೂರು ಬದಲಾವಣೆ:ಪಾಯಿಂಟ್​ ಪಟ್ಟಿಯಲ್ಲಿ ಕೊನೆಯಲ್ಲಿರುವ ಆರ್​ಸಿಬಿ ಈ ಪಂದ್ಯದಲ್ಲಿ ಗೆಲ್ಲಲು ಮೂರು ಬದಲಾವಣೆ ಮಾಡಿದೆ. ಆಲ್​ರೌಂಡರ್​ ಕ್ಯಾಮರೂನ್​ ಗ್ರೀನ್​, ಮೊಹಮದ್​ ಸಿರಾಜ್​, ಕರಣ್​ ಶರ್ಮಾರಿಗೆ ಅವಕಾಶ ನೀಡಲಾಗಿದೆ. ಕೋಲ್ಕತ್ತಾ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಕೋಲ್ಕತ್ತಾ ನೈಟ್ ರೈಡರ್ಸ್:ಫಿಲಿಪ್ ಸಾಲ್ಟ್, ಸುನಿಲ್ ನರೈನ್, ಆಂಗ್​ಕೃಷ್ಣ​ ರಘುವಂಶಿ, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.

ರಾಯಲ್ ಚಾಲೆಂಜರ್ಸ್ ಬೆಂಗಳೂರು:ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ವಿಲ್ ಜಾಕ್ಸ್, ರಜತ್ ಪಾಟಿದಾರ್, ಕ್ಯಾಮರೂನ್​ ಗ್ರೀನ್, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೋರ್, ಕರಣ್​ ಶರ್ಮಾ, ಲೂಕಿ ಫರ್ಗುಸನ್, ಯಶ್ ದಯಾಳ್​, ಮೊಹಮ್ಮದ್ ಸಿರಾಜ್.

ಇದನ್ನೂ ಓದಿ:18 ಎಸೆತ, 5 ಬೌಂಡರಿ, 7 ಸಿಕ್ಸರ್! ಡೆಲ್ಲಿ ಪರ ಜೇಕ್ ಫ್ರೇಸರ್ ಸ್ಫೋಟಕ ಬ್ಯಾಟಿಂಗ್ - Jake Fraser Fastest Fifty

Last Updated : Apr 21, 2024, 5:53 PM IST

ABOUT THE AUTHOR

...view details