ಬೆಂಗಳೂರು: 2024-25ರ ಸೀಸನ್‌ನ ರಣಜಿ ಟ್ರೋಫಿ ಟೂರ್ನಿಗೆ ರಾಜ್ಯ ತಂಡದ 16 ಆಟಗಾರರ ಪಟ್ಟಿಯನ್ನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಪ್ರಕಟಿಸಿದೆ. ಅನುಭವಿ ಆಟಗಾರ ಮಯಾಂಕ್ ಅಗರ್ವಾಲ್ ನಾಯಕನಾಗಿ ಮುಂದುವರೆದಿದ್ದು, ಉಳಿದಂತೆ ಮನೀಶ್ ಪಾಂಡೆ, ಪ್ರಸಿಧ್ ಕೃಷ್ಣ, ಶ್ರೇಯಸ್ ಗೋಪಾಲ್, ವೈಶಾಕ್ ವಿಜಯ್ ಕುಮಾರ್, ಸಹ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹಾಗೂ ಯುವ ಆಟಗಾರರಾದ ಅಭಿಲಾಶ್ ಶೆಟ್ಟಿ, ಹಾರ್ದಿಕ್ ರಾಜ್, ಮೊಹ್ಸಿನ್ ಖಾನ್ ಹದಿನಾರರ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿದ್ದಾರೆ. ಅಕ್ಟೋಬರ್ 11ರಿಂದ ಆರಂಭವಾಗಲಿರುವ ರಣಜಿ ಟ್ರೋಫಿ ಟೂರ್ನಿಯ ಎಲೈಟ್ ಗ್ರೂಪ್ ಸಿ ನಲ್ಲಿ ಕರ್ನಾಟಕ ತಂಡವಿದೆ.
ಆಟಗಾರರ ಪಟ್ಟಿ ಇಂತಿದೆ