ನವದೆಹಲಿ:ಇಂಗ್ಲೆಂಡ್‌ನ ಬಲಗೈ ಸ್ಟಾರ್ ಬ್ಯಾಟ್ಸ್‌ಮನ್ ಜೋ ರೂಟ್ ಗುರುವಾರ ಲಾರ್ಡ್ಸ್‌ನಲ್ಲಿ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ದಿನ ಅದ್ಭುತ ಶತಕ ಗಳಿಸುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ. ಈ ಶತಕದೊಂದಿಗೆ ರೂಟ್ ಇಂಗ್ಲೆಂಡ್ ಪರ ಗರಿಷ್ಠ 33 ಟೆಸ್ಟ್ ಶತಕಗಳನ್ನು ಬಾರಿಸಿದ ಅಲ್ಲಿನ ದಂತಕಥೆ ಅಲೆಸ್ಟರ್ ಕುಕ್ ಅವರ ದಾಖಲೆ ಸರಿಗಟ್ಟಿದ್ದಾರೆ.
ರೂಟ್ 162 ಎಸೆತಗಳಲ್ಲಿ 13 ಬೌಂಡರಿಗಳ ನೆರವಿನಿಂದ 33ನೇ ಶತಕವನ್ನು ಪೂರೈಸಿದರು. ವೇಗದ ಬೌಲರ್ ಲಹಿರು ಕುಮಾರ ಅವರ ಬೌಲ್ ಅನ್ನು ಸ್ಲಿಪ್ ಮತ್ತು ಗಲ್ಲಿಯತ್ತ ಬಾರಿಸುವ ಮೂಲಕ ಮಹತ್ವದ ಶತಕ ಪೂರೈಸಿದರು. ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದ ಶ್ರೀಲಂಕಾ ಉತ್ತಮ ಆರಂಭ ಮಾಡಿದರೂ, ನಂತರ ಜೋ ರೂಟ್ ಅವರ ದಾಖಲೆಯ 33 ನೇ ಟೆಸ್ಟ್ ಶತಕ ಲಂಕಾ ಯೋಜನೆಗಳನ್ನೆಲ್ಲ ತಲೆಕೆಳಗಾಗುವಂತೆ ಮಾಡಿತು.
ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳು:ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಜೋ ರೂಟ್ ತಮ್ಮ 33 ನೇ ಶತಕವನ್ನು ಗಳಿಸುವ ಮೂಲಕ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದರು. ಇನ್ನು ಇಷ್ಟೇ ಶತಕ ಗಳಿಸಿರುವ ಕುಕ್ 161 ಪಂದ್ಯಗಳನ್ನು ಆಡಿದ್ದರೆ, ರೂಟ್ ಅವರ 145ನೇ ಪಂದ್ಯದಲ್ಲಿ ಆಡಿದ್ದಾರೆ.
7ನೇ ಅತಿ ಹೆಚ್ಚು ಟೆಸ್ಟ್ ರನ್ ಸ್ಕೋರರ್: ರೂಟ್ ಇತ್ತೀಚೆಗೆ 12,000ನೇ ಟೆಸ್ಟ್ ಪೂರೈಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 7ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ರೂಟ್ 145 ಟೆಸ್ಟ್ ಪಂದ್ಯಗಳ 265 ಇನ್ನಿಂಗ್ಸ್‌ಗಳಲ್ಲಿ 50.71 ಸರಾಸರಿಯೊಂದಿಗೆ ಒಟ್ಟು 12274 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 5 ದ್ವಿಶತಕ, 33 ಶತಕ ಮತ್ತು 64 ಅರ್ಧ ಶತಕಗಳನ್ನು ಬಾರಿಸಿದ್ದಾರೆ.