ನವದೆಹಲಿ: ''ಕೇಂದ್ರೀಯ ಗುತ್ತಿಗೆ ಪಡೆದಿರುವ ಭಾರತದ ಆಟಗಾರರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬೇಕಾದ ದೇಶೀಯ ಕ್ರಿಕೆಟ್‌ನಲ್ಲಿ ಆಡಬೇಕು'' ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ. "ಇತ್ತೀಚಿನ ವರ್ಷಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಯಶಸ್ಸಿನಿಂದ ಮಂಡಳಿಯು ನಿಜವಾಗಿಯೂ ಸಂತೋಷವಾಗಿದೆ. ಆದರೆ, ಆಟಗಾರರು ಐಪಿಎಲ್‌ಗೆ ಆದ್ಯತೆ ನೀಡಿ ದೇಶೀಯ ಕ್ರಿಕೆಟ್‌ಗೆ ಕಡೆಗಣಿಸಿದರೆ ಅದು ಅವರಿಗೆ ಒಳ್ಳೆಯದಲ್ಲ. ಇದರ ಪರಿಣಾಮಗಳು ಕೆಟ್ಟದಾಗಿರುತ್ತದೆ'' ಎಂದು ಹೇಳಿದ್ದಾರೆ.
ಈ ರೀತಿಯ ಒಂದು ಪ್ರವೃತ್ತಿಯು ಪ್ರಾರಂಭವಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಕೆಲವು ಆಟಗಾರರು ದೇಶೀಯ ಕ್ರಿಕೆಟ್‌ಗಿಂತ ಐಪಿಎಲ್‌ಗೆ ಒತ್ತು ನೀಡಲು ಆರಂಭಿಸಿದ್ದಾರೆ, ಇದು ಸರಿಯಾದ ಬೆಳವಣಿಗೆಯಲ್ಲ. ದೇಶೀಯ ಕ್ರಿಕೆಟ್ ಯಾವಾಗಲೂ ಭಾರತೀಯ ಕ್ರಿಕೆಟ್‌ಗೆ ಅಡಿಪಾಯವಾಗಿ ನಿಂತಿದೆ. ಕ್ರೀಡೆ ದೃಷ್ಟಿಯಲ್ಲಿ ದೇಶೀಯ ಕ್ರಿಕೆಟ್ನ್ನು ಎಂದಿಗೂ ಕೂಡ ಕಡಿಮೆ ಎಂದು ಭಾವಿಸಿಲ್ಲ" ಎಂದು ಆಟಗಾರರನ್ನು ಉದ್ದೇಶಿಸಿ ಪತ್ರದಲ್ಲಿ ಬರೆದಿರುವ ಜಯ ಶಾ ಉಲ್ಲೇಖಿಸಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕಿಡಿ:"ಭಾರತಕ್ಕಾಗಿ ಆಡಲು ಬಯಸುವವರು ಮೊದಲು ದೇಶೀಯ ಕ್ರಿಕೆಟ್‌ನಲ್ಲಿ ಆಡಬೇಕು ಎಂದು ಮಂಡಳಿಯು ಆರಂಭದಿಂದಲೂ ಸ್ಪಷ್ಟ ದೃಷ್ಟಿಕೋನ ಹೊಂದಿದೆ. ದೇಶೀಯ ಕ್ರಿಕೆಟ್ ಭಾರತೀಯ ಕ್ರಿಕೆಟ್‌ನ ಬೆನ್ನೆಲಬು ಆಗಿದೆ. ಮತ್ತು ಟೀಮ್ ಇಂಡಿಯಾಕ್ಕೆ ಫೀಡರ್ ಲೈನ್ ಆಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಗುರುತಿಸುವುದು ಅತ್ಯಗತ್ಯ. ಭಾರತೀಯ ಕ್ರಿಕೆಟ್‌ಗೆ ನಮ್ಮ ದೃಷ್ಟಿ ಮೊದಲಿನಿಂದಲೂ ಸ್ಪಷ್ಟವಾಗಿದೆ. ಭಾರತಕ್ಕಾಗಿ ಆಡಲು ಬಯಸುವ ಪ್ರತಿಯೊಬ್ಬ ಕ್ರಿಕೆಟಿಗರು ದೇಶೀಯ ಕ್ರಿಕೆಟ್‌ನಲ್ಲಿ ತಮ್ಮನ್ನು ತಾವು ಸಾಬೀತುಪಡಿಸಬೇಕು. ದೇಶೀಯ ಪಂದ್ಯಾವಳಿಗಳಲ್ಲಿನ ಪ್ರದರ್ಶನವು ಆಯ್ಕೆಗೆ ನಿರ್ಣಾಯಕ ಮಾನದಂಡವಾಗಿ ಉಳಿದಿದೆ. ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸದಿರುವುದು ತೀವ್ರ ಪರಿಣಾಮಗಳನ್ನು ಉಂಟುಮಾಡುತ್ತದೆ" ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕಿಡಿಕಾರಿದ್ದಾರೆ.