ಕರ್ನಾಟಕ

karnataka

ETV Bharat / sports

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಮತ್ತೊಂದು ದಾಖಲೆ ಬರೆದ ಜಸ್ಪ್ರೀತ್​ ಬುಮ್ರಾ! - Jasprit Bumrah

ಬಾಂಗ್ಲಾ ವಿರುದ್ದದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತದ ಸ್ಟಾರ್​ ಬೌಲರ್​ ಜಸ್ಪ್ರೀತ್​​ ಬುಮ್ರಾ 4 ವಿಕೆಟ್​ ಪಡೆಯುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ. ಅದೇನೆಂದು ಇಲ್ಲಿ ತಿಳಿಯಿರಿ. ​

ಭಾರತ VS ಬಾಂಗ್ಲಾ ಟೆಸ್ಟ್​
ಭಾರತ VS ಬಾಂಗ್ಲಾ ಟೆಸ್ಟ್​ (AP)

By ETV Bharat Sports Team

Published : Sep 20, 2024, 5:11 PM IST

ಚೆನ್ನೈ, ತಮಿಳುನಾಡು: ಭಾರತ ಮತ್ತು ಬಾಂಗ್ಲಾದೇಶ ನಡುವೆ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಬುಮ್ರಾ ತಮ್ಮ ಅಂತಾರಾಷ್ಟ್ರೀಯ 400 ವಿಕೆಟ್​ಗಳನ್ನು ಪೂರೈಸಿದ್ದಾರೆ.

ಇದರೊಂದಿಗೆ ಭಾರತ ಪರ 400 ವಿಕೆಟ್ ಪಡೆದ 10ನೇ ಬೌಲರ್ ಎಂಬ ಖ್ಯಾತಿಯ ಜತೆಗೆ ಅತಿ ಕಡಿಮೆ ಪಂದ್ಯಗಳಲ್ಲಿ 400 ವಿಕೆಟ್‌ಗಳನ್ನು ಪಡೆದ ಐದನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಂದ್ಯದಲ್ಲಿ ಬುಮ್ರಾ ಶಾದ್ಮನ್ ಇಸ್ಲಾಂ, ಮುಶ್ಫಿಕರ್ ರಹೀಮ್, ಹಸನ್ ಮಹಮೂದ್ ಅವರನ್ನು ವಿಕೆಟ್​ ಪಡೆಯುವ ಮೂಲಕ ಈ ದಾಖಲೆಯನ್ನು ಬರೆದಿದ್ದಾರೆ. ಬಾಂಗ್ಲಾ ವಿರುದ್ಧದ ಮೊದಲ ಇನ್ನಿಂಗ್ಸ್​ನಲ್ಲಿ ಬುಮ್ರಾ 11 ಓವರ್‌ ಬೌಲಿಂಗ್​ ಮಾಡಿ 50 ರನ್‌ ನೀಡಿ 4 ವಿಕೆಟ್‌ ಪಡೆದಿದ್ದಾರೆ.

30 ವರ್ಷದ ಈ ಬೌಲರ್​ ಟೆಸ್ಟ್ ಕ್ರಿಕೆಟ್‌ನಲ್ಲಿ 20.48 ಸರಾಸರಿಯಲ್ಲಿ ಒಟ್ಟು 162 ವಿಕೆಟ್‌ಗಳನ್ನು ಪಡೆದಿದ್ದರೆ, ಏಕದಿನ ಕ್ರಿಕೆಟ್‌ನಲ್ಲಿ 23.55 ಸರಾಸರಿಯಲ್ಲಿ 149 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಟಿ20 ಸ್ವರೂಪದಲ್ಲಿ 17.75 ಸರಾಸರಿಯೊಂದಿಗೆ 89 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಒಟ್ಟಾರೆ 196 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 400 ವಿಕೆಟ್‌ಗಳನ್ನು ಪಡೆದಿದ್ದಾರೆ. 19 ರನ್‌ಗಳಿಗೆ 6 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

ಕಡಿಮೆ ಇನ್ನಿಂಗ್ಸ್​ನಲ್ಲಿ 400 ವಿಕೆಟ್​:ಕಡಿಮೆ ಇನ್ನಿಂಗ್ಸ್​ಗಳಲ್ಲಿ400 ವಿಕೆಟ್​ಳನ್ನು ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಅಶ್ವಿನ್ ಮೊದಲ ಸ್ಥಾನದಲ್ಲಿದ್ದಾರೆ. 216 ಇನ್ನಿಂಗ್ಸ್‌ಗಳಲ್ಲಿ 400 ಅಂತಾರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ. ಅವರ ನಂತರ, 220 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಕಪಿಲ್ ದೇವ್ ಎರಡನೇ ಸ್ಥಾನದಲ್ಲಿದ್ದರೆ, 3ನೇ ಸ್ಥಾನದಲ್ಲಿ ಮೊಹಮ್ಮದ್ ಶಮಿ 224 ಇನ್ನಿಂಗ್ಸ್‌, 4ನೇ ಸ್ಥಾನದಲ್ಲಿ ಅನಿಲ್ ಕುಂಬ್ಳೆ 226 ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆ ಬರೆದಿದ್ದಾರೆ. ಇದೀಗ ಜಸ್ಪ್ರೀತ್ ಬುಮ್ರಾ ಕೂಡ ಅತಿ ಕಡಿಮೆ ಪಂದ್ಯಗಳಲ್ಲಿ ಮತ್ತು ಇನ್ನಿಂಗ್ಸ್‌ಗಳಲ್ಲಿ 400 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದ ಐದನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ:ಚೆನ್ನೈ ಟೆಸ್ಟ್​: ಭಾರತದ ಮಾರಕ ಬೌಲಿಂಗ್​ ದಾಳಿಗೆ ಬಾಂಗ್ಲಾ ಸರ್ವಪತನ: ಟೀಂ ಇಂಡಿಯಾಗೆ ಇನ್ನಿಂಗ್ಸ್​ ಮುನ್ನಡೆ - IND VS BAN

ABOUT THE AUTHOR

...view details