Mike Tyson vs Jake Paul:58 ವರ್ಷದ ಲೆಜೆಂಡರಿ ಬಾಕ್ಸರ್ ಮೈಕ್ ಟೈಸನ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸೋಲನುಭವಿಸಿದ್ದಾರೆ. ಸುಮಾರು 19 ವರ್ಷಗಳ ನಂತರ ಬಾಕ್ಸಿಂಗ್‌ಗೆ ಪ್ರವೇಶಿಸಿದ್ದ ಮೈಕ್ ಟೈಸನ್ ಅವರನ್ನು ಜೇಕ್ ಪಾಲ್ ಸೋಲಿಸಿದ್ದಾರೆ. ಈ ಪಂದ್ಯದಲ್ಲಿ ಜೇಕ್ ಪಾಲ್ 74-78 ಅಂತರದಿಂದ ಮೈಕ್ ಟೈಸನ್ ಅವರನ್ನು ಸೋಲಿಸಿದರು.
ಆರಂಭಿಕ ಎರಡು ಸುತ್ತುಗಳಲ್ಲಿ ಮೈಕ್ ಟೈಸನ್ ಪ್ರಾಬಲ್ಯ ಮೆರೆದರು. ಆದರೆ ಈ ಆಟವನ್ನು ಕೊನೆಯವರೆಗೂ ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಇದರೊಂದಿಗೆ ಯುವ ಬಾಕ್ಸರ್ ಜೇಕ್ ಪಾಲ್ (27 ವರ್ಷ) ಬಲಿಷ್ಠವಾಗಿ ಕಮ್ಬ್ಯಾಕ್ ಮಾಡಿ ಮೂರನೇ ಸುತ್ತಿನಿಂದ ಹಿಡಿತ ಸಾಧಿಸಲಾರಂಭಿಸಿದರು. ನಂತರ ಇಡೀ ಆಟದಲ್ಲಿ ಪ್ರಾಬಲ್ಯ ಸಾಧಿಸಿದರು.
8 ಸುತ್ತು:ಮೈಕ್ ಟೈಸನ್ ಮತ್ತು ಜೇಕ್ ಪಾಲ್ ನಡುವೆ ಒಟ್ಟು 8 ಸುತ್ತಿನ ಸ್ಫರ್ಧೆ ನಡೆಯಿತು. ಪೌಲ್ ಆರು ಸುತ್ತುಗಳಲ್ಲಿ ಗೆಲುವು ಸಾಧಿಸಿದರೇ, ಮೈಕ್ ಟೈಸನ್ ಕೇವಲ ಎರಡು ಸುತ್ತುಗಳಲ್ಲಿ ಗೆದ್ದು ತೃಪ್ತಿಪಟ್ಟುಕೊಂಡರು. ಇದರೊಂದಿಗೆ ಪೌಲ್ 10-9, 10-9, 9-10, 9-10, 9-10, 9-10, 9-10, 9-10 ಅಂಕಗಳಿಂದ ಜಯಭೇರಿ ಬಾರಿಸಿದರು. ಪಂದ್ಯದ ನಂತರ, ಮೈಕ್ ಟೈಸನ್ - ಯುವ ಬಾಕ್ಸರ್ ಕಮ್ ಯೂಟ್ಯೂಬರ್ ಜೇಕ್ ಪೌಲ್ ಅವರನ್ನು ಅಭಿನಂದಿಸಿದರು. ಮೈಕ್ ಟೈಸನ್ ಕೊನೆಯ ಬಾರಿಗೆ 2005ರಲ್ಲಿ ಕೆವಿನ್ ವಿರುದ್ಧ ಸೋಲನುಭವಿಸಿದ್ದರು. ಈ ಪಂದ್ಯದ ಬಳಿಕ ಅವರು ವೃತ್ತಿಪರ ಬಾಕ್ಸಿಂಗ್‌ಗೆ ವಿದಾಯ ಹೇಳಿದ್ದರು.