ನವದೆಹಲಿ:ಸ್ಪೇನ್‌ನ ಗ್ರಾನಡಾದಲ್ಲಿ ನಡೆದ ಇಂಟರ್‌ನ್ಯಾಶನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್‌ಎಸ್‌ಎಫ್) 10 ಮೀಟರ್ ವಿಶ್ವಕಪ್‌ನಲ್ಲಿ ಭಾರತ 10 ಮೀಟರ್ ಏರ್ ರೈಫಲ್ ಜೂನಿಯರ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿತು.
ಮಂಗಳವಾರ ನಡೆದ ಫೈನಲ್‌ನಲ್ಲಿ ಆಯಾ ಮಹಿಳಾ ಮತ್ತು ಪುರುಷರ ವೈಯಕ್ತಿಕ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿದ್ದ ಇಶಾ ಅನಿಲ್ ತಕ್ಸಾಲೆ ಮತ್ತು ಉಮಾಮಹೇಶ್ ಮದ್ದಿನೇನಿ ಅವರು ಭಾರತೀಯ ಪಟುಗಳಾದ ಅನ್ವಿ ರಾಥೋಡ್ ಮತ್ತು ಅಭಿನವ್ ಶಾ ಅವರನ್ನು 16-8 ರಿಂದ ಸೋಲಿಸಿದರು.
ಈ ಸ್ಪರ್ಧೆಯಲ್ಲಿ ಭಾರತ ಮೂರು ಚಿನ್ನದ ಪದಕ ಸೇರಿದಂತೆ ಏಳು ಪದಕಗಳನ್ನು ಗೆದ್ದಿದೆ. ಅನ್ವಿ ಮತ್ತು ಅಭಿನವ್ ಒಟ್ಟು 629.0 ಅಂಕಗಳೊಂದಿಗೆ ಚಿನ್ನದ ಪದಕಕ್ಕೆ ಲಗ್ಗೆ ಇಟ್ಟಿದ್ದರು. ಇಶಾ ಮತ್ತು ಉಮಾ ಮಹೇಶ್ 627.4 ಅಂಕಗಳೊಂದಿಗೆ ಅವರಿಗಿಂತ ಹಿಂದಿದ್ದರು. ಇದಕ್ಕೂ ಮುನ್ನ ಮಂಗಳವಾರ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯ ಪದಕದ ಪಂದ್ಯದಲ್ಲಿ ದೃಷ್ಟಿ ಸಾಂಗ್ವಾನ್ ಮತ್ತು ಪರಾಸ್ ಖೋಲಾ ಸೋಲು ಅನುಭವಿಸಿದರು. ಈ ಜೋಡಿ ಅರ್ಹತೆಯಲ್ಲಿ ಆರನೇ ಸ್ಥಾನ ಗಳಿಸಿತು. ಜಾರ್ಜಿಯನ್ ಜೋಡಿ ಈ ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಗೆದ್ದರು.
34 ಸದಸ್ಯರ ಭಾರತ ತಂಡ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿದೆ. ಈ ಸ್ಪರ್ಧೆಯಲ್ಲಿ ಎಲ್ಲಾ ದೇಶಗಳ ಜೂನಿಯರ್ ಮತ್ತು ಸೀನಿಯರ್ಗೆ 10 ಮೀಟರ್ ಏರ್ ಗನ್ ಸ್ಪರ್ಧೆಗಳು ಮಾತ್ರ ನಡೆಯುತ್ತಿವೆ. ಭಾರತದ ಆಟಗಾರರು ಇಲ್ಲಿಯವರೆಗೆ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಮುಂದೆ ಸಾಗುತ್ತಿದ್ದಾರೆ.
ಓದಿ:ಗುರುವಾರದಿಂದ ಭಾರತ ಇಂಗ್ಲೆಂಡ್ ಮಧ್ಯೆ ಮೂರನೇ ಟೆಸ್ಟ್.. ರಾಜ್ಕೋಟ್ನಲ್ಲಿ ಟೀಂ ಇಂಡಿಯಾ ಇತಿಹಾಸ ಹೇಗಿದೆ?