IPL Retention 2025: ಇಂಡಿಯನ್ ಪ್ರೀಮಿಯರ್ ಲೀಗ್ 2025 ರಿಟೇನ್ ಆಟಗಾರರ ಪಟ್ಟಿ ಬಿಡುಗಡೆಯಾಗಿದೆ. ಐಪಿಎಲ್ ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರರ ಲಿಸ್ಟ್ ಅನ್ನು ಬಿಸಿಸಿಐಗೆ ಸಲ್ಲಿಸಿವೆ. ಅಚ್ಚರಿ ಎಂಬಂತೆ ಲಕ್ನೋ ಫ್ರಾಂಚೈಸಿಯು ಕೆ. ಎಲ್. ರಾಹುಲ್ ಅವರನ್ನು ಉಳಿಸಿಕೊಂಡಿಲ್ಲ. ಇದರಿಂದಾಗಿ ಇವರು ಕೂಡ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ, ಸ್ಟಾರ್ ಕ್ರಿಕೆಟಿಗರಾದ ರಿಷಭ್ ಪಂತ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಶಮಿ, ಯಜ್ವೇಂದ್ರ ಚಹಲ್ ಸೇರಿ ಹಲವರು ಈ ಬಾರಿಯ ಹಜಾರಿನಲ್ಲಿರಲಿದ್ದಾರೆ.
ರಿಟೇನ್ಶನ್ ಮೊತ್ತ ಎಷ್ಟು?
ಐಪಿಎಲ್ 2025 ರ ಋತುವಿಗಾಗಿ ಪ್ರತಿ ತಂಡಕ್ಕೆ ಹರಾಜಿನಲ್ಲಿ 120 ಕೋಟಿ ರೂ. ನಿಗದಿಪಡಿಸಲಾಗಿದೆ. ಐಪಿಎಲ್ ಆಡಳಿತ ಮಂಡಳಿಯು ಪ್ರತಿ ರಿಟೇನ್ಶನ್ ಮೊತ್ತವನ್ನು ಕೂಡ ನಿಗದಿಪಡಿಸಿದೆ:
- 1ನೇ ರಿಟೇನ್ಶನ್ - 18 ಕೋಟಿ ರೂ.
- 2ನೇ ರಿಟೇನ್ಶನ್ - 14 ಕೋಟಿ ರೂ.
- 3ನೇ ರಿಟೇನ್ಶನ್ - 11 ಕೋಟಿ ರೂ.
- 4ನೇ ರಿಟೇನ್ಶನ್ - 18 ಕೋಟಿ ರೂ.
- 5ನೇ ರಿಟೇನ್ಶನ್ - 14 ಕೋಟಿ ರೂ.
ಫ್ರಾಂಚೈಸಿಗಳು ತಮ್ಮ ಇಚ್ಛೆಯಂತೆ ಮತ್ತು ಆಟಗಾರರೊಂದಿಗಿನ ಒಪ್ಪಂದದ ಪ್ರಕಾರ ಪ್ರತಿ ರಿಟೇನ್ಶನ್ ಮೊತ್ತವನ್ನು ಬದಲಾಯಿಸಬಹುದು. ಆದರೆ ಐದು ರಿಟೇನ್ಶನ್ ಒಟ್ಟು ಮೊತ್ತವು 75 ಕೋಟಿ ಮಾತ್ರ. ಮತ್ತೊಂದೆಡೆ, ಅನ್‌ಕ್ಯಾಪ್ಡ್ ಆಟಗಾರನನ್ನು ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ 4 ಕೋಟಿ ವೆಚ್ಚವಾಗುತ್ತದೆ. ಇನ್ನು ಫ್ರಾಂಚೈಸಿಗಳು ಉಳಿಸಿಕೊಳ್ಳದ ಆಟಗಾರರು ಹರಾಜಿನಲ್ಲಿ ಭಾಗಿಯಾಗಲಿದ್ದಾರೆ. ಹರಾಜು ನಡೆಯುವ ಸ್ಥಳ, ದಿನಾಂಕವನ್ನು ಐಪಿಎಲ್ ಆಡಳಿತ ಮಂಡಳಿ ಇನ್ನೂ ಪ್ರಕಟಿಸಿಲ್ಲ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇತ್ತೀಚೆಗಷ್ಟೇ ರಿಟೇನ್ಶನ್ಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಹೊರಡಿಸಿದೆ. ಇದರ ಪ್ರಕಾರ, ಫ್ರಾಂಚೈಸಿ ಗರಿಷ್ಠ 6 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದು. ಒಂದು ತಂಡವು 6 ಕ್ಕಿಂತ ಕಡಿಮೆ ಆಟಗಾರರನ್ನು ಉಳಿಸಿಕೊಂಡರೆ, ಆ ಸಂದರ್ಭದಲ್ಲಿ ಫ್ರಾಂಚೈಸ್ ಹರಾಜಿನ ಸಮಯದಲ್ಲಿ ರೈಟ್ ಟು ಮ್ಯಾಚ್ ಕಾರ್ಡ್ ಅನ್ನು ಬಳಸುವ ಅವಕಾಶ ಪಡೆಯುತ್ತದೆ.
ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಹೀಗಿದೆ:
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್ (ಅನ್‌ಕ್ಯಾಪ್ಡ್)
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ