ಕರ್ನಾಟಕ

karnataka

ETV Bharat / sports

ಸವಾಲಿನ ಪಿಚ್​ನಲ್ಲಿ ಕೆಚ್ಚೆದೆಯ ಬ್ಯಾಟ್​ ಮಾಡಿ ಪಂಜಾಬ್​​ ಕಿಂಗ್ಸ್​​ ಮಣಿಸಿದ ರಾಜಸ್ಥಾನ ರಾಯಲ್ಸ್​ - RR win on PBKS - RR WIN ON PBKS

ಪಂಜಾಬ್ ಕಿಂಗ್ಸ್​ ವಿರುದ್ಧ ರಾಜಸ್ಥಾನ ರಾಯಲ್ಸ್​ 3 ವಿಕೆಟ್​​ಗಳ ಪ್ರಯಾಸದ ಗೆಲುವು ದಾಖಲಿಸಿತು.

ಪಂಜಾಬ್​​ ಕಿಂಗ್ಸ್​​ ಮಣಿಸಿದ ರಾಜಸ್ಥಾನ ರಾಯಲ್ಸ್​
ಪಂಜಾಬ್​​ ಕಿಂಗ್ಸ್​​ ಮಣಿಸಿದ ರಾಜಸ್ಥಾನ ರಾಯಲ್ಸ್​

By PTI

Published : Apr 14, 2024, 7:18 AM IST

ಚಂಡೀಗಢ:ಐಪಿಎಲ್​ ಅಂದ್ರೇನೆ ಹಾಗೆ. ಇಲ್ಲಿ ರೋಚಕತೆಗೆ ಕೊರೆತೆಯಿಲ್ಲ. ಶನಿವಾರ ಇಲ್ಲಿ ನಡೆದ ರಾಜಸ್ಥಾನ ರಾಯಲ್ಸ್​ ಮತ್ತು ಪಂಜಾಬ್​ ಕಿಂಗ್ಸ್​ ನಡುವಿನ ಪಂದ್ಯವೂ ಕ್ರಿಕೆಟ್​ ಪ್ರಿಯರಿಗೆ ರಸದೌತಣ ನೀಡಿತು. ಕಠಿಣ ಪಿಚ್​ನಲ್ಲಿ ಇತ್ತಂಡಗಳು ಭರ್ಜರಿ ಹೋರಾಟ ನಡೆಸಿದರೂ, ರಾಜಸ್ಥಾನ ರಾಯಲ್ಸ್​ ಕೊನೆಯಲ್ಲಿ ಗೆಲುವಿನ ನಗೆ ಬೀರಿತು.

ಪಂಜಾಬ್​ ನೀಡಿದ್ದ 148 ರನ್​ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್​​ ಫ್ಯ್ಲಾಟ್​ ಪಿಚ್​ನಲ್ಲಿ ಕೊನೆಯ 1 ಎಸೆತ ಬಾಕಿ ಉಳಿಸಿ 152 ರನ್​ ಗಳಿಸಿತು. ಇದರಿಂದ ತಂಡ 3 ವಿಕೆಟ್​ಗಳ ಜಯ ದಾಖಲಿಸಿತು. ಇದಕ್ಕೆ ಕಾರಣವಾಗಿದ್ದು ಶಿಮ್ರಾನ್​ ಹೆಟ್ಮಾಯರ್​ ಮತ್ತು ರೋವ್‌ಮನ್ ಪೊವೆಲ್.

ರಾಜಸ್ಥಾನ ತಂಡಕ್ಕೆ ಕೊನೆಯ 5 ಓವರ್‌ಗಳಲ್ಲಿ 49 ರನ್‌ಗಳ ಅಗತ್ಯವಿತ್ತು. ಬ್ಯಾಟರ್​ಗಳಿಗೆ ಕಠಿಣ ಸವಾಲೊಡ್ಡಿದ್ದ ಪಿಚ್​ನಲ್ಲಿ ರನ್​ ಗಳಿಸಲು ಪರದಾಡಬೇಕಿತ್ತು. ಆದರೂ, ಕೆಚ್ಚೆದೆಯ ಪ್ರದರ್ಶನ ನೀಡಿದ ಹೆಟ್ಮಾಯರ್​ ಸಿಡಿಯುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಕೆರೆಬಿಯನ್​ ಆಟಗಾರ 10 ಎಸೆತಗಳಲ್ಲಿ 27 ರನ್​ ಗಳಿಸಿದರು. ಕೊನೆಯ ಓವರ್​ನಲ್ಲಿ 10 ರನ್​ ಬೇಕಿದ್ದಾಗ ಮೊದಲೆರಡು ಎಸೆತಗಳಲ್ಲಿ ರನ್​ ಬರಲಿಲ್ಲ. ತಂಡ ಆತಂಕದಲ್ಲಿದ್ದಾಗ ಭರ್ಜರಿ ಎರಡು ಸಿಕ್ಸರ್​ ಬಾರಿಸಿ ಗೆಲುವಿನ ಸಂಭ್ರಮ ತಂದರು. ಇನ್ನೊಂದೆಡೆ ರೋವಮೆನ್​ ಪೊವೆಲ್​ 11 ರನ್​ ಗಳಿಸಿ ಸಾಥ್​ ನೀಡಿದರು.

ಆರಂಭಿಕ ಯಶಸ್ವಿ ಜೈಸ್ವಾಲ್​ 39, ಮೊದಲ ಪಂದ್ಯವಾಡಿದ ಸ್ಪಿನ್ನರ್​ ತನುಷ್​ ಕೋಟ್ಯನ್​ 24, ನಾಯಕ ಸಂಜು ಸ್ಯಾಮ್ಸನ್​ 18, ರಿಯಾನ್​ ಪರಾಗ್​ 23 ರನ್​ ಕಾಣಿಕೆ ನೀಡಿದರು. ಪಂಜಾಬ್​ ಪರವಾಗಿ ಕಗಿಸೊ ರಬಾಡ, ಸ್ಯಾಮ್​ ಕರ್ರನ್​ ತಲಾ 2 ವಿಕೆಟ್​ ಪಡೆದರು.

ತಿಣುಕಾಡಿದ ಪಂಜಾಬ್​ ಬ್ಯಾಟರ್ಸ್​:ಇದಕ್ಕೂ ಮೊದಲು ಬ್ಯಾಟ್​ ಮಾಡಿದ ಪಂಜಾಬ್​ ಕಿಂಗ್ಸ್​ ಬ್ಯಾಟರ್​ಗಳು ರನ್​ ಗಳಿಸಲು ಪರದಾಡಿದರು. ಕೇಶವ್​ ಮಹಾರಾಜ್​, ಟ್ರೆಂಟ್​ ಬೌಲ್ಟ್​, ಆವೇಶ್​ ಖಾನ್​ ಬಿಗಿದಾಳಿಗೆ ಸಿಲುಕಿ ತತ್ತರಿಸಿದರು. ಮೊದಲ 10 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 52 ರನ್​ ಮಾತ್ರ ಗಳಿಸಿತು. ಶಿಖರ್​ ಧವನ್ ಬದಲಿಗೆ ಆಡಿದ ಅಥರ್ವ ಟಾಯ್ಡೆ 15, ಜಾನಿ ಬೈರ್​ಸ್ಟೋವ್​ 15, ಪ್ರಭ್​ಶಿಮ್ರಾನ್​ ಸಿಂಗ್​ 10, ಹಂಗಾಮಿ ನಾಯಕ ಸ್ಯಾಮ್​ ಕರ್ರನ್​ 6 ರನ್​ ಗಳಿಸಲು ಅದಕ್ಕಿಂತಲೂ ಹೆಚ್ಚು ಎಸೆತ ತೆಗೆದುಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಜಿತೇಶ್​ ಶರ್ಮಾ 29, ಲಿಯಾಮ್​ ಲಿವಿಂಗ್​ಸ್ಟೋನ್​ 21, ಅಶುತೋಷ್​ ಶರ್ಮಾ 31 ರನ್​ ಗಳಿಸಿ ತಂಡವನ್ನು ಆಧರಿಸಿದರು.

ಬಿಗಿ ಬೌಲಿಂಗ್​ ದಾಳಿ:ನಿಧಾನಗತಿ ಪಿಚ್​​ನ ಲಾಭ ಪಡೆದ ರಾಜಸ್ಥಾನ ಬೌಲರ್​ಗಳು ಬಿಗಿ ದಾಳಿ ನಡೆಸಿದರು. ಕೇಶವ್ ಮಹಾರಾಜ್​, ಆವೇಶ್​ ಖಾನ್​ ತಲಾ 2 ವಿಕೆಟ್​ ಪಡೆದರು. ಟ್ರೆಂಟ್​ ಬೌಲ್ಟ್​​ 1 ವಿಕೆಟ್​ ಕಿತ್ತರೂ 4 ಓವರ್​ಗಳಲ್ಲಿ 22 ರನ್​ ಮಾತ್ರ ನೀಡಿದರು. ಕೇಶವ್​ ಮಹಾರಾಜ್​ 23 ರನ್​ ಬಿಟ್ಟುಕೊಟ್ಟರು.

ಇದನ್ನೂ ಓದಿ:ಐಪಿಎಲ್​ 2024: ರಾಜಸ್ಥಾನ್​ ಬೌಲಿಂಗ್​ ದಾಳಿಗೆ ನಲುಗಿದ ಪಂಜಾಬ್​: ಸಂಜು ಪಡೆಗೆ 148 ರನ್​ಗಳ ಗುರಿ - PBKS VS RR

ABOUT THE AUTHOR

...view details