ಅಹಮದಾಬಾದ್(ಗುಜರಾತ್):ಐಪಿಎಲ್ 2024ರ ಟೂರ್ನಿಯ ನಿನ್ನೆ(ಭಾನುವಾರ) ನಡೆದ 2ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಗುಜರಾತ್ ಟೈಟಾನ್ಸ್ 6 ರನ್‌ಗಳಿಂದ ಬಗ್ಗು ಬಡಿಯಿತು. ರೋಹಿತ್ ಮತ್ತು ಬ್ರೆವಿಸ್ ಕ್ರೀಸ್‌ನಲ್ಲಿ ನಿಂತು ಆಕ್ರಮಣಕಾರಿ ಆಟವಾಡಿದರೂ ಗೆಲುವು ದಕ್ಕಲಿಲ್ಲ. ಗುಜರಾತ್ ಟೈಟಾನ್ಸ್ ತನ್ನ ಬಲಿಷ್ಠ ಬೌಲಿಂಗ್ ಬಲದ ಮೂಲಕ ಮುಂಬೈಯನ್ನು ಸೋಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಗುಜರಾತ್ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಲಷ್ಟೇ ಶಕ್ತವಾಯಿತು. ಸಾಯಿ ಸುದರ್ಶನ್ (39 ಎಸೆತಗಳಲ್ಲಿ 45 ರನ್, 3x4, 1x6) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಶುಭಮನ್ ಗಿಲ್ (22 ಎಸೆತಗಳಲ್ಲಿ 31 ರನ್, 3x4, 1x6) ಗಳಿಸಿದರು. ರಾಹುಲ್ ತೆವಾಟಿಯಾ (22), ವೃದ್ಧಿಮಾನ್ ಸಹಾ (19), ಒಮರ್ಜಾಯ್ (17) ಮತ್ತು ಮಿಲ್ಲರ್ (12) ರನ್ ಗಳಿಸಿದರು. ಇನಿಂಗ್ಸ್ ಅಂತ್ಯಕ್ಕೆ ಆರು ವಿಕೆಟ್ ನಷ್ಟಕ್ಕೆ 168 ರನ್ ಪೇರಿಸಿತು.
ಮುಂಬೈ ಬೌಲರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ 3, ಜೆರಾಲ್ಡ್ ಕೋಟ್ಜಿ 2 ಮತ್ತು ಪಿಯೂಷ್ ಚಾವ್ಲಾ 1 ವಿಕೆಟ್ ಪಡೆದರು.