ಅಹಮದಾಬಾದ್ : ಗುಜರಾತ್ ಟೈಟಾನ್ಸ್ ಬೌಲಿಂಗ್ಗೆ ತತ್ತರಿಸಿದ ಸನ್ ರೈಸರ್ಸ್ ಹೈದರಾಬಾದ್ 161ರನ್ಗಳನ್ನು ಗಳಿಸಲು ಮಾತ್ರ ಶಕ್ತವಾಗಿದೆ. ಪಂದ್ಯ ಗೆಲ್ಲಲು ಗುಜರಾತ್ ತಂಡಕ್ಕೆ 162 ರನ್‌ಗಳ ಗುರಿ ನೀಡಿದೆ.
ಕಳೆದ ಪಂದ್ಯದಲ್ಲಿ ಹೈದರಾಬಾದ್ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಯಾವೊಬ್ಬ ಆಟಗಾರರು ಸಹ ಇಂದು ತಂಡಕ್ಕೆ ಆಸರೆಯಾಗಲಿಲ್ಲ. ಗುಜರಾತ್ಗಾಗಿ ಡೆತ್ ಓವರ್ ಸ್ಪೆಷಲಿಸ್ಟ್ ಮೋಹಿತ್ ಶರ್ಮಾ ರನ್ ವೇಗಕ್ಕೆ ಬ್ರೇಕ್ ಹಾಕುವುದರ ಜೊತೆಗೆ 3 ವಿಕೆಟ್ಗಳನ್ನು ಪಡೆದು ಮಿಂಚಿದರು. ದೇಶದ ಅತಿ ದೊಡ್ಡದಾದ ಅಹಮದಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ.
ಟಾಸ್ ಗೆದ್ದು ಮತ್ತೊಮ್ಮೆ ಬೃಹತ್ ರನ್ ಮಳೆ ಹರಿಸುವ ಭರದಲ್ಲಿ ಮೊದಲು ಹೈದರಾಬಾದ್ ಇನ್ನಿಂಗ್ಸ್ ಆರಂಭಿಸಿತು. ಆದರೆ ಗುಜರಾತ್ನ ಆಕ್ರಮಣಕಾರಿ ಮತ್ತು ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ಬ್ಯಾಟರ್ಸ್ ವಿಕೆಟ್ ಕಳೆದುಕೊಂಡು ಪೆವಿಲಿಯನ್ ಹಾದಿ ಹಿಡಿದರು. ಆರಂಭಿಕರಾಗಿ ಕ್ರೀಸ್ಗೆ ಬಂದ ಟ್ರಾವಿಸ್ ಹೆಡ್ ಮತ್ತು ಮಯಾಂಕ್ ಅಗರ್ವಾಲ್ ಜೋಡಿ ಉತ್ತಮ ಅಡಿಪಾಯ ಹಾಕುವಲ್ಲಿ ಎಡವಿತು. ಟೂರ್ನಿ ಆರಂಭದಿಂದಲೂ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಮಯಾಂಕ್ ಈ ಬಾರಿಯೂ ತಂಡಕ್ಕೆ ಆಸರೆಯಾಗಲಿಲ್ಲ.
ಹೈದರಾಬಾದ್ 108 ರನ್ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮಯಾಂಕ್ ಅಗರ್ವಾಲ್ (16) ಟ್ರಾವಿಸ್ ಹೆಡ್(19), ಅಭಿಷೇಕ್ ಶರ್ಮಾ(29), ಮತ್ತು ಐಡೆನ್ ಮರ್ಕ್ರಾಮ್ (17) ರನ್ಗಳನ್ನು ಗಳಿಸಿ ಗುಜರಾತ್ ಬೌಲರ್ಸ್ ಗೆ ವಿಕೆಟ್ ಒಪ್ಪಿಸಿದರು. ಕಳೆದ ಪಂದ್ಯದ ಹೀರೋ ಹೆನ್ರಿಚ್ ಕ್ಲಾಸೆನ್ ಎರಡು ಸಿಕ್ಸರ್ ಸಿಡಿಸಿ ಬೃಹತ್ ರನ್ ಕಲೆ ಹಾಕುವ ಸೂಚನೆ ಕೊಟ್ಟರೂ 24 ರನ್ಗಳಿಗೆ ರಶೀದ್ ಖಾನ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಆಗಮಿಸಿದ ಯಾವೊಬ್ಬ ಆಟಗಾರ ಕೂಡ ಗಮನ ಸೆಳೆಯುವಂತ ಪ್ರದರ್ಶನ ನೀಡಲಿಲ್ಲ.