ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ಆಲ್‌ರೌಂಡರ್ ಆಂಡ್ರೆ ರಸೆಲ್ ಶುಕ್ರವಾರ 100 ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಎನಿಸಿಕೊಂಡಿದ್ದಾರೆ.
ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕೆಕೆಆರ್ ನಡುವಿನ ಹಣಾಹಣಿಯಲ್ಲಿ ಆಂಡ್ರೆ ರಸೆಲ್ ಈ ಸಾಧನೆ ಮಾಡಿದರು. ತಮ್ಮ 114ನೇ ಐಪಿಎಲ್ ಪಂದ್ಯದಲ್ಲಿ ರಸೆಲ್ 17ನೇ ಓವರ್‌ನಲ್ಲಿ ರಜತ್ ಪಾಟಿದಾರ್ ಅವರ ವಿಕೆಟ್‌ನೊಂದಿಗೆ ಮೈಲಿಗಲ್ಲು ತಲುಪಿದರು. ಪಾಟಿದಾರ್ ಡೀಪ್ ಮಿಡ್ ವಿಕೆಟ್‌ನಲ್ಲಿ ರಿಂಕು ಸಿಂಗ್‌ಗೆ ಕ್ಯಾಚ್ ನೀಡಿದರು.
ಐಪಿಎಲ್‌ನಲ್ಲಿ 100 ವಿಕೆಟ್ ಗಳಿಸಿದ ಕೆಕೆಆರ್‌ನ ಏಕೈಕ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೂ ರಸೆಲ್ ಪಾತ್ರರಾದರು. 171 ಪಂದ್ಯಗಳಲ್ಲಿ 182 ವಿಕೆಟ್‌ಗಳೊಂದಿಗೆ ಆಫ್-ಸ್ಪಿನ್ನರ್ ಸುನಿಲ್ ನರೈನ್ ಚಾರ್ಟ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2014 ರ ಐಪಿಎಲ್ ಹರಾಜಿನಲ್ಲಿ ಇಬ್ಬರೂ ಆಟಗಾರರನ್ನು ಕೆಕೆಆರ್ ಆಯ್ಕೆ ಮಾಡಿತು. ಅಂದಿನಿಂದ ಈ ಇಬ್ಬರು ಕೆರಿಬಿಯನ್ ಆಟಗಾರರು ಫ್ರಾಂಚೈಸಿಯ ಅವಿಭಾಜ್ಯ ಅಂಗವಾಗಿದ್ದಾರೆ.