ಕರ್ನಾಟಕ

karnataka

ETV Bharat / sports

ಕಾಶಿ ವಿಶ್ವನಾಥನಿಗೆ ಒಲಿಂಪಿಕ್​ ಪದಕ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದ ಲಲಿತ್​ ಉಪಾಧ್ಯಾಯ - Lalit Upadhyaya - LALIT UPADHYAYA

ಪ್ಯಾರಿಸ್ ಒಲಿಂಪಿಕ್​ನಲ್ಲಿ ಕಂಚಿನ ಪದಕ ಗೆದ್ದ ಹಾಕಿ ತಂಡದ ಆಟಗಾರ ಲಲಿತ್ ಉಪಾಧ್ಯಾಯ ಅವರು ಕಾಶಿ ವಿಶ್ವನಾಥ ಮಂದಿರಕ್ಕೆ ಭೇಟಿ ನೀಡಿ ಪದಕವನ್ನು ಅರ್ಪಿಸಿದ್ದಾರೆ.

ಕಾಶಿ ವಿಶ್ವನಾಥ ಮಂದಿರಕ್ಕೆ ಭೇಟಿ ನೀಡಿದ ಲಲಿತ್​
ಕಾಶಿ ವಿಶ್ವನಾಥ ಮಂದಿರಕ್ಕೆ ಭೇಟಿ ನೀಡಿದ ಲಲಿತ್​ (ETV Bharat)

By ETV Bharat Sports Team

Published : Aug 11, 2024, 8:08 PM IST

ವಾರಣಾಸಿ: ಪ್ಯಾರಿಸ್ ಒಲಿಂಪಿಕ್​ನಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡದ ಆಟಗಾರ ಲಲಿತ್ ಉಪಾಧ್ಯಾಯ ಇಂದು ವಾರಣಾಸಿಗೆ ಭೇಟಿ ನೀಡಿ ತಾವು ಗೆದ್ದ ಪದಕವನ್ನು ವಿಶ್ವನಾಥನ ಚರಣಕ್ಕೆ ಅರ್ಪಿಸಿ ಪೂಜೆ ಸಲ್ಲಿಸಿದರು.

ಇದಕ್ಕೂ ಮೊದಲು ವಾರಣಾಸಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಲಲಿತ್​ಗೆ ನೆರೆದಿದ್ದ ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಕ್ರೀಡಾ ಪ್ರೇಮಿಗಳು ಅವರನ್ನು ಹೆಗಲ ಮೇಲೆ ಹೊತ್ತು ಹರ ಹರ ಮಹಾದೇವ್ ಎಂಬ ಘೋಷಣೆಗಳನ್ನು ಕೂಗಿದರು.

ಕಾಶಿ ವಿಶ್ವನಾಥ ಮಂದಿರಕ್ಕೆ ಲಲಿತ್ ಭೇಟಿ (ETV Bharat)

ಉತ್ತರ ಪ್ರದೇಶ ಸರ್ಕಾರದ ಸಚಿವ ರವೀಂದ್ರ ಜೈಸ್ವಾಲ್ ಮತ್ತು ಸಂಸದೆ ಪ್ರಿಯಾ ಸರೋಜ್ ಕೂಡ ವಿಮಾನ ನಿಲ್ದಾಣಕ್ಕೆ ತಲುಪಿ ಲಲಿತ್ ಉಪಾಧ್ಯಾಯ ಅವರನ್ನು ಸ್ವಾಗತಿಸಿದರು. ತಮ್ಮ ಊರಿನ ಹುಡುಗನೊಬ್ಬ ಇಷ್ಟು ದೊಡ್ಡ ಸಾಧನೆ ಮಾಡಿರುವುದು ಕಾಶಿಯ ಜನತೆಗೆ ಅತ್ಯಂತ ಹೆಮ್ಮೆಯ ಸಂಗತಿ ಎಂದು ಸಂತೋಷ ವ್ಯಕ್ತಪಡಿಸಿದರು.

ಕಾಶಿ ವಿಶ್ವನಾಥಗೆ ಪೂಜೆ ಸಲ್ಲಿಸಿದ ಲಲಿತ್​ (ETV Bharat)

ಇದೇ ವೇಳೆ ಮಾತನಾಡಿದ ಲಲಿತ್,​ ವಿಶ್ವಮಟ್ಟದಲ್ಲಿ ದೇಶದ ಘನತೆ ಹೆಚ್ಚುತ್ತಿದೆ. ದೇಶದ ಜನರ ಪ್ರೀತಿಯಿಂದ ಈ ಗೆಲುವು ಸಿಕ್ಕಿದೆ. ನನ್ನ ಕುಟುಂಬದವರ ಆಶೀರ್ವಾದದಿಂದ ನಾನು ಈ ಸಾಧನೆ ಮಾಡಲು ಸಾಧ್ಯವಾಗಿದೆ. ‘ಹರ್ ಹರ್ ಮಹಾದೇವ್’ ಎಂದು ಪಠಿಸುವ ಮೂಲಕ ​ನೇರವಾಗಿ ಕಾಶಿ ವಿಶ್ವನಾಥ್ ಮಂದಿರಕ್ಕೆ ತೆರಳಿ ಅಲ್ಲಿ ತಾವು ಗೆದ್ದ ಪದಕವನ್ನು ದೇವರಿಗೆ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.

ಕಾಶಿ ವಿಶ್ವನಾಥ ಮಂದಿರಕ್ಕೆ ಲಲಿತ್ ಭೇಟಿ (ETV Bharat)

ದೇವರ ದರ್ಶನ ಪಡದ ಬಳಿಕ ಮಾತನಾಡಿದ ಲಲಿತ್, ಈ ಬಾರಿ ಪದಕದ ಬಣ್ಣ ಬದಲಾಗಿಲ್ಲ, ಮುಂದಿನ ಬಾರಿ ಪದಕದ ಬಣ್ಣ ಖಂಡಿತಾ ಬದಲಾಗಲಿದ್ದು, ವಿಶ್ವನಾಥ್​ ಬಾಬಾಗೆ ಚಿನ್ನದ ಪದಕ ನೀಡುವುದಾಗಿ ತಿಳಿಸಿದರು.

ಇದೇ ವೇಳೆ ಮಗನ ಸಾಧನೆ ಕಂಡು ಪೋಷಕರು ಭಾವುಕರಾದರು. ಲಲಿತ್​ ಸಾಧನೆ ಬಗ್ಗೆ ಹೆಮ್ಮೆ ಇದೆ ಎಂದು ತಿಳಿಸಿದ ಅವರ ತಾಯಿ, ಮುಂದಿನ ಬಾರಿ ಲಲಿತ್ ಚಿನ್ನದ ಪದಕವನ್ನು ದೇಶಕ್ಕೆ ಗೆದ್ದು ತರುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ಪೇನ್​ ಮಣಿಸಿದ್ದ ಭಾರತ:ಒಲಿಂಪಿಕ್ಸ್​ ಸೆಮಿಫೈನಲ್‌ನಲ್ಲಿ ಜರ್ಮನಿ ವಿರುದ್ಧ ಭಾರತ ಹಾಕಿ ತಂಡ ಸೋಲನುಭವಿಸಿತ್ತು. ಈ ಸೋಲಿನೊಂದಿಗೆ ಭಾರತದ ಬೆಳ್ಳಿ ಹಾಗೂ ಚಿನ್ನದ ಪದಕ ಗೆಲ್ಲುವ ಕನಸು ಕಮರಿತು. ಬಳಿಕ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ಸ್ಪೇನ್ ವಿರುದ್ಧ 2-1 ಗೋಲುಗಳ ಅಂತದಿಂದ ವಿಜಯ ಸಾಧಿಸಿ ಪದಕವನ್ನು ಮುಡಿಗೇರಿಸಿಕೊಂಡಿತು. ಒಲಿಂಪಿಕ್​ನಲ್ಲಿ ಭಾರತ ಕಂಚಿನ ಪದಕ ಜಯಿಸಿದ್ದು ಇದು ನಾಲ್ಕನೇ ಬಾರಿಯಾಗಿದೆ.

ಇದನ್ನೂ ಓದಿ:ಒಲಿಂಪಿಕ್​​ನಲ್ಲಿ 300ನೇ ಚಿನ್ನದ ಪದಕ ಗೆದ್ದ ಚೀನಾ: ಇತಿಹಾಸದಲ್ಲಿ ಹೆಚ್ಚು ಬಂಗಾರ ಗೆದ್ದ ದೇಶ ಯಾವುದು? - most gold medals in olympics

ABOUT THE AUTHOR

...view details