ದಂಬುಲ್ಲಾ (ಶ್ರೀಲಂಕಾ): ಇಲ್ಲಿನ ರಂಗಿ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹಿಳಾ ಏಷ್ಯಾಕಪ್ 'ಎ' ಗುಂಪಿನ 5ನೇ ಪಂದ್ಯದಲ್ಲಿ ಯುಎಇ ವಿರುದ್ಧ ಟೀಂ ಇಂಡಿಯಾ 78 ರನ್‌ಗಳಿಂದ ಭರ್ಜರಿ ಗೆಲವು ಸಾಧಿಸಿದೆ. ಈ ಗೆಲುವಿನೊಂದಿಗೆ ಸೆಮಿಫೈನಲ್ಗೂ ಪ್ರವೇಶ ಪಡೆದಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಹಾಲಿ ಚಾಂಪಿಯನ್ ಭಾರತದ ವನಿತೆಯರು, ಯುಎಇ ಬೌಲರ್‌ಗಳ ಸವಾರಿ ಮಾಡಿ T20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೊದಲ ಬಾರಿಗೆ 201 ರನ್ ಸಿಡಿಸುವ ಮೂಲಕ ದಾಖಲೆ ಬರೆದರು. ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್ನಲ್ಲೂ ಉತ್ತಮ ಪ್ರದರ್ಶನ ತೋರಿ ಯುಎಇ ತಂಡವನ್ನು ಕೇವಲ 123ರನ್ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಜಯ ಗಳಿಸಿದರು.
ಭಾರತದ ಪರ ನಾಯಕಿ ಹರ್ಮನ್ ಪ್ರೀತ್ ಕೌರ್ ಭರ್ಜರಿ ಬ್ಯಾಟ್ ಬೀಸಿ ಅರ್ಧಶತಕ ಪೂರೈಸಿದರು. 47 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೊಂದಿಗೆ 66ರನ್ಗಳನ್ನು ಕಲೆಹಾಕಿ ತಂಡದ ಹೈಸ್ಕೋರರ್ ಎನಿಸಿಕೊಂಡರು. ಮತ್ತೊಂದೆಡೆ ರಿಚಾ ಘೋಷ್ ಕೂಡ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಅರ್ಧಶತಕ ಸಿಡಿಸಿದರು. 29 ಎಸೆತಗಳನ್ನು ಎದುರಿಸಿದ ಘೋಷ್ 12 ಬೌಂಡರಿ 1 ಸಿಕ್ಸರ್ ಸಮೇತ 64 ರನ್ ಚಚ್ಚಿದರು. ಉಳಿದಂತೆ ಶೆಫಾಲಿ ವರ್ಮಾ (37), ಸ್ಮೃತಿ ಮಂಧಾನ (13), ರೋಡ್ರಿಗಾಸ್ ತಂಡಕ್ಕೆ ರನ್ ಕೊಡುಗೆ ನೀಡಿದರು. (66) ಅವರ ಆಕರ್ಷಕ ಅರ್ಧ ಶತಕದ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗೆ 5 ವಿಕೆಟ್ ಕಳೆದುಕೊಂಡು 201 ರನ್ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತ್ತು.