ಹೈದರಾಬಾದ್: ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಇಂದಿನಿಂದ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸುತ್ತಿದೆ. ಈ ಬಾರಿ ವಿಶ್ವಕಪ್ ಎತ್ತಿಹಿಡಿಯುವ ವಿಶ್ವಾಸದೊಂದಿಗೆ ಹರ್ಮನ್ ಪ್ರೀತ್ ಬಳಗ ಕಣಕ್ಕಿಳಿಯುತ್ತಿದೆ. ಬ್ಯಾಟಿಂಗ್, ಬೌಲಿಂಗ್ ಎಲ್ಲ ವಿಭಾಗಗಳಲ್ಲೂ ಕಿವೀಸ್ ಪ್ರಬಲವಾಗಿದ್ದು ಭಾರತಕ್ಕೆ ಪೈಪೋಟಿ ನೀಡುವ ನಿರೀಕ್ಷೆ ಇದೆ.
ಮುಖಾಮುಖಿ:ಟಿ20ಯಲ್ಲಿ ಉಭಯ ತಂಡಗಳು ಇದುವರೆಗೆ 13 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ನ್ಯೂಜಿಲೆಂಡ್ 9 ಪಂದ್ಯಗಳಲ್ಲಿ ಗೆದ್ದು ಪ್ರಾಬಲ್ಯ ಸಾಧಿಸಿದೆ.
ಸ್ಥಳ:ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ.
ಸಮಯ:ಸಂಜೆ 7:30ಕ್ಕೆ
ನೇರಪ್ರಸಾರ:ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಆ್ಯಪ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.
ಸಂಭಾವ್ಯ ತಂಡಗಳು-ಭಾರತ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿ.ಕೀ), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಶ್ರೇಯಾಂಕಾ ಪಾಟೀಲ್, ಅರುಂಧತಿ ರೆಡ್ಡಿ, ರಾಧಾ ಯಾದವ್, ರೇಣುಕಾ ಠಾಕೂರ್ ಸಿಂಗ್, ಹೇಮಲತಾ, ಸಜನಾ, ಯಾಸ್ತಿಕಾ ಭಾಟಿಯಾ, ಆಶಾ ಸೋಭಾನ
ನ್ಯೂಜಿಲೆಂಡ್:ಸುಜಿ ಬೇಟ್ಸ್, ಅಮೆಲಿಯಾ ಕೆರ್, ಸೋಫಿ ಡಿವೈನ್ (ನಾಯಕಿ), ಬ್ರೂಕ್ ಹ್ಯಾಲಿಡೇ, ಮ್ಯಾಡಿ ಗ್ರೀನ್, ಇಸಾಬೆಲ್ಲಾ ಗೇಜ್ (ವಿ.ಕೀ), ಹನ್ನಾ ರೋವ್, ರೋಸ್ಮರಿ ಮೈರ್, ಈಡನ್ ಕಾರ್ಸನ್, ಫ್ರಾನ್ ಜೊನಾಸ್, ಲೀ ತಹುಹು, ಲೀ ಕಾಸ್ಪರೆಕ್, ಜೆಸ್ ಕೆರ್, ಮೊಲ್ಲಿ ಪೆನ್‌ಫೋಲ್ಡ್, ಜಾರ್ಜಿಯಾ ಪ್ಲಿಮರ್
ಇದನ್ನೂ ಓದಿ:ಕ್ರಿಕೆಟ್ನಲ್ಲಿ ಅಂಪೈರ್ ಆಗುವುದು ತುಂಬಾ ಸುಲಭ: ಈ ಕ್ವಾಲಿಟಿ ಇದ್ದರೆ ನೀವೂ ಟ್ರೈಮಾಡಿ! - How to Become an umpire