ಕರ್ನಾಟಕ

karnataka

ETV Bharat / sports

2ನೇ ಟೆಸ್ಟ್: ಟಾಸ್​ ಸೋತು ಇಂಗ್ಲೆಂಡ್​ ಬೌಲಿಂಗ್; ಭಾರತ ಪರ ಪಾಟಿದಾರ್​ ಪಾದಾರ್ಪಣೆ​ - ವಿಶಾಖಪಟ್ಟಣಂನ ಎರಡನೇ ಟೆಸ್ಟ್

India vs England second Test: ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಇಂದಿನಿಂದ ಎರಡನೇ ಕ್ರಿಕೆಟ್‌ ಟೆಸ್ಟ್ ನಡೆಯುತ್ತಿದ್ದು, ಭಾರತ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದೆ.

ಭಾರತ ಮತ್ತು ಇಂಗ್ಲೆಂಡ್​ ಎರಡನೇ ಟೆಸ್ಟ್​
ಭಾರತ ಮತ್ತು ಇಂಗ್ಲೆಂಡ್​ ಎರಡನೇ ಟೆಸ್ಟ್​

By PTI

Published : Feb 2, 2024, 9:17 AM IST

ವಿಶಾಖಪಟ್ಟಣಂ(ಅಂಧ್ರ ಪ್ರದೇಶ):ಭಾರತ ಮತ್ತು ಇಂಗ್ಲೆಂಡ್​ ನಡುವಿನ ಎರಡನೇ ಕ್ರಿಕೆಟ್‌ ಟೆಸ್ಟ್​ ಪಂದ್ಯ ಆರಂಭವಾಗಿದೆ. ವಿಶಾಖಪಟ್ಟಣಂನ ಡಾ.ವೈ.ಎಸ್.ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ. ಟಾಸ್​ ಗೆದ್ದ ಭಾರತ ತಂಡದ ನಾಯಕ ರೋಹಿತ್​ ಶರ್ಮಾ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದು, ಇಂಗ್ಲೆಂಡ್​ ತಂಡವನ್ನು ಬೌಲಿಂಗ್​ಗೆ ಆಹ್ವಾನಿಸಿದ್ದಾರೆ.

ಹೈದರಾಬಾದ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಗೆಲ್ಲುವ ಸನಿಹ ಬಂದು ಪಂದ್ಯ ಕೈ ಚೆಲ್ಲಿರುವ ಟೀಮ್​ ಇಂಡಿಯಾ, ಎರಡನೇ ಟೆಸ್ಟ್​ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಆಂಗ್ಲರು ಮೊದಲ ಟೆಸ್ಟ್​ ಗೆದ್ದಿರುವ ಉತ್ಸಾಹದಲ್ಲಿ ಕಣಕ್ಕಿಳಿದಿದ್ದಾರೆ. ಎರಡನೇ ಟೆಸ್ಟ್​ ಗೆದ್ದು ಸರಣಿ ಸಮಬಲ ಸಾಧಿಸುವ ಲೆಕ್ಕಾಚಾರದಲ್ಲಿ ನಾಯಕತ್ವದ ಜವಾಬ್ದಾರಿಯನ್ನು ರೋಹಿತ್​ ಶರ್ಮಾ ಹೊತ್ತುಕೊಂಡಿದ್ದಾರೆ.

ಎರಡನೇ ಟೆಸ್ಟ್​ನಲ್ಲಿ ಇಂಗ್ಲೆಂಡ್​ ಸ್ಪಿನ್ನರ್​ ಶೋಯೆಬ್ ಬಶೀರ್ ಮತ್ತು ವೇಗದ ಬೌಲರ್​ ಜೇಮ್ಸ್ ಆ್ಯಂಡರ್ಸನ್ ಅವರನ್ನು ತಂಡ ಕರೆತಂದಿದೆ. ಇತ್ತ ಟೀಮ್​ ಇಂಡಿಯಾ ಪರ ಯುವ ಆಟಗಾರ ರಜತ್​ ಪಾಟಿದಾರ್​ ಪಾದಾರ್ಪಣೆ ಪಂದ್ಯವಾಡುತ್ತಿದ್ದಾರೆ. ಭಾರತಕ್ಕೆ ಇಬ್ಬರು ಅನುಭವಿ ಆಟಗಾರರ ಅನುಪಸ್ಥಿತಿ ಕಾಡುತ್ತಿದೆ. ಆಲ್‌ರೌಂಡರ್​ ರವೀಂದ್ರ ಜಡೇಜಾ ಮತ್ತು ಬ್ಯಾಟರ್​ ಕೆ.ಎಲ್.ರಾಹುಲ್ ಗಾಯಕ್ಕೆ ತುತ್ತಾಗಿ ದೂರ ಉಳಿದಿದ್ದಾರೆ.

ತಂಡಗಳು ಹೀಗಿವೆ-ಭಾರತ:ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್ (ವಿ.ಕೀ), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮುಕೇಶ್ ಕುಮಾರ್, ಕುಲದೀಪ್ ಯಾದವ್

ಇಂಗ್ಲೆಂಡ್​:ಝಾಕ್ ಕ್ರಾಲಿ, ಬೆನ್ ಡಕೆಟ್, ಓಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿ.ಕೀ), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲೆ, ಶೋಯೆಬ್ ಬಶೀರ್, ಜೇಮ್ಸ್ ಆ್ಯಂಡರ್ಸನ್

ಇದನ್ನೂ ಓದಿ:ಟೀಂ ಇಂಡಿಯಾ ಬ್ಯಾಟರ್​ಗಳು ಉತ್ತಮ ​ಸ್ವೀಪ್ ಶಾಟ್​ಗಳನ್ನು ಆಡಬಲ್ಲರು: ಶ್ರೀಕರ್​ ​ಭರತ್

ABOUT THE AUTHOR

...view details